ಪಾಪ್ಯುಲರ್ ಫ್ರಂಟ್ ವತಿಯಿಂದ ರಮಝಾನ್ ಕಿಟ್ ವಿತರಣೆ

ಮಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ಇದರ ವತಿಯಿಂದ ಮಂಗಳೂರಿನ ಉಳ್ಳಾಲ, ಸುರತ್ಕಲ್, ಬೆಂಗರೆ, ಮಲಾರ್, ಹಾಗು ಇತರ ಪ್ರದೇಶಗಳಲ್ಲಿ ನೂರಕ್ಕಿಂತ ಹೆಚ್ಚು ಕುಟುಂಬಗಳಿಗೆ ರಮಝಾನ್ ತಿಂಗಳ ಇಫ್ತಾರ್ ಅಹಾರ ಸಾಮಗ್ರಿ ವಿತರಿಸಲಾಯಿತು.
ಮಂಗಳೂರಿನ ಕಚೇರಿಯಲ್ಲಿ ಕಿಟ್ ವಿತರಿಸುವ ಮೂಲಕ ಜಿಲ್ಲಾಧ್ಯಕ್ಷ ಮೊಹಮ್ಮದ್ ಹನೀಫ್ ಕಾಟಿಪಳ್ಳ ಚಾಲನೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಕಾದರ್ ಕೆ, ಸದಸ್ಯರಾದ ಹಾರಿಶ್ ಮಲಾರ್, ಹರ್ಶಾದ್ ಮಂಗಳೂರು, ಬಶೀರ್ ಹರೇಕಳ, ಆಸಿಫ್ ನ್ಯೂಪಡ್ಪು, ಇಕ್ಬಾಲ್ ಕಣ್ಣೂರು ಉಪಸ್ಥಿತರಿದ್ದರು.










