ಸೇನಾ ನೇಮಕಾತಿ ರ್ಯಾಲಿ
ಉಡುಪಿ, ಮೇ 13: ಮೇ 28ರಿಂದ ಜೂನ್ 6ರವರೆಗೆ ಸಿಪಾಯಿ ಜಿ.ಡಿ, ಸಿಪಾಯಿ ಕ್ಲರ್ಕ್ ಮತ್ತು ಎಸ್‌ಕೆಟಿ, ಸಿಪಾಯಿ ಟೆಕ್ನಿಕಲ್, ಸಿಪಾಯಿ ಟ್ರೇಡ್ಸ್‌ಮೆನ್ (8ನೇ ಮತ್ತು 10ನೇ ತರಗತಿ) ಹುದ್ದೆಗಳಿಗಾಗಿ ಸೇನಾ ನೇಮಕಾತಿ ರ್ಯಾಲಿಯನ್ನು ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಜಿಲ್ಲೆಯ ಆಸಕ್ತ ಅ್ಯರ್ಥಿಳು ಇದರಲ್ಲಿ ಭಾಗವಹಿಸಬಹುದು.
ಆಸಕ್ತರು ಅರ್ಜಿಯನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ. ಈ ಪ್ರಕ್ರಿಯೆ ಮೇ 15ರಂದು ಮುಕ್ತಾಯಗೊಳ್ಳಲಿದೆ. ಹೆಚ್ಚಿನ ವಿವರಗಳಿಗೆ - www.joinindianarmy.nic.in -ಹಾಗೂ ಸೇನಾ ನೇಮಕಾತಿ ಕಾರ್ಯಾಲಯ, ಮಂಗಳೂರು ದೂರವಾಣಿ ಸಂ: 0824- 2458376ನ್ನು ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
Next Story





