ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
ಮಂಡ್ಯ, ಮೇ 14: ತಾಲೂಕಿನ ಉರಮಾರ ಕಸಲಗೆರೆ ಗ್ರಾಮದ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಮೂರು ದಿನದ ಹಿಂದೆ ಕುರಿಯನ್ನು ತಿಂದುಹಾಕಿದ್ದ ಚಿರತೆ ಮಂಗಳವಾರ ಮತ್ತೆ ಪುಟ್ಟಸ್ವಾಮಿ ಎಂಬುವರ ಗದ್ದೆಯಲ್ಲಿ ಕಾಣಸಿಕೊಂಡಿದೆ ಎನ್ನಲಾಗಿದೆ.
ಚಿರತೆ ಪ್ರತ್ಯಕ್ಷದಿಂದ ಭಯಗೊಂಡಿರುವ ಗ್ರಾಮಸ್ಥರು ಕೂಡಲೇ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
Next Story





