ಅಕ್ರಮ ಗಾಂಜಾ ಮಾರಾಟ: ಓರ್ವನ ಬಂಧನ
ಉಡುಪಿ, ಮೇ 12: ಅಕ್ರಮ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ಓರ್ವನನ್ನು ಉಡುಪಿ ಪೊಲೀಸರು ಮೇ 11ರಂದು ಸಂಜೆ ವೇಳೆ ಅಜ್ಜರಕಾಡು ಭುಜಂಗ ಪಾರ್ಕ್ ಬಳಿ ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ನಿಕ್ಷೇಪ್ ಕುಮಾರ್ ಗೌಡ (21) ಬಂಧಿತ ಆರೋಪಿ. ಈತ ಮೂಳೂರಿನ ಉಬೇದುಲ್ಲಾ ಎಂಬಾತನಿಗೆ ಮಾರಾಟ ಮಾಡಲು ತಂದಿದ್ದ 5,000 ರೂ. ಮೌಲ್ಯದ ಒಟ್ಟು 280 ಗ್ರಾಂ ತೂಕದ ಗಾಂಜಾ ಮತ್ತು ಮೊಬೈಲ್‌ನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





