ಲೋಕಸಭಾ ಚುನಾವಣೆ: ವಿಚಾರವಾದಿಗಳಿಂದ ಜ್ಯೋತಿಷಿಗಳಿಗೆ ಒಂದು ಕೋಟಿ ರೂ. ಬಹುಮಾನದ ಸವಾಲು

ಬೆಂಗಳೂರು, ಮೇ 13: ಚುನಾವಣಾ ಭವಿಷ್ಯ ಹೇಳುವ ಜ್ಯೋತಿಷಿಗಳ ಭವಿಷ್ಯ ವಾಣಿಗಳ ಸತ್ಯಾ ಸತ್ಯತೆಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಕಲಿತು ಭವಿಷ್ಯ ಹೇಳುವವರಿಗೆ ಅಖಿಲ ಕರ್ನಾಟಕ ವಿಚಾರವಾದಿ ಸಂಘ(ರಿ)ವು ಒಂದು ಕೋಟಿ ರೂ ಬಹುಮಾನ ನೀಡುವ ಸವಾಲು ಮುಂದಿಟ್ಟಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗದಿಂದ ಅಂಗೀಕೃತವಾದ ರಾಜಕೀಯ ಪಕ್ಷಗಳು ಇಡೀ ಭಾರತದಲ್ಲಿ ಈಗ ಲೋಕಸಭೆಗೆ ನಡೆದ, ನಡೆಯುತ್ತಿರುವ ಚುನಾವಣೆಯ ಎಲ್ಲಾ ಒಟ್ಟು ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಪಕ್ಷಾವಾರು ಎಷ್ಟೆಷ್ಟು ಸ್ಥಾನಗಳನ್ನು ಗೆಲ್ಲುತ್ತಾರೆ ಎಂಬ ಸಂಖ್ಯೆಗಳು ಮತ್ತು ಅಂಗೀಕೃತ ಅಲ್ಲದ ಪಕ್ಷ ಇಲ್ಲವೇ ಪಕ್ಷೇತರ ಸ್ವತಂತ್ರ ಅಭ್ಯರ್ಥಿ ಗಳಾಗಿ ಸ್ಪರ್ಧಿಸಿದವರು ಯಾವ ಯಾವ ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ ಎಂದು ಮುಂಚಿತ ಭವಿಷ್ಯ ಹೇಳಬೇಕು. ಹಾಗು ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರ್ಯಾರು ಗೆಲ್ಲುತ್ತಾರೆ ಎಂದು ತಿಳಿಸ ಬೇಕು.
ಸವಾಲಿಗೆ ನಿಯಮಗಳು ಇಂತಿವೆ
ದೇಶದ ಯಾವ ಜ್ಯೋತಿಷಿಗಳು ಇದರಲ್ಲಿ ಭಾಗವಹಿಸಬಹುದು. ಭಾಗವಹಿಸುವವರು ಗಣಿತ ನೈಪುಣ್ಯದ ಮೇಲೆ ಹಾಗೂ ಊಹೆಯ ಮೇಲೆ ಹಲವು ವಿವಿಧ ಸಂಯೋಜನೆಗಳ ಮೇಲೆ ಲೆಕ್ಕಹಾಕಿ (multiple combinations) ಮಾಡಿ ಬಹುಮುಖ ಉತ್ತರಗಳನ್ನು, ಒಬ್ಬರೇ ಬೇರೆ ಬೇರೆ ಹೆಸರಿನಿಂದ ಹಲವಾರು ಉತ್ತರಗಳನ್ನು ಕಳುಹಿಸ ಬಾರದೆಂಬ ಕಾರಣಕ್ಕಾಗಿ ಹಾಗೂ ಈ ಸ್ಪರ್ಧೆಗೆ ಒಂದು ಗಂಭೀರತೆ ಹಾಗು ಸತ್ಯದ ದೃಢತೆಯ ಮನಸಾಕ್ಷಿಗಾಗಿ, ಕಳುಹಿಸುವ ಪ್ರತೀ ಉತ್ತರದ ಅರ್ಜಿಗೆ ತಲಾ ಹತ್ತು ಸಾವಿರ ರೂ. ನ್ನು ಭದ್ರತಾ ಠೇವಣಿಯಾಗಿ ನೀಡ ಬೇಕಾಗುತ್ತದೆ.
ಠೇವಣಿಯನ್ನು "ವಿಚಾರವಾದಿ ಸಂಘ ಬೆಂಗಳೂರು" - ಈ ಹೆಸರಿಗೆ ಡಿ.ಡಿ. ಕಳುಹಿಸ ಬೇಕು. ಗೆದ್ದವರಿಗೆ ಮಾತ್ರ ಠೇವಣಿ ಹಣ ಹಿಂದಿರುಗಿಸಲಾಗುವುದು ಮತ್ತು ಜೊತೆಗೆ ಒಂದು ಕೋಟಿ ರೂ. ಬಹುಮಾನವನ್ನು ನೀಡಲಾಗುವುದು. ಒಂದಕ್ಕಿಂತ ಹೆಚ್ಚು ಸ್ಪರ್ಧಿಗಳು ಸರಿ ಉತ್ತರ ಕೊಟ್ಟರೆ ಬಹುಮಾನ ಹಣವನ್ನು ಗೆದ್ದವರಿಗೆ ಸಮನಾಗಿ ಹಂಚಲಾಗುತ್ತದೆ.
ಮೇ 20ನೇ ತಾರೀಖಿನ ಒಳಗೆ ಈ ಕೆಳಗಿನ ಬೆಂಗಳೂರಿನ ನಮ್ಮ ಕಚೇರಿಗೆ ಉತ್ತರವನ್ನು ದಾಖಲಾತಿ ಮೂಲಕ
ಅಖಿಲ ಕರ್ನಾಟಕ ವಿಚಾರವಾದಿ ಸಂಘ (ರಿ ) 43. ರೋಹಿಣಿ 5ನೇ ಮೇನ್ ಪದ್ಮನಾಭನಗರ, ಬೆಂಗಳೂರು- 560070. ಕಾರ್ಯದರ್ಶಿ- ಮೊ: 9342176030 ಈ ವಿಳಾಸಕ್ಕೆ ತಲುಪಿಸಬೇಕು.
ಸ್ಪರ್ಧೆ ಹಾಗು ಉತ್ತರ ಮತ್ತು ಭದ್ರತಾ ಠೇವಣಿಯ ಹಾಗು ಸ್ಪರ್ಧೆ ನಡೆಸುವ ಜವಾಬ್ದಾರಿಗಾಗಿ ನಮ್ಮ ಸಂಘವು ನೇಮಿಸಿದ ಒಂದು ತಜ್ಞರ ಸಮಿತಿಯು ನಿರ್ವಹಿಸುತ್ತದೆ.
ವಿಚಾರವಾದಿ ಸಂಘ ಕಡೆಯಿಂದ ಒಂದು ಕೋಟಿ ರೂ.ಗೆ ಭದ್ರತೆಗಾಗಿ ಠೇವಣಿ ಪತ್ರ, ಶೇರು ಪತ್ರ, ಸ್ಥಿರಾಸ್ತಿ ಪತ್ರ ಇವುಗಳಲ್ಲಿ ಯಾವುದನ್ನು ಸಂಘದಿಂದ ನೇಮಕಗೊಂಡ ಅದೇ ಸಮಿತಿಯ ವಶ ಕೊಡಲಾಗುತ್ತದೆ. ಆದರೆ ಯಾವುದೇ ಸ್ಪರ್ಧಿಗಳ ಕೈಗೆ ಕೊಡಲಾಗುವುದಿಲ್ಲ. ಸ್ಪರ್ಧೆಯ ಫಲಿತಾಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಗೆದ್ದ ಸ್ಪರ್ಧಿಯನ್ನು ಮಾತ್ರ ಸಂಪರ್ಕಿಸಲಾಗುವುದು ಎಂದು ಸಂಘದ ಪ್ರಕಟನೆ ತಿಳಿಸಿದೆ.







