ಪಾಕ್: ಹೊಟೇಲ್ಗೆ ಉಗ್ರರ ಲಗ್ಗೆ; ಕನಿಷ್ಠ ಒಂದು ಸಾವು
ಇಸ್ಲಾಮಾಬಾದ್, ಮೇ 11: ಪಾಕಿಸ್ತಾನದ ಗ್ವಾಡರ್ ಬಂದರು ನಗರದಲ್ಲಿರುವ ‘ಪರ್ಲ್ ಕಾಂಟಿನೆಂಟಲ್’ ಪಂಚತಾರಾ ಹೊಟೇಲೊಂದಕ್ಕೆ ಶನಿವಾರ ಭಾರೀ ಶಸ್ತ್ರಸಜ್ಜಿತ ಮೂವರು ಉಗ್ರರು ನುಗ್ಗಿದ್ದಾರೆ.
ಭದ್ರತಾ ಪಡೆಗಳು ಭಯೋತ್ಪಾದಕರೊಂದಿಗೆ ಗುಂಡಿನ ಕಾಳಗದಲ್ಲಿ ತೊಡಗಿದ್ದು, ಕನಿಷ್ಠ ಓರ್ವ ವ್ಯಕ್ತಿ ಹತರಾಗಿದ್ದಾರೆ.
ಹೊಟೇಲ್ನಲ್ಲಿದ್ದ ಅತಿಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
‘‘ಭಯೋತ್ಪಾದಕರನ್ನು ಮೆಟ್ಟಿಲಿನಲ್ಲಿ ಭದ್ರತಾ ಪಡೆಗಳು ಸುತ್ತುವರಿದಿದ್ದಾರೆ. ಉಗ್ರ ನಿರ್ಮೂಲನಾ ಕಾರ್ಯಕ್ರಮ ಪ್ರಗತಿಯಲ್ಲಿದೆ’’ ಎಂದರು.
Next Story