ಸಹಜೀವನ ಕೇಂದ್ರಕ್ಕೆ ಜಮೀಯ್ಯತುಲ್ ಫಲಾಹ್ ನಿಯೋಗ ಭೇಟಿ

ಉಡುಪಿ, ಮೇ 14: ಉಡುಪಿ ಲೋಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯ ವತಿಯಿಂದ ಇತ್ತೀಚೆಗೆ ಪ್ರಾರಂಭಿಸಲಾದ ಹಿರಿಯ ನಾಗರಿಕರ ಆರೈಕೆ ಕೇಂದ್ರ ‘ಸಹಜೀವನ’ಕ್ಕೆ ಜಮೀಯ್ಯತುಲ್ ಫಲಾಹ್ ಸದಸ್ಯರ ನಿಯೋಗ ಇತ್ತೀಚೆಗೆ ಭೇಟಿ ನೀಡಿ ಹಿರಿಯ ನಾಗರಿಕರಿಗೆ ಸಿಹಿ ತಿಂಡಿ ವಿತರಿಸಿತು.
ಈ ಸಂದರ್ಭದಲ್ಲಿ ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್, ಕಾರ್ಯದರ್ಶಿ ಖಾಸಿಮ್ ಬಾರಕೂರು, ಕೋಶಾ ಧಿಕಾರಿ ಸಮೀರ್ ಎಂ., ಉಪಾಧ್ಯಕ್ಷ ಸಲಾಹುದ್ದೀನ್, ಮಾಜಿ ಅಧ್ಯಕ್ಷ ಅಬ್ದುಲ್ಲಾ ಪರ್ಕಳ, ಜೊತೆ ಕಾರ್ಯದರ್ಶಿ ಮುಶೀರ್ ಶೇಕ್, ಸಂಘಟನಾ ಕಾರ್ಯದರ್ಶಿ ನಾಸೀರ್ ಯಾಕೂಬ್, ಸದಸ್ಯರಾದ ಮುಹಮ್ಮದ್ ಮೌಲಾ, ವಿ.ಎಸ್. ಉಮರ್, ಹಸನ್ ಅಜ್ಜರಕಾಡು, ಹಸೇನಾರ್ ಅಬ್ದುಲ್ಲ, ಅನ್ವರ್ ಸಾಹೇಬ್, ಎಸ್.ವಿ.ಶಮೀಮ್, ಹುಸೇನ್ ಬಾರಕೂರು, ಆಸ್ಪತ್ರೆಯ ರೋಹಿ ರತ್ನಾಕರ್ ಉಪಸ್ಥಿತರಿದ್ದರು.
Next Story





