Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕೊಡಗಿನಲ್ಲೂ ಬೆಳೆಯಬಹುದು ಖರ್ಜೂರ: ಕೃಷಿ...

ಕೊಡಗಿನಲ್ಲೂ ಬೆಳೆಯಬಹುದು ಖರ್ಜೂರ: ಕೃಷಿ ಕ್ಷೇತ್ರದ ಗಮನ ಸೆಳೆದ ಅಕ್ಬರ್

ವಾರ್ತಾಭಾರತಿವಾರ್ತಾಭಾರತಿ13 May 2019 11:02 PM IST
share
ಕೊಡಗಿನಲ್ಲೂ ಬೆಳೆಯಬಹುದು ಖರ್ಜೂರ: ಕೃಷಿ ಕ್ಷೇತ್ರದ ಗಮನ ಸೆಳೆದ ಅಕ್ಬರ್

ಮಡಿಕೇರಿ, ಮೇ 13 : ಉತ್ತಮ ಗುಣಮಟ್ಟದ ಕಾಫಿ, ಕರಿಮೆಣಸು, ಏಲಕ್ಕಿ ಮತ್ತು ಕಿತ್ತಳೆ ಬೆಳೆಗೆ ಹೆಸರುವಾಸಿಯಾದ ಹಸಿರ ಪ್ರಕೃತಿ, ನಿಸರ್ಗ ರಮಣೀಯ ತಾಣದೊಂದಿಗೆ ವಿಶ್ವ ಪ್ರವಾಸೋದ್ಯಮದ ಭೂಪಟದಲ್ಲೂ ಗಮನ ಸೆಳೆದಿರುವ ಕೊಡಗು ಜಿಲ್ಲೆಯಲ್ಲಿ ಸಾಮಾನ್ಯವಾಗಿ ತಂಪು ಹವಾಮಾನ ಕಂಡು ಬರುತ್ತದೆ. ಜಿಲ್ಲೆಯ ಹವಾಗುಣಕ್ಕೆ ಅನುಗುಣವಾಗಿ ವಿವಿಧ ತಳಿಯ ಬೆಳೆ ಮತ್ತು ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಆದರೆ ವಿಶೇಷ ಎಂಬಂತೆ ಕೊಲ್ಲಿ ರಾಷ್ಟ್ರಗಳ ಮರುಭೂಮಿಯಲ್ಲಿ ಮಾತ್ರವೇ ಯಥೇಚ್ಚವಾಗಿ ಬೆಳೆಯುವ ಖರ್ಜೂರವನ್ನು ತಂಪಾದ ಕೊಡಗಿನಲ್ಲೂ ಬೆಳೆಯಬಹುದೆಂದು ಸಾಧಿಸಿ ತೋರಿಸುವ ಮೂಲಕ ವಿರಾಜಪೇಟೆಯ ನಿಸರ್ಗ ಬಡಾವಣೆ ನಿವಾಸಿ ಅಕ್ಬರ್ ಕೃಷಿಕರ ಗಮನ ಸೆಳೆದಿದ್ದಾರೆ.

ಇವರು ಬೆಳೆದ ಖರ್ಜೂರದ ಮರಗಳಲ್ಲಿ ತೃಪ್ತಿಯಾಗುಷ್ಟು ಫಸಲು ಬಿಟ್ಟಿದೆ. ಕೆಲವು ವರ್ಷಗಳ ಹಿಂದೆ ಅಕ್ಬರ್ ಕೆಲಸ ನಿಮಿತ್ತ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಅಲ್ಲಿನ ನಿವಾಸಿ ಶೇಕ್ ಇರ್ಫಾನ್ ಎಂಬವರ ಮನೆಯ ಮುಂದೆ ಖರ್ಜೂರ ಬೆಳೆದಿದ್ದನ್ನು ಅಕ್ಬರ್ ಗಮನಿಸಿದ್ದರು.

ಮರುಭೂಮಿ ಮಾತ್ರವಲ್ಲದೇ, ಮನೆಯ ಮುಂದೆಯೂ ಖರ್ಜೂರದ ಮರಗಳು ಫಲವತ್ತಾಗಿ ಬೆಳೆದಿರುವುದನ್ನು ಗಮನಿಸಿದ ಅಕ್ಬರ್, ತಮ್ಮ ಊರು ವಿರಾಜಪೇಟೆಯಲ್ಲಿರುವ ಮನೆಯ ಮುಂದೆಯೂ ಖರ್ಜೂರದ ಗಿಡಗಳನ್ನು ಬೆಳೆಸಬೇಕೆಂದು ನಿರ್ಧರಿಸಿದರು. ತನ್ನ ಮನದ ಇಂಗಿತವನ್ನು ಶೇಕ್ ಇರ್ಫಾನ್‍ಗೆ ತಿಳಿಸಿದ ಅಕ್ಬರ್, ತಮಗೂ ಖರ್ಜೂರದ ಗಿಡಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಅಕ್ಬರ್ ಅವರ ಕೋರಿಕೆಗೆ ಸಮ್ಮತಿಸಿದ ಶೇಕ್ ಇರ್ಫಾನ್, ಸುಮಾರು 12 ಖರ್ಜೂರದ ಗಿಡಗಳನ್ನು ಹಡಗಿನ ಮೂಲಕ ಸೌದಿ ಅರೇಬಿಯದಿಂದ ದಕ್ಷಿಣ ಭಾರತದ ತಮಿಳುನಾಡಿನ ಚೆನ್ನೈ ಬಂದರಿಗೆ ತಲುಪಿಸಿದ್ದರು. 

11-12 ಅಡಿ ಎತ್ತರ ಮತ್ತು ಅತೀವ ಭಾರ ಹೊಂದಿದ್ದ ಖರ್ಜೂರದ ಗಿಡಗಳನ್ನು ಚೆನ್ನೈನಿಂದ ಲಾರಿಯಲ್ಲಿ ವಿರಾಜಪೇಟೆಗೆ ತಂದ ಅಕ್ಬರ್, ಅವುಗಳನ್ನು ಕ್ರೈನ್ ಮೂಲಕ ನಾಟಿ ಮಾಡಿ ಪೋಷಿಸಲು ಆರಂಭಿಸಿದ್ದರು. ದಿನದಿಂದ ದಿನಕ್ಕೆ ಜಿಲ್ಲೆಯ ಹವಾಮಾನಕ್ಕೆ ಹೊಂದಿಕೊಂಡ ಖರ್ಜೂರದ ಗಿಡಗಳು, ಒಂದೂವರೆ ವರ್ಷಗಳ ನಂತರ 14 ಅಡಿಯಿಂದ 16 ಅಡಿ ಎತ್ತರದ ಮರವಾಗಿ ಬೆಳೆದು ನಿಂತು ಎಲ್ಲರ ಅಚ್ಚರಿಗೆ ಕಾರಣವಾಯಿತು. ಇದೀಗ ಬೇಸಿಗೆಯ ಅವಧಿಯಾದ್ದರಿಂದ ಒಂದೊಂದು ಮರದಲ್ಲಿಯೂ ನಾಲ್ಕೈದು ಗೊನೆಗಳಂತೆ ಒಟ್ಟು ಆರು ಮರಗಳಲ್ಲಿ ಖರ್ಜೂರದ ಫಸಲು ನಳನಳಿಸುತ್ತಿದೆ. ಪ್ರತಿ 2 ತಿಂಗಳಿಗೊಮ್ಮೆ ಚೆನೈನಿಂದ ಕೃಷಿ ಮತ್ತು ತೋಟಗಾರಿಕಾ ತಜ್ಞರ ತಂಡ ವಿರಾಜಪೇಟೆಯಲ್ಲಿರುವ ಅಕ್ಬರ್ ಅವರ ಮನೆಗೆ ಆಗಮಿಸಿ ಖರ್ಜೂರದ ಮರಗಳ ಬೆಳವಣಿಗೆ ಮತ್ತು ಅದಕ್ಕೆ ಬೇಕಾದ ಪೋಷಕಾಂಶಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ.

ಸಾಮಾನ್ಯವಾಗಿ ದೇಶದ ರಾಜಸ್ಥಾನ ಹೊರತುಪಡಿಸಿದರೆ ಬೇರೆ ಯಾವುದೇ ರಾಜ್ಯ ಮತ್ತು ಭೂಭಾಗದಲ್ಲಿ ಖರ್ಜೂರ ಮರ ಬೆಳೆದಿರುವುದು ಕಂಡು ಬರುವುದಿಲ್ಲ. ಅದಕ್ಕೆ ತನ್ನದೇ ಆದ ಪ್ರಾಕೃತಿಕ ಕಾರಣಗಳೂ ಇರಬಹುದು. ಆದರೆ ಮನಸ್ಸು ಮಾಡಿದರೆ ದೇಶದ ಯಾವುದೇ ಭಾಗದಲ್ಲಿ ಎಲ್ಲಾ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಅಕ್ಬರ್ ನಿರೂಪಿಸಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X