ನಿಂತಿದ್ದ ಲಾರಿಗೆ ಓಮ್ನಿ ಢಿಕ್ಕಿ: ಓರ್ವ ಸಾವು

ಮಡಿಕೇರಿ, ಮೇ 13 : ನಿಂತಿದ್ದ ಲಾರಿಗೆ ಓಮ್ನಿ ವಾಹನ ಢಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಸಂಪಾಜೆಯಲ್ಲಿ ನಡೆದಿದೆ.
ಮೃತಪಟ್ಟವರು ಪುತ್ತೂರಿನ ಬೆದ್ರಾಳ ನಿವಾಸಿ ಜಯರಾಮ ಎಂದು ಹೇಳಲಾಗಿದ್ದು, ಓಮ್ನಿ ವಾಹನ ಚಲಾಯಿಸುತ್ತಿದ್ದ ಅವರ ಸಹೋದರ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಮಡಿಕೇರಿಯಿಂದ ಪುತ್ತೂರು ಕಡೆಗೆ ಸಾಗುತ್ತಿದ್ದ ಓಮ್ನಿ ವಾಹನ ಸಂಪಾಜೆ ಗೇಟ್ ಬಳಿಯ ಪೆಟ್ರೋಲ್ ಪಂಪ್‍ನ ಎದುರುಗಡೆ ನಿಂತಿದ್ದ ಲಾರಿಯೊಂದರ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಓಮ್ನಿಯ ಎದುರಿನ ಸೀಟಿನಲ್ಲಿ ಕುಳಿತಿದ್ದ ಜಯರಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಣ್ಣ ಹಾಗೂ ತಮ್ಮ ಸೋಮವಾರ ಅಪರಾಹ್ನ ಮಡಿಕೇರಿ ಕಡೆಯಿಂದ ಬೆದ್ರಾಳಕ್ಕೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
Next Story





