ಅಪಘಾತದಲ್ಲಿ ಬಲಗೈ ಕಳೆದುಕೊಂಡ ಪದವಿ ವಿದ್ಯಾರ್ಥಿ: ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ನೆರವಿಗೆ ಮನವಿ

ಉಡುಪಿ, ಮೇ 13: ಅಪಘಾತದಲ್ಲಿ ಬಲಗೈ ಕಳೆದುಕೊಂಡ ಉಡುಪಿ ಎಂಜಿಎಂ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಅಜಿತ್ ಶೆಟ್ಟಿ ಎಂಬವರಿಗೆ ಕೃತಕ ಕೈಜೋಡಣೆಯ ಶಸ್ತ್ರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡು ವಂತೆ ಕುಟುಂಬದವರು ಮನವಿ ಮಾಡಿದ್ದಾರೆ.
ಹಿರಿಯಡ್ಕ ಅಂಜಾರು ನಿವಾಸಿ ಭಾಸ್ಕರ್ ಶೆಟ್ಟಿ ಎಂಬವರ ಮಗ ಅಜಿತ್ ಶೆಟ್ಟಿ ಪರೀಕ್ಷೆ ಹಿನ್ನೆಲೆಯಲ್ಲಿ ಮೇ 6ರಂದು ಕಾಲೇಜಿಗೆ ಬಂದು ಓದು ಮುಗಿಸಿ ಮನೆಗೆ ಬಸ್‌ನಲ್ಲಿ ಹೊರಟಿದ್ದರು. ಈ ವೇಳೆ ಪರ್ಕಳ ಬಳಿ ಎದುರಿನಿಂದ ಬರುತ್ತಿದ್ದ ಬಸ್ ಅಜಿತ್ ಪ್ರಯಾಣಿಸುತ್ತಿದ್ದ ಬಸ್‌ಗೆ ಢಿಕ್ಕಿ ಹೊಡೆಯಿತು. ಇದರಿಂದ ಕಿಟಕಿ ಬದಿ ಕುಳಿತಿದ್ದ ಅಜಿತ್ ಅವ ಬಲಗೈ ಸಂಪೂರ್ಣ ಜಖಂ ಗೊಂಡಿತ್ತು.
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅಜಿತ್ ತನ್ನ ಬಲಗೈಯನ್ನು ಕಳೆದುಕೊಂಡಿದ್ದಾರೆ. ಅಜಿತ್‌ಗೆ ಕೃತಕ ಕೈಜೋಡಣೆ ಮಾಡುವ ಉದ್ದೇಶದಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಬಡ ಕುಟುಂಬ ದಿಂದ ಬಂದಿರುವ ಅಜಿತ್ ಚಿಕಿತ್ಸೆಗೆ ಮನೆಯವರು ಹಾಗೂ ಗೆಳೆಯರು ಈಗಾಗಲೇ ಸಾಕಷ್ಟು ಹಣವನ್ನು ವ್ಯಯಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಸಹೃದಯ ದಾನಿಗಳ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಅಜಿತ್ ಕುಟುಂಬ ಹಾಗೂ ಗೆಳೆಯರಿದ್ದಾರೆ. ಸಹೃದಯ ದಾನಿಗಳು ನೀಡುವ ಒಂದಿಷ್ಟು ನೆರವು ಅಜಿತ್‌ನ ಚಿಕಿತ್ಸೆಗೆ ಸಹಾಯವಾಗಬಹುದು. ಅಜಿತ್ ಚಿಕಿತ್ಸೆಗೆ ಆರ್ಥಿಕವಾಗಿ ಸಹಾಯ ಮಾಡಲು ಇಚ್ಛಿಸುವವರು ಈ ಬ್ಯಾಂಕ್ ಖಾತೆಗೆ ಕಳುಹಿಸಬಹುದು. ಅಜಿತ್ ಶೆಟ್ಟಿ, ಸಿಂಡಿಕೇಟ್ ಬ್ಯಾಂಕ್ ಹಿರಿಯಡ್ಕ ಶಾಖೆ, ಎಸ್‌ಬಿ ಅಕೌಂಟ್ ನಂಬರ್ 01482200088432, ಐಎಫ್‌ಎಸ್‌ಸಿ ಕೋಡ್ -ಎಸ್‌ವೈಎನ್‌ಬಿ0000148. ಮನೆ ವಿಳಾಸ- ಬಾಕ್ಯರ್‌ಕಟ್ಟ ಹೌಸ್, ಅಂಜಾರು ಗ್ರಾಮ, ಹಿರಿಯಡ್ಕ.







