ಸಮಾಜಸೇವಾ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು, ಮೇ 13: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ಸಮಗ್ರ ಸೌಲಭ್ಯ ನೀಡವ ಜಿಲ್ಲಾ ಲೇಡಿಗೋಷನ್ ಆಸ್ಪತ್ರೆಯ ಗೆಳತಿ ವಿಶೇಷ ಚಿಕಿತ್ಸಾ ಘಟಕದಲ್ಲಿ ತೆರವಾಗಿರುವ ಸಮಾಜಸೇವಾ ಕಾರ್ಯಕರ್ತೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಮಾಜಸೇವಾ ಕಾರ್ಯಕರ್ತೆಯರ ಎರಡು ಹುದ್ದೆಗಳಿಗೆ ಬಿಎಸ್‌ಡಬ್ಲ್ಯೂ/ಬಿ.ಎ (ಸೈಕಾಲಜಿ) ಹಾಗೂ 1 ವರ್ಷದ ಕಂಪ್ಯೂಟರ್ ಅನುಭವವುಳ್ಳ 22ರಿಂದ 35 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ ಗೌರವಧನ 10 ಸಾವಿರ ರೂ. ನೀಡಿಲಾಗುವುದು. ಅರ್ಜಿ ಸಲ್ಲಿಸಲು ಮೇ 18 ಕೊನೆಯ ದಿನವಾಗಿದೆ.
ಹೆಚ್ಚಿನ ವಿವರಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ದ.ಕ. ಜಿಪಂ ಕಟ್ಟಡ, ಮಂಗಳೂರು ದೂ.ಸಂ.: 0824- 2451254ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





