ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ವ್ಯಕ್ತಿಯ ಬಂಧನ, 65 ಸಾವಿರ ನಗದು ಜಪ್ತಿ

ಬೆಂಗಳೂರು, ಮೇ 11: ಐಪಿಎಲ್ ಕ್ರಿಕೆಟ್ ಸಂಬಂಧ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅತ್ತಿಬೆಲೆ ಠಾಣೆ ಪೊಲೀಸರು ಬಂಧಿಸಿ, 65 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.
ಅತ್ತಿಬೆಲೆ ಹೋಬಳಿಯ ಬಿದರಗುಪ್ಪೆ ಗ್ರಾಮದ ಭರತ್(38) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಬಿದರಗುಪ್ಪೆ ಗ್ರಾಮದಲ್ಲಿ ಭರತ್ ಎಂಬಾತ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ 7:30ರ ಸುಮಾರಿನಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 7 ಮೊಬೈಲ್, ನಗದು ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ.
Next Story





