ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ವಿಶ್ವ ತಾಯಂದಿರ, ದಾದಿಯರ ದಿನಾಚರಣೆ

ಉಡುಪಿ, ಮೇ 12: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ಮಳಿಗೆಯಲ್ಲಿ ವಿಶ್ವ ತಾಯಂದಿರ ಹಾಗೂ ದಾದಿಯರ ದಿನವನ್ನು ರವಿವಾರ ಆಚರಿಸಲಾಯಿತು.
ದಾದಿಯರ ದಿನಾಚರಣೆಯ ಪ್ರಯುಕ್ತ ಹಿರಿಯ ದಾದಿಯರಾದ ಉಡುಪಿ ಸರಕಾರಿ ಆಸ್ಪತ್ರೆಯ ಶೈಲಾ ದೇವಾಡಿಗ, ಹೆಬ್ರಿಯ ಜಯಲಕ್ಷ್ಮೀ ಹಾಗೂ ಕಾರ್ಕಳದ ಗೋಪಿ ಅವರನ್ನು ಸನ್ಮಾನಿಸಲಾಯಿತು.
ಉಡುಪಿ ಜಿಪಂ ಸದಸ್ಯ ಗೀತಾಂಜಲಿ ಸುವರ್ಣ ಮಾತನಾಡಿ, ದಾದಿಯರು ರೋಗಿಗಳಿಗೆ ಔಷಧಿಗಿಂತ ಹೆಚ್ಚು ಪ್ರೀತಿ ತೋರಿಸಿದರೆ ಶೀಘ್ರವೇ ರೋಗ ಗುಣ ಮುಖವಾಗುತ್ತದೆ. ದಾದಿಯರು ರೋಗಿಗಳಿಗೆ ಮಾನಸಿಕ ಸ್ಥೈರ್ಯ ತೋರಿ ಸುವ ಕಾರ್ಯ ಮಾಡುತ್ತಾರೆ. ದಾದಿಯರ ವೃತ್ತಿಯಲ್ಲಿ ಸಿಗುವ ತೃಪ್ತಿ ಬೇರೆ ಯಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ ಎಂದು ತಿಳಿಸಿದರು.
ಮಲಬಾರ್ ಗೋಲ್ಡ್ ಉಡುಪಿ ಮಳಿಗೆಯ ಮುಖ್ಯಸ್ಥ ಹಫಿಝ್ ರೆಹ ಮಾನ್ ಮಾತನಾಡಿ, ಜನ್ಮ ನೀಡಿದ ತಾಯಿ ಹಾಗೂ ಅನಾರೋಗ್ಯ ಪೀಡಿತ ರಾದಾಗ ತಾಯಿಯಂತೆ ಸೇವೆ ನೀಡುವ ದಾದಿಯರ ದಿನಾಚರಣೆ ಒಂದೇ ದಿನ ಬಂದಿರುವುದು ಅವರ ಇಬ್ಬರ ಸೇವೆಯೂ ಒಂದೇ ಎಂಬುದನ್ನು ತೋರಿ ಸುತ್ತದೆ ಎಂದು ಹೇಳಿದರು.
ತಾಯಂದಿರ ದಿನಾಚರಣೆಯ ಪ್ರಯುಕ್ತ ತಾಯಂದಿರೆಲ್ಲ ಸೇರಿ ಕೇಕ್ ಕತ್ತರಿಸಿದರು. ಮುಖ್ಯ ಅತಿಥಿಯಾಗಿ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾ ನಂದ ಒಳಕಾಡು ಹಾಗೂ ತಾರನಾಥ ಮೇಸ್ತ ಉಪಸ್ಥಿತರಿದ್ದರು. ಪಲ್ಲವಿ ಸಂತೋಷ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.










