ಗುರ್ದಾಸ್ಪುರ ಸರಣಿ ಅಪಘಾತ: ಸನ್ನಿ ಡಿಯೋಲ್ ಪಾರು
ಗುರ್ದಾಸ್ಪುರ,ಮೇ.13: ಸೋಮವಾರ ಪಂಜಾಬ್ನ ಗುರ್ದಾಸ್ಪುರದಲ್ಲಿ ನಡೆದ ಸರಣಿ ಅಪಘಾತದಲ್ಲಿ ನಟ ಮತ್ತು ರಾಜಕಾರಣಿ ಸನ್ನಿ ಡಿಯೋಲ್ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಸೊಹಲ್ ಗ್ರಾಮದಲ್ಲಿ ಸನ್ನಿ ಡಿಯೋಲ್ ಪ್ರಯಾಣಿಸುತ್ತಿದ್ದ ಕಾರಿನ ಚಕ್ರ ಸ್ಫೋಟಗೊಂಡ ಪರಿಣಾಮ ನಡೆದ ಅಪಘಾತದಲ್ಲಿ ಇತರ ಮೂರು ಕಾರುಗಳು ಹಾನಿಗೀಡಾಗಿವೆ ಎಂದು ಗುರ್ದಾಸ್ಪುರ ಪೊಲೀಸ್ ಉಪವರಿಷ್ಠಾಧಿಕಾರಿ ಮಂಜಿತ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಸನ್ನಿ ಡಿಯೋಲ್ ತಮ್ಮ ಹಿಂಬಾಲಕರ ಜೊತೆ ಫತೇಗಡ್ ಚುರಿಯನ್ಗೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹಾನಿಗೊಂಡ ನಾಲ್ಕು ವಾಹನಗಳ ಪೈಕಿ ಒಂದು ಗ್ರಾಮಸ್ಥನಿಗೆ ಸೇರಿದ್ದರೆ ಉಳಿದ ಮೂರು ಡಿಯೋಲ್ ಹಿಂಬಾಲಕ ಕಾರುಗಳಾಗಿವೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ನಂತರ ಡಿಯೋಲ್ ಬೇರೆ ವಾಹನದಲ್ಲಿ ಪ್ರಚಾರ ಸ್ಥಳಕ್ಕೆ ತೆರಳಿದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story