Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಸಿಲಿಕಾನ್ ಸಿಟಿಯಲ್ಲಿ ರಮಝಾನ್ ಸಂಭ್ರಮ:...

ಸಿಲಿಕಾನ್ ಸಿಟಿಯಲ್ಲಿ ರಮಝಾನ್ ಸಂಭ್ರಮ: ಮಾರುಕಟ್ಟೆಗಳಲ್ಲಿ ಬೀಡುಬಿಟ್ಟಿರುವ ತಿಂಡಿ-ತಿನಿಸುಗಳ ಮಳಿಗೆಗಳು

►ದೇಶ-ವಿದೇಶಗಳ ಡ್ರೈ ಫ್ರೂಟ್ಸ್, 80 ಕ್ಕೂ ಅಧಿಕ ಬಗೆಯ ಖರ್ಜೂರಗಳ ಮಾರಾಟ

- ಬಾಬುರೆಡ್ಡಿ ಚಿಂತಾಮಣಿ- ಬಾಬುರೆಡ್ಡಿ ಚಿಂತಾಮಣಿ12 May 2019 9:05 PM IST
share
ಸಿಲಿಕಾನ್ ಸಿಟಿಯಲ್ಲಿ ರಮಝಾನ್ ಸಂಭ್ರಮ: ಮಾರುಕಟ್ಟೆಗಳಲ್ಲಿ ಬೀಡುಬಿಟ್ಟಿರುವ ತಿಂಡಿ-ತಿನಿಸುಗಳ ಮಳಿಗೆಗಳು

ಬೆಂಗಳೂರು, ಮೇ 12: ಮುಸ್ಲಿಮ್ ಸಮುದಾಯದ ಪವಿತ್ರ ಹಬ್ಬವಾದ ರಮಝಾನ್ ಮಾಸ ಆರಂಭಗೊಂಡಿದ್ದು, ನಗರದಾದ್ಯಂತ ಸಂಭ್ರಮದಿಂದ ಹಬ್ಬದ ಮಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೊಂದು ಕಡೆ ರಮಝಾನ್‌ ಪ್ರಯುಕ್ತ ಪ್ರಮುಖ ತಿಂಡಿ-ತಿನಿಸುಗಳೂ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಬೀಡುಬಿಟ್ಟಿದ್ದು, ಆಕರ್ಷಣಾ ಕ್ಷೇತ್ರಗಳಂತಾಗಿವೆ. ಬೆಂಗಳೂರಿನ ಶಿವಾಜಿನಗರದ ರಸೆಲ್ ಮಾರುಕಟ್ಟೆ, ಟ್ಯಾನರಿ ರಸ್ತೆ, ಆರ್.ಟಿ.ನಗರ, ಗುರಪ್ಪನ ಪಾಳ್ಯ, ಮೈಸೂರು ರಸ್ತೆ, ತಿಲಕ್ ನಗರ, ಕಲಾಸಿಪಾಳ್ಯ ಸೇರಿದಂತೆ ಹಲವು ಕಡೆಗಳಲ್ಲಿ ತಿಂಡಿ-ತಿನಿಸುಗಳ ಅಂಗಡಿಗಳು, ಖಾದ್ಯ ಪದಾರ್ಥಗಳ ಅಂಗಡಿಗಳನ್ನು ತೆರೆಯಲಾಗಿದ್ದು, ಭರ್ಜರಿ ವ್ಯಾಪಾರವಾಗುತ್ತಿದೆ.

ರಮಝಾನ್ ಮಾಸದಲ್ಲಿ ಹಲವು ಬಗೆಯ ತಿನಿಸುಗಳು ಬಾರಿ ಬೇಡಿಕೆಯನ್ನು ಪಡೆಯುತ್ತವೆ. ಅದರಂತೆಯೇ, ಮುಖ್ಯವಾದ ತಿನಿಸುಗಳಲ್ಲಿ ಒಂದಾದ ಖರ್ಜೂರಾ ಹಾಗೂ ವಿವಿಧ ದೇಶಗಳ ಹಣ್ಣುಗಳು ನಗರದ ರಸೆಲ್ ಮಾರುಕಟ್ಟೆಯಲ್ಲಿ ಬಿಡಾರ ಹೂಡಿದ್ದು ಸಾರ್ವಜನಿಕರನ್ನು ಸೆಳೆಯುತ್ತಿದೆ. ಇಲ್ಲಿನ ಒಂದು ಹಳೆಯ ಕಟ್ಟಡವನ್ನು ಹೋಲುವಂತಿದ್ದರೂ ಒಳಗಡೆ ದೇಶ-ವಿದೇಶದ ಹಣ್ಣುಗಳು, ವಿವಿಧ ಡ್ರೈ ಪ್ರೂಟ್ಸ್ ಕಾಣ ಸಿಗುತ್ತವೆ. ನಗರದ ವಿವಿಧ ಮಾರುಕಟ್ಟೆಗಳಲ್ಲಿ ಸುತ್ತಾಡಿದರೆ ಮಕ್ಕಾ - ಮದೀನ, ದಕ್ಷಿಣ ಆಫ್ರಿಕಾ, ಜೋರ್ಡಾನ್, ತುನೀಷಿಯನ್, ಇರಾನ್, ಒಮನ್, ಟರ್ಕಿ ಹೀಗೆ ವಿಶ್ವದ ಹಲವು ಭಾಗಗಳ ಬಗೆ ಬಗೆಯ ಖರ್ಜೂರಗಳು ಗ್ರಾಹಕರನ್ನು ಸೆಳೆಯುತ್ತಿದ್ದು, ರಮಝಾನ್ ಮಾಸ ಮುಗಿಯುವವರೆಗೂ ಮಾರಾಟಕ್ಕೆ ಸಿಗುತ್ತವೆ. ಕೇವಲ ಮುಸ್ಲಿಮ್ ಸಮುದಾಯವರಷ್ಟೇ ಅಲ್ಲದೆ, ವಿವಿಧ ಅನ್ಯ ಧರ್ಮದವರೂ ಇವುಗಳನ್ನು ಖರೀದಿ ಮಾಡುತ್ತಿದ್ದಾರೆ.

ಹಲವು ಮಾರುಕಟ್ಟೆಗಳಲ್ಲಿ ಎತ್ತ ಕಣ್ಣಾಡಿಸಿದರೂ ಸಮೋಸ, ಹಣ್ಣು- ಹಂಪಲುಗಳಿಂದ ಕೂಡಿರುವ ಅಂಗಡಿ, ಮಳಿಗೆಗಳು ಕಾಣುತ್ತವೆ. ಹಬ್ಬದ ಮಾಸವಾಗಿರುವುದರಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಭಾಂದವರು ಬರುತ್ತಾರೆ. ಆದರೆ, ಇಲ್ಲಿ ಮಾರಾಟ ಮಾಡುವ ಸಮೋಸಗಳನ್ನು ಕೇವಲ ಮುಸ್ಲಿಂ ಸಮುದಾಯವರು ಮಾತ್ರ ಖರೀದಿ ಮಾಡುವುದಿಲ್ಲ ಎಂಬುದು ರಮಝಾನ್ ಮಾಸದ ಒಂದು ವಿಶೇಷವಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ವಿಶ್ವದ ನಾನಾ ಭಾಗಗಳಿಂದ 80ಕ್ಕೂ ಹೆಚ್ಚು ಬಗೆಯ ಖರ್ಜೂರಗಳು ಆಗಮಿಸಿವೆ. ಪೌಷ್ಟಿಕಾಂಶ, ರುಚಿ, ಬಣ್ಣ ಹಾಗೂ ಗಾತ್ರದಲ್ಲಿ ಒಂದಕ್ಕಿಂತ ಒಂದು ಹೆಚ್ಚು ಎಂದು ಪೈಪೋಟಿ ನೀಡುತ್ತಿವೆ. ರಸೆಲ್ ಮಾರ್ಕೆಟ್ ನಲ್ಲಿನ ‘ಡೆಲಿಷಿಯಸ್ ಮಳಿಗೆ’ ಯಲ್ಲಿ ಸಿಗುತ್ತಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ಉಪಯೋಗವಾಗಲಿದೆ. ಜತೆಗೆ ಚಾಕಲೇಟ್ ವಿತ್ ಡೇಟ್ಸ್ ಮತ್ತು ಬಿಸ್ಕೆಟ್‌ಗಳೂ ಬಂದಿದ್ದು, ಮಕ್ಕಳನ್ನು ಹೆಚ್ಚು ಸೆಳೆಯುತ್ತಿವೆ.

ಬೆಂಗಳೂರುನಲ್ಲಿ ರಮಝಾನ್ ಹಬ್ಬ ಜೂ.5 ರಂದು ಆಚರಿಸಲಿದ್ದು, ಒಂದು ತಿಂಗಳು ಮುಂಚಿತವಾಗಿ ರೋಜಾ (ಉಪವಾಸ) ಆರಂಭವಾಗಿದೆ. ಅದರಂತೆ ಈ ಬಾರಿ ಮೇ 9 ರಿಂದ ರಮಝಾನ್ ಮಾಸ ಆರಂಭವಾಗಿದ್ದು, ಮುಸ್ಲಿಮರು ಸಡಗರ, ಸಂಭ್ರಮದಿಂದ ರೋಜಾ ಆಚರಣೆಯಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಉಪವಾಸ ಮುಗಿಯುವ ಸಮಯದಲ್ಲಿ ಇಲ್ಲಿನ ರಸೆಲ್ ಮಾರುಕಟ್ಟೆಯಲ್ಲಿ ಜಾತ್ರೆಯಂತೆ ಜನಜಂಗುಳಿ ತುಂಬಿ ತುಳುಕುತ್ತಿರುತ್ತದೆ. ಅಲ್ಲದೆ, ಬೆಳಗ್ಗೆಯಿಂದ ಸಂಜೆವರೆಗೂ ಅಗತ್ಯ ವಸ್ತುಗಳ ಖರೀದಿಗೆ ಮುಗಿಬೀಳುತ್ತಾರೆ.  

ರೋಜ ಆಚರಣೆ ವೇಳೆ ಸೂರ್ಯೋದಯಕ್ಕೆ ಮುನ್ನ ಊಟ ಮಾಡಿದರೆ ನಂತರ ಸೂರ್ಯಾಸ್ತ ಆಗುವವರೆಗೆ ಏನನ್ನೂ ಸೇವಿಸುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ದಿನಕ್ಕೆ 10-12 ಗಂಟೆ ಹೊಟ್ಟೆ ಖಾಲಿ ಇರುತ್ತದೆ. ಇದರಿಂದ ಗ್ಯಾಸ್ಟ್ರಿಕ್, ಅಸಿಡಿಟಿ ಶುರುವಾಗುತ್ತದೆ. ಇಂತಹ ಸಮಸ್ಯೆಗಳನ್ನು ಖರ್ಜೂರ ದೂರಮಾಡುತ್ತದೆ. ಹೀಗಾಗಿಯೇ ಸಂಜೆ ಉಪವಾಸ ಮುರಿಯುವ ಮುನ್ನ ಖರ್ಜೂರ ತಿಂದು ನಂತರ ಇತರೆ ತಿಂಡಿಗಳನ್ನು ತಿನ್ನುತ್ತಾರೆ. ಅರಬ್ ದೇಶಗಳಲ್ಲಿ ಅಜ್ವಾ ಕಿಂಗ್ ಡೇಟ್ಸ್ ತುಂಬಾ ಜನಪ್ರಿಯವಾಗಿದೆ. ಮೆಡ್‌ಜೂಲ್ ಡೇಟ್ಸ್ ಹೆಚ್ಚು ಸಿಹಿಯಾದ ತಿರುಳನ್ನು ಹೊಂದಿರುವ ದಕ್ಷಿಣ ಆಫ್ರಿಕಾದ ಖರ್ಜೂರವಾಗಿದೆ. ಅಲ್ಲದೆ ಇದು ಶುಗರ್ ರಹಿತವಾಗದ್ದು, ನೈಸರ್ಗಿಕ ಶಕ್ತಿಯುಕ್ತವಾದ ಹಣ್ಣಾಗಿರುವುದು ವಿಶೇಷವಾಗಿದೆ. ಆದುದರಿಂದ ನಿತ್ಯ ಎರಡು ಖರ್ಜೂರ ಹಾಗೂ ಒಂದು ಲೋಟ ಹಾಲು ಸೇವಿಸಿದರೆ ಸಾಕು ದೇಹಕ್ಕೆ ಹೆಚ್ಚು ಶಕ್ತಿ ಮತ್ತು ಚೈತನ್ಯ ಬರುತ್ತದೆ ಎಂದು ಸ್ಥಳೀಯ ಅಂಗಡಿಯ ಮಾಲಕ ಮುಹಮದ್ ಅಭಿಪ್ರಾಯಪಟ್ಟಿದ್ದಾರೆ.

ಚಾಕಲೇಟ್ ಕೋಟಿಂಗ್ ಡೇಟ್ಸ್/ಬಿಸ್ಕೆಟ್ಸ್: ಈ ಬಾರಿ ಘಮಘಮಿಸುವ ಚಾಕಲೇಟ್ ಕೋಟಿಂಗ್ ಟೇಟ್ಸ್, ರೋಸ್ ಫ್ಲೇವರ್, ಕೋಕನಟ್ ಫ್ಲೇವರ್, ಲೈಮ್ ಮಿಂಡ್ ಇತ್ಯಾದಿಗಳ ಖರ್ಜೂರಗಳು ಮತ್ತು ಬಿಸ್ಕತ್‌ಗಳೂ ಬಂದಿರುವುದು ಮಕ್ಕಳನ್ನು ಹೆಚ್ಚಾಗಿ ಸೆಳೆಯುತ್ತಿವೆ. ಡೇಟ್ಸ್ ಮತ್ತು ಡ್ರೈ ಪ್ರೂಟ್ಸ್ ಮಿಶ್ರಣದ ಸೌದಿ ಹಲ್ವಾ ರಮಝಾನ್‌ಗೆ ವಿಶೇಷವಾಗಿ ಮಾರಾಟವಾಗುತ್ತಿದೆ.

ಬಗೆ ಬಗೆಯ ಡೇಟ್ಸ್-ಡ್ರೈ ಫ್ರೂಟ್ಸ್: ಮಕ್ಕಾ ಮದೀನಾದ ಮಾಂಬ್ರು, ದಕ್ಷಿಣ ಆಫ್ರಿಕಾದ ಮೆಡ್ಜೋಲ್ ಡೇಟ್ಸ್, ತುರ್ಕಿಯ ಅಂಜುರಾ, ಇರಾನ್ ಡೇಟ್ಸ್, ಸುರ್ಕಿ ಡೇಟ್ಸ್, ಝಾಹೇದಿ ಡೇಟ್ಸ್, ಸೌದಿ ಅರೇಬಿಯಾದ ಅಜ್ವಾ ಡೇಟ್ಸ್ ಹಾಗೂ ವಿವಿಧ ಬಗೆಯ ಸುಮಾರು 80ಕ್ಕೂ ಹೆಚ್ಚು ಬಗೆಯ ಖರ್ಜೂರಗಳಿವೆ. ಇದಲ್ಲದೆ ಬ್ರೆಜಿಲ್ ನಟ್ಸ್, ಆಸ್ಟ್ರೇಲಿಯಾದ ಹೆಜಲ್ ನಟ್ಸ್, ಇರಾನ್‌ನ ಒಣ ಅಂಜೂರ, ಇರಾನಿ ಬಾದಾಮಿ (ಕಡಿಮೆ ಎಣ್ಣೆ ಅಂಶ) ಮಾರಾಟಕ್ಕಿವೆ.

ವಿವಿಧ ಬಗೆಯ ಡೇಟ್ಸ್, ಡ್ರೈಫ್ರೂಟ್ಸ್‌ಗಳ ಬೆಲೆ ಕೆ.ಜಿ.ಗೆ 200 ರೂ. ನಿಂದ 6 ಸಾವಿರ ರೂ.ವರೆಗಿವೆ. ಅದೇ ರೀತಿ ಅಮೆರಿಕದ ಬಾದಾಮಿ 600 ರೂ.ಗೆ ಲಭಿಸಿದರೆ, ಇರಾನಿ ಬಾದಾಮಿ (ಮಾಮ್‌ರಾ) 2,500 ರೂ.ನಿಂದ 4,000 ರೂ.ವರೆಗಿದೆ. ಇರಾನ್ ಅಂಜೂರ 1,600-1,800 ರೂ. ಬೆಲೆಯಿದೆ. ತುನೀಷಯನ್ ಫ್ರೆಶ್ ಡೇಟ್ಸ್ ಗಿಡದ ಸಮೇತ ದೊರೆಯುತ್ತಿದ್ದು, ಇದು ಕೆ.ಜಿ.ಗೆ 1,200 ರೂ. ಇದ್ದು, ಕಡುಕಪ್ಪು, ಕಂದು, ಮಿಶ್ರ ಬಣ್ಣದ ಡೇಟ್ಸ್‌ಗಳು ಬಿಡಿಯಾಗಿ ಹಾಗೂ ಫ್ಯಾಕೆಟ್‌ಗಳಲ್ಲಿ ಲಭ್ಯವಿದೆ.

ಬಹುಪಯೋಗಿ ಖರ್ಜೂರ: ಮೂಳೆಗಳಲ್ಲಿನ ಕ್ಯಾಲ್ಷಿಯಂ ಕೊರತೆಯನ್ನು ನೀಗಿಸುತ್ತದೆ. ಮಲಬದ್ಧತೆ ಸಮಸ್ಯೆಯಿದ್ದರೆ ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಉತ್ತಮ ಫಲಿತಾಂಶ ನೀಡುತ್ತದೆ. ಆ್ಯಸಿಡಿಟಿ, ಎದೆ ಉರಿಯನ್ನು ನಿವಾರಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಖರ್ಜೂರ ತುಂಬಾ ಸಹಕಾರಿಯಾಗಿದೆ. ಇದಲ್ಲದೆ ಹೃದ್ರೋಗ ಕಾಯಿಲೆಗಳನ್ನೂ ತಡೆಯುವ ಶಕ್ತಿ ಖರ್ಜೂರಕ್ಕಿದೆ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಡೇಟ್ಸ್ ಹಾಗೂ ಡ್ರೈಫ್ರೂಟ್ಸ್ ಎಲ್ಲಿ ಹೆಚ್ಚು ಸಿಗುತ್ತದೆಯೋ ಅಲ್ಲಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತೇವೆ. ಇದೇ ಮಾರುಕಟ್ಟೆಯಲ್ಲಿ ನಮ್ಮ ಕುಟುಂಬದವರು ಕಳೆದ 50 ವರ್ಷಗಳಿಂದಲೂ ಇದೇ ಕೆಲಸ ಮಾಡಲಾಗುತ್ತಿದೆ. ವರ್ಷಪೂರ್ತಿ ಮಾರಾಟ ಮಾಡುತ್ತೇವೆ. ಆದರೆ, ರಮಝಾನ್ ಮಾಸದಲ್ಲಿ ಒಂದಿಷ್ಟು ವಿಶೇಷವಾಗಿ ಹೆಚ್ಚಿನ ಕಡೆಗಳಿಂದ ಆಮದು ಮಾಡಿಕೊಂಡು ಮಾರುತ್ತೇವೆ.

- ಮುಹಮದ್ ಇದ್ರೀಸ್ ಚೌಧರಿ, ಡಿ.ಎಚ್.ಪ್ರೂ ಟ್ ಸೆಂಟರ್, ರಸಲ್ ಮಾರ್ಕೆಟ್

ನಾನು ಇಲ್ಲಿ ಸುಮಾರು ವರ್ಷಗಳಿಂದಲೂ ರಮಝಾನ್ ಮಾಸದಲ್ಲಿ ಸಮೋಸಗಳ ವ್ಯಾಪಾರ ಮಾಡುತ್ತಿದ್ದೇನೆ. ಇಲ್ಲಿ ಸ್ಥಳಿಯವಾಗಿ ಮಸೀದಿ, ಮಂದಿರ, ಚರ್ಚ್ ಇರುವುದರಿಂದ ಪ್ರಾರ್ಥನೆ ಬರುವ ಎಲ್ಲ ಸಮುದಾಯವರೂ ಸಮೋಸಗಳನ್ನು ಖರೀದಿ ಮಾಡುತ್ತಾರೆ. ಇದರಿಂದ ದಿನನಿತ್ಯ ಸುಮಾರು 2 ರಿಂದ 4 ಸಾವಿರ ವ್ಯಾಪಾರವಾಗುತ್ತದೆ.

- ಶಫೀವುಲ್ಲಾ, ಸಮೋಸ ವ್ಯಾಪಾರಿ, ರಸೆಲ್ ಮಾರುಕಟ್ಟೆ   

share
- ಬಾಬುರೆಡ್ಡಿ ಚಿಂತಾಮಣಿ
- ಬಾಬುರೆಡ್ಡಿ ಚಿಂತಾಮಣಿ
Next Story
X