Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಾಲಕೋಟ್ ದಾಳಿ: ನಿರೀಕ್ಷಿತ ಫಲಿತಾಂಶ...

ಬಾಲಕೋಟ್ ದಾಳಿ: ನಿರೀಕ್ಷಿತ ಫಲಿತಾಂಶ ಸಿಗದೇ ಇರಲು ಪ್ರಧಾನಿ ಆದೇಶವೇ ಕಾರಣವೆ ?

ವಾರ್ತಾಭಾರತಿವಾರ್ತಾಭಾರತಿ12 May 2019 4:32 PM IST
share
ಬಾಲಕೋಟ್ ದಾಳಿ: ನಿರೀಕ್ಷಿತ ಫಲಿತಾಂಶ ಸಿಗದೇ ಇರಲು ಪ್ರಧಾನಿ ಆದೇಶವೇ ಕಾರಣವೆ ?

ಬಾಲಕೋಟ್ ವಾಯುದಾಳಿಯನ್ನು ಮೋಡ ಕವಿದ , ದಾಳಿಗೆ ಸೂಕ್ತವಲ್ಲದ ವಾತಾವರಣದಲ್ಲಿ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆದೇಶ ನೀಡಿದ್ದು ಹೌದು ಎಂದಾದರೆ ಇದೇ ಆ ದಾಳಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗದಿರಲು ಕಾರಣವಾಗಿರಬಹುದು ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ. 

ಈ ಬಗ್ಗೆ ವಿಶೇಷ ವರದಿ ಮಾಡಿರುವ ಎನ್ ಡಿ ಟಿ ವಿ ಹಿರಿಯ ಪತ್ರಕರ್ತ ಹಾಗು ರಕ್ಷಣಾ ವಿಷಯಗಳ ತಜ್ಞ ವಿಷ್ಣು ಸೋಮ್ ಅವರು ಪ್ರಧಾನಿಯವರೇ ಹೇಳಿರುವಂತೆ ಮೋಡ ಕವಿದ ವಾತಾವರಣದಲ್ಲೂ ದಾಳಿ ನಡೆಸಲು ಅವರು ಹೇಳಿದ್ದರೆ ಅದು ದೇಶದ ಪಾಲಿಗೆ ನಷ್ಟ ತಂದಿರುವುದು ಖಚಿತ ಎಂದು ಹೇಳಿದ್ದಾರೆ. 

ಈ ಬಗ್ಗೆ ಅವರು ನೀಡಿರುವ ವಿವರಣೆ ಇಲ್ಲಿದೆ : 

ಬಾಲಕೋಟ್ ದಾಳಿಯಲ್ಲಿ ಒಟ್ಟು ಹನ್ನೆರಡು ಮಿರಾಜ್ 2000 ಫೈಟರ್ ವಿಮಾನಗಳನ್ನು ಬಳಸಲಾಗಿತ್ತು. ಅವುಗಳಲ್ಲಿ ಹನ್ನೆರಡು ದಾಳಿ ಕ್ಷಿಪಣಿ ಶಸ್ತ್ರಾಸ್ತ್ರಗಳಿದ್ದವು. ಆ ಪೈಕಿ ಆರು ಕ್ರಿಸ್ಟಲ್ ಮೇಜ್ಹ್ ಎಂಬ ಇಸ್ರೇಲಿ ಕ್ಷಿಪಣಿಗಳಿದ್ದವು. ಉಳಿದ ಆರು ಸ್ಪೈಸ್ 2000 ಎಂಬ ಕ್ಷಿಪಣಿಗಳು. ಈ ಸ್ಪೈಸ್ 2000 ಕ್ಷಿಪಣಿ ದಾಳಿ ಮಾಡಿ ಅದರ ಗುರಿಗೆ ಹೊಡೆದಿದೆ. ಈ ಕ್ಷಿಪಣಿಯ ದಾಳಿಯಿಂದ ಶತ್ರುಗಳಿಗೆ ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ಬೇರೆ ಬೇರೆ ಉತ್ತರಗಳಿವೆ. ಆದರೆ ಇದು ತನ್ನ ಗುರಿಗಳಿಗೆ ಹೊಡೆದಿದೆ ಎಂಬುದು ಮಾತ್ರ ಸತ್ಯ. ಆದರೆ ನಿಜವಾಗಿ ಭಾರತಕ್ಕೆ ಬೇಕಾಗಿದ್ದಿದ್ದು ಇದಲ್ಲ. ಭಾರತದ ಮುಖ್ಯ ಉದ್ದೇಶ ಇದ್ದಿದ್ದು ಇಸ್ರೇಲಿ ಕ್ಷಿಪಣಿ ಕ್ರಿಸ್ಟಲ್ ಮೇಜ್ಹ್ ಮೂಲಕ ದಾಳಿ ನಿಖರ ಗುರಿಗೆ ಹೊಡೆಯಬೇಕು ಎಂಬುದು. ಈ ಕ್ರಿಸ್ಟಲ್ ಮೇಜ್ಹ್ ಕ್ಷಿಪಣಿ ತಾನು ದಾಳಿ ಮಾಡಿ ನಾಶ ಮಾಡುವ ಗುರಿಯ ಸಂಪೂರ್ಣ ನೇರ ವಿಡಿಯೋ ಪ್ರಸಾರವನ್ನೂ ತೋರಿಸುತ್ತದೆ.  ಆದರೆ ಈ ಆರರ ಪೈಕಿ ಒಂದೇ ಒಂದು ಕ್ಷಿಪಣಿ ಕೂಡ ಅಂದು ದಾಳಿ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಭಾರತಕ್ಕೆ ದಾಳಿಯ ನೇರ ವಿಡಿಯೋ ದೃಶ್ಯಗಳು ಸಿಗಲಿಲ್ಲ. ಇದಕ್ಕೆ ಕಾರಣ ಮೋಡ ಕವಿದ ವಾತಾವರಣ ಎಂದು ಹೇಳಲಾಗಿತ್ತು. ಈಗ ಅದನ್ನು ಸ್ವತಃ ಪ್ರಧಾನಿಯವರೇ ಒಪ್ಪಿಕೊಂಡಿದ್ದಾರೆ. 

ಹಾಗಾಗಿ ಇದು ಕೇವಲ ಪ್ರಧಾನಿ ಮೋಡ ಹಾಗು ರೇಡಾರ್ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಂಡಿದ್ದಾರೆಯೇ ಎಂಬ ಚರ್ಚೆಗೆ ಸೀಮಿತವಲ್ಲ. ಪ್ರಧಾನಿಯವರೇ ಮೋಡ ಕವಿದ ವಾತಾವರಣದಲ್ಲಿ ದಾಳಿಗೆ ಆದೇಶ ನೀಡಿದೆವು ಎಂದು ಹೇಳಿದ್ದಾರೆ.  ಕಳೆದ 48 ವರ್ಷಗಳಲ್ಲಿ ಭಾರತ ಮಾಡಿರುವ ಪ್ರಪ್ರಥಮ ವಾಯುದಾಳಿಯ ಮೇಲೆ ಈ ಆದೇಶ ಪ್ರತಿಕೂಲ ಪರಿಣಾಮ ಬೀರಿರುವುದು ಖಚಿತ. ಏಕೆಂದರೆ ಈ ಕ್ಷಿಪಣಿಗಳನ್ನು ಸರಿಯಾದ ಬೆಳಕಿಲ್ಲದ ಮೋಡ ಕವಿದ ವಾತಾವರಣದಲ್ಲಿ ಹಾರಿಸುವುದು ಸಾಧ್ಯವಿಲ್ಲ ಎಂದು ವಿಷ್ಣು ಸೋಮ್ ಹೇಳಿದ್ದಾರೆ.  

ಇನ್ನು ವಾಯುದಾಳಿಯ ಸಂದರ್ಭದಲ್ಲಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಕೇಂದ್ರ ಹೇಳಿತ್ತು. ಆದರೆ ಈಗ ಅದು ಹಾಗಾಗಿರಲಿಲ್ಲ ಎಂಬುದು ಇಲ್ಲಿ ಸಾಬೀತಾಗಿದೆ. ನಿಜವಾಗಿಯೂ ಪ್ರಧಾನಿಯವರೇ ಇಂತಹ ಆದೇಶ ನೀಡಿದ್ದರೆ ದಾಳಿಗೆ ಕೇಂದ್ರ ಆದೇಶ ನೀಡಿದ ಮೇಲೆ ದಾಳಿ ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಂಬ ನಿರ್ಧಾರಗಳನ್ನು ಸೇನೆ ತನ್ನ ಅನುಭವ ಹಾಗು ಪರಿಣತಿ ಮೇಲೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಕೇಂದ್ರ ಮೂಗು ತೂರಿಸಿದೆ. ಇದು ಸೇನೆಯ ಕಾರ್ಯಾಚರಣೆ ಸ್ವಾತಂತ್ರ್ಯದಲ್ಲಿ ಕೇಂದ್ರದ ಹಸ್ತಕ್ಷೇಪ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗುವುದು ಸೇನಾ ಕಾರ್ಯಾಚರಣೆಯಲ್ಲಿ ಸರಿಯಲ್ಲ ಎಂದು ವಿಷ್ಣು ವಿವರಿಸಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X