ಮೇ 28ರಿಂದ ಸೇನಾ ನೇಮಕಾತಿ ರ್ಯಾಲಿ
ಮಂಗಳೂರು, ಮೇ 14: ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಸೇನಾ ನೇಮಕಾತಿ ರ್ಯಾಲಿ ಮೇ 28ರಿಂದ ಜೂನ್ 6ರವರೆಗೆ ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸಿಪಾಯಿ ಜಿ.ಡಿ., ಸಿಪಾಯಿ ಕ್ಲರ್ಕ್ ಮತ್ತು ಎಸ್.ಕೆ.ಟಿ., ಸಿಪಾಯಿ ಟೆಕ್ನಿಕಲ್, ಸಿಪಾಯಿ ಟ್ರೇಡ್ಸಮೆನ್ ಹುದ್ದೆಗಳಿಗಾಗಿ ಸೇನಾ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ. ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದು. ವಿದ್ಯಾರ್ಹತೆ 8ನೇ ಅಥವಾ 10ನೇ ತರಗತಿ ಉತೀರ್ಣರಾಗಿರಬೇಕು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ www.joinindianarmy.nic.in ಹಾಗೂ ಸೇನಾ ನೇಮಕಾತಿ ಕಾರ್ಯಾಲಯ, ಮಂಗಳೂರು ದೂ.ಸಂ.: 0824- 2458376ನ್ನು ಸಂಪರ್ಕಿಸಬಹುದು. ಈ ಪ್ರಕ್ರಿಯೆಯು ಮೇ 15ರಂದು ಮುಕ್ತಾಯಗೊಳ್ಳುತ್ತದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯದ ಪ್ರಕಟನೆ ತಿಳಿಸಿದೆ.
Next Story





