ಮಂಗಳೂರು: ಸೂಫಿಖಾನ್ ಝಹುರಾ ನಿಧನ
ಮಂಗಳೂರು, ಮೇ 12: ನಗರದ ಬಂದರ್‌ನಲ್ಲಿ ಹಾರ್ಡ್‌ವೇರ್ ಉದ್ಯಮದಲ್ಲಿ ಪ್ರಸಿದ್ಧರಾಗಿದ್ದ ಸೂಫಿಖಾನ್ ಕುಟುಂಬದ ದಿ. ಹಾಜಿ ಎಂ.ಕೆ. ಮಿಕ್ದಾದ್ ಅವರ ಪತ್ನಿ ಝಹುರಾ ಅವರು ರವಿವಾರ ಪೂರ್ವಾಹ್ನ 11:30ಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸೂಫಿಖಾನ್ ಕುಟುಂಬದ ಹಿರಿಯ ಸದಸ್ಯೆಯಾಗಿದ್ದ ಝಹುರಾ ಅಪಾರ ಧರ್ಮನಿಷ್ಠೆಯುಳ್ಳವರಾಗಿದ್ದರು ಮತ್ತು ಕುಟುಂಬವಲ್ಲದೆ ಆಸುಪಾಸಿನ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಝಹುರಾ ಅವರು ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಖ್ಯಾತ ಉದ್ಯಮಿ ಮನ್ಸೂರ್ ಅಹ್ಮದ್ ಆಝಾದ್ ಸಹಿತ ಮೂವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ರವಿವಾರ ರಾತ್ರಿ ತರಾವೀಹ್ ನಮಾಝ್ ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story





