ಯುವತಿಗೆ ಬೆದರಿಕೆ: ಆರೋಪಿ ಸೆರೆ

ಬೆಂಗಳೂರು, ಮೇ 12: ಯುವತಿಯೊಬ್ಬಳಿಗೆ ಬೆದರಿಕೆ ಹಾಕಿದ ಆರೋಪದಡಿ ಇಲ್ಲಿನ ತಲಘಟ್ಟಪುರ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಭಾಸ್ಕರ್ ನಾರದಾಸಿ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರ ಪ್ರದೇಶ ಮೂಲದ ಭಾಸ್ಕರ್ ನಗರದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತನ ಮೂಲಕ ಒಬ್ಬ ಹುಡುಗಿಯ ಪರಿಚಯವಾಗಿತ್ತು. ನಂತರ ಇಬ್ಬರು ಒಬ್ಬರಿಗೊಬ್ಬರು ಪ್ರೀತಿ ಮಾಡ ತೊಡಗಿದ್ದರು. ಇಬ್ಬರು ಖಾಸಗಿಯಾಗಿ ಕೆಲ ಭಾವಚಿತ್ರಗಳನ್ನು ತೆಗೆದುಕೊಂಡಿದ್ದರು. ಆದರೆ, ಕೆಲ ದಿನಗಳ ಬಳಿಕ ಮನಸ್ತಾಪ ಉಂಟಾಗಿ ದೂರ ಆಗಿದ್ದರು ಎನ್ನಲಾಗಿದೆ.
ಆ ನಂತರವೂ ಸಹ ಭಾಸ್ಕರ್ ತಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ, ಫೋಟೋಗಳನ್ನು ಸಂಬಂಧಿಕರು, ಸ್ನೇಹಿತರಿಗೆ ಕಳುಹಿಸುವುದಾಗಿ, ಬೆದರಿಕೆ ಹಾಕಿದ್ದ ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story





