ಎಲಿಮಲೆ: ಇಫ್ತಾರ್ ಕೂಟ, ರಮಳಾನ್ ಕಿಟ್ ವಿತರಣೆ ಕಾರ್ಯಕ್ರಮ

ಸುಳ್ಯ: ನುಸ್ರತುಲ್ ಇಸ್ಲಾಮ್ ಎಸೋಸಿಯೇಶನ್, ಎಲಿಮಲೆ ಇದರ ಆಶ್ರಯದಲ್ಲಿ ಹಿರಿಯ ವಿದ್ವಾಂಸ ಮರ್ಹೂಮ್ ಪಿಟಿ ಉಸ್ತಾದ್ ಅನುಸ್ಮರಣೆ ಹಾಗೂ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ ಮತ್ತು ಇಫ್ತಾರ್ ಸಂಗಮವು ಎಲಿಮಲೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ತಹಲೀಲ್ ಸಮರ್ಪಣೆ ಹಾಗೂ ಪ್ರಾರ್ಥನಾ ಕೂಟ ನಡೆಯಿತು. ಪ್ರಾರ್ಥನೆಯ ನೇತ್ರತ್ವವನ್ನು ಎಲಿಮಲೆ ಮುದರ್ರಿಸ್ ಅಬ್ದುಲ್ ರಝಾಕ್ ಸಖಾಫಿ ಕಳಂಜಿಬೈಲು ವಹಿಸಿದ್ದರು.
ಬಳಿಕ ಜಮಾಅತಿಗೊಳಪಟ್ಟ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ವಹಿಸಿದ್ದರು. ಜಮಾಅತ್ ಕಮಿಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಜಮಾತ್ ಉಪಾಧ್ಯಕ್ಷ ಅಬ್ದುಲ್ ಕಾದರ್ ಪಾಣಾಜೆ, ಜಮಾಅತ್ ಕಾರ್ಯದರ್ಶಿ ಹನೀಫ್ ಮೆತ್ತಡ್ಕ, ಕೋಶಾಧಿಕಾರಿ ಮಹಮದ್ ಕುಂಞ ಮೇಲೆಬೈಲು ಸ್ಥಳೀಯ ಮದ್ರಸ ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿ, ಜೀರ್ಮಕ್ಕಿ ಇಮಾಂ ಸೂಫಿ ಮುಸ್ಲಿಯಾರ್, ಜೀರ್ಮಕ್ಕಿ ಮಸೀದಿ ಸಮಿತಿ ಅಧ್ಯಕ್ಷ ಜಿಎಸ್ ಅಬ್ದುಲ್ಲ, ಮೆತ್ತಡ್ಕ ಸದರ್ ಅಬ್ದುಲ್ ಸಲಾಂ ಮುಸ್ಲಿಯಾರ್, ಹಿರಿಯರಾದ ಎಎಂ ಅಬ್ಬಾಸ್, ನುಸ್ರತ್ ಉಪಾಧ್ಯಕ್ಷ ಕಲಂದರ್ ಎಲಿಮಲೆ, ಸಂಸ್ಥೆಯ ಹಲವು ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು. ಕಾರ್ಯದರ್ಶಿ ಸೂಫಿ ಎಲಿಮಲೆ ಕಾರ್ಯಕ್ರಮ ನಿರ್ವಹಿಸಿದರು.









