ಮೇ 20-21ರಂದು ರಾಜ್ಯುಟ್ಟದ ವಕೀಲರ ಯಕ್ಷಗಾನ ಸ್ಪರ್ಧೆ
ಉಡುಪಿ, ಮೇ 11: ಉಡುಪಿ ವಕೀಲರ ಸಂಘದ ವತಿಯಿಂದ ರಾಜ್ಯ ಮಟ್ಟದ ವಕೀಲರ ಯಕ್ಷಗಾನ ಸ್ಪರ್ಧೆ ‘ಯಕ್ಷ ಕಲಾ ವೈಭವ-2019’ನ್ನು ಮೇ 20 ಮತ್ತು 21ರಂದು ಉಡುಪಿಯ ಪುರಭವನದಲ್ಲಿ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಬೆಳ್ತಂಗಡಿ, ಮಂಗಳೂರು, ಪುತ್ತೂರು, ಧಾರವಾಡ, ಹೊನ್ನಾ ವರ, ಕುಂದಾಪುರ, ಕಾರವಾರ ಸೇರಿದಂತೆ ಒಟ್ಟು 8 ತಂಡಗಳು ಈಗಾಗಲೇ ನೊಂದವಾಣೆ ಮಾಡಿಕೊಂಡಿವೆ ಎಂದು ಯಕ್ಷ ಕಲಾ ವೈಭವದ ಅಧ್ಯಕ್ಷ ವಿಜಯ ಹೆಗ್ಡೆ ಸಂಘದ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ಪರ್ಧೆಯನ್ನು ಮೇ 20ರಂದು ಬೆಳಗ್ಗೆ 9ಗಂಟೆಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಉದ್ಘಾಟಿಸಲಿರುವರು. 21ರಂದು ಸಂಜೆ 6.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ. ರಘುಪತಿ ಭಟ್ ವಹಿಸಲಿರುವರು. ಸ್ಪರ್ಧೆಯ ವಿಜೇತರಿಗೆ ಪಾರಿತೋಷಕ ನೀಡಿ ಗೌರವಿಸಲಾಗುವುದು. ಐದು ವೈಯಕ್ತಿಕ ಬಹುಮಾನ ನೀಡಲಾಗುವುದು.
ತಂಡವು ಯಾವುದೇ ಪೌರಾಣಿಕ ಪ್ರಸಂಗವನ್ನು ಪ್ರದರ್ಶಿಸಬಹುದು. ಯಕ್ಷ ಗಾನ ಪ್ರದರ್ಶನದ ಕಾಲಾವಧಿ ಎರಡು ಗಂಟೆ. ಈ ಕಾರ್ಯಕ್ರಮಕ್ಕೆ ಒಟ್ಟು 4ಲಕ್ಷ ರೂ. ಖರ್ಚು ಅಂದಾಜಿಸಲಾಗಿದೆ ಎಂದು ಅವು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಶ್ರೀಪತಿ ಆಚಾರ್ಯ, ಕಾರ್ಯ ದರ್ಶಿ ಸಂತೋಷ್ ಹೆಬ್ಬಾರ್, ವೈಭವದ ಉಪಾಧ್ಯಕ್ಷ ಗಣೇಶ್ ಕುಮಾರ್, ಕಾರ್ಯದರ್ಶಿ ಉದಯ ಕುಮಾರ್ ಎಂ., ಕೋಶಾಧಿಕಾರಿ ಮೋಹನ್‌ದಾಸ್ ಪೈ, ಪ್ರಚಾರ ಸಮಿತಿ ಅಧ್ಯಕ್ಷ ಅಸದುಲ್ಲಾ ಕಟಪಾಡಿ, ಬಿ.ನಾಗರಾಜ್, ಸತೀಶ್ ಉಪಸ್ಥಿತರಿದ್ದರು.







