ಅಮೆರಿಕ: ಭಾರತ ಮೂಲದ ವೈದ್ಯನಿಗೆ 9 ವರ್ಷ ಜೈಲು

ನ್ಯೂಯಾರ್ಕ್, ಮೇ 11: ಚಿಕಿತ್ಸೆಯಲ್ಲಿ ವಂಚನೆ ಮಾಡಿರುವುದಕ್ಕಾಗಿ ಹಾಗೂ ಪ್ರಿಸ್ಕ್ರಿಪ್ಶನ್ ನೋವು ಶಮನ ಗುಳಿಗೆಗಳನ್ನು ಅಕ್ರಮವಾಗಿ ವಿತರಣೆ ಮಾಡಿರುವುದಕ್ಕಾಗಿ ಭಾರತ ಮೂಲದ ವೈದ್ಯರೊಬ್ಬರಿಗೆ ಅಮೆರಿಕದ ನ್ಯಾಯಾಲಯವೊಂದು ಒಂಬತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ನ್ಯೂಮೆಕ್ಸಿಕೊ ರಾಜ್ಯದ ಲಾಸ್ ಕ್ರೂಸಸ್‌ನ ಫೆಡರಲ್ ನ್ಯಾಯಾಲಯವೊಂದು ಮಾಜಿ ವೈದ್ಯ 66 ವರ್ಷದ ಪವನ್‌ಕುಮಾರ್ ಜೈನ್‌ಗೆ ಒಂಬತ್ತು ವರ್ಷಗಳ ಕಾರಾಗೃಹ ವಾಸ ಮತ್ತು ಮೂರು ವರ್ಷಗಳ ‘ನಿಗಾ ಜೀವನ’ವನ್ನು ವಿಧಿಸಿತು ಎಂದು ಅಮೆರಿಕದ ಅಟಾರ್ನಿ ಜಾನ್ ಆ್ಯಂಡರ್‌ಸನ್ ತಿಳಿಸಿದರು.
ನಿಯಂತ್ರಿತ ಔಷಧಿಯನ್ನು ಅಕ್ರಮವಾಗಿ ವಿತರಿಸಿರುವುದನ್ನು ಹಾಗೂ ಚಿಕಿತ್ಸೆಯಲ್ಲಿ ವಂಚನೆ ಮಾಡಿರುವುದನ್ನು ಪವನ್‌ಕುಮಾರ್ ಜೈನ್ 2016 ಫೆಬ್ರವರಿಯಲ್ಲಿ ಒಪ್ಪಿಕೊಂಡಿದ್ದರು.
Next Story





