Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸೋಮೇಶ್ವರ-ಕೋಟೇಶ್ವರ ರಸ್ತೆ ಕಾಮಗಾರಿ:...

ಸೋಮೇಶ್ವರ-ಕೋಟೇಶ್ವರ ರಸ್ತೆ ಕಾಮಗಾರಿ: ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

ವಾರ್ತಾಭಾರತಿವಾರ್ತಾಭಾರತಿ16 May 2019 8:23 PM IST
share

ಉಡುಪಿ, ಮೇ 16: ಕುಂದಾಪುರ ತಾಲೂಕಿನ ಕೋಟೇಶ್ವರ- ಸೋಮೇಶ್ವರ (ಕೋಟೇಶ್ವರ-ಹಾಲಾಡಿ ರಸ್ತೆ) ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಯ ಬೇಕಾಗಿರುವುದರಿಂದ ಮೇ 16ರಿಂದ ಜುಲೈ 16ರವರೆಗೆ ಹಾಲಾಡಿ- ಕೋಟೇಶ್ವರ ರಸ್ತೆಯಲ್ಲಿ ಸಂಚರಿಸುವ ಭಾರೀ ವಾಹನ ಹಾಗೂ ಬಸ್ಸುಗಳ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.

ಈ ಆದೇಶದಂತೆ ಕುಂದಾಪುರ ಹಾಗೂ ಉಡುಪಿ ಕಡೆಯಿಂದ ಹಾಲಾಡಿ ಕಡೆಗೆ ಹೋಗುವ ಬಸ್‌ಗಳು ಹಾಗೂ ಇತರೆ ವಾಹನಗಳಿಗೆ ಹಳೆ ಗೋಪಾಡಿ ಪಂಚಾಯತ್ (ಹೂವಿನಕೆರೆ ಸ್ವಾಗತ ಗೋಪುರ) ಮುಖೇನ ರಾ.ಹೆ.66 ಯಿಂದ ಪೂರ್ವ ದಿಕ್ಕಿಗೆ ಬೀಜಾಡಿ- ವಕ್ವಾಡಿ-ಕಾಳಾವರ ರಸ್ತೆಯಲ್ಲಿ ಚಲಿಸಿ, ವಕ್ವಾಡಿ ಗುರುಕುಲ ಶಾಲೆಗೆ ಹೋಗುವ ಕಾಂಕ್ರೀಟ್ ರಸ್ತೆಗೆ (ರಸ್ತೆ ಎಡಕ್ಕೆ) ಚಲಿಸಿದಲ್ಲಿ ಗುರುಕುಲ ಶಾಲೆ ಬಳಿ 2 ರಸ್ತೆಗಳು ಕವಲೊಡೆದು ಹೋಗುತ್ತಿದ್ದು, ಈ ಎರಡು ರಸ್ತೆಗಳ ಪೈಕಿ ರಸ್ತೆಯ ಎಡಕ್ಕೆ (ಪಶ್ಚಿಮ) ಚಲಿಸಿದರೆ ಸನ್‌ರೈಸ್ ಫ್ಯಾಕ್ಟರಿಯ ಬಳಿಯ ಯುವ ಮೆರಿಡಿಯನ್ ಹಾಲ್‌ಗೆ ಸಂಪರ್ಕಿಸಿದರೆ, ಬಲಕ್ಕೆ (ಪೂರ್ವ) ವಾಹನಗಳು ಚಲಿಸಿ ಮುಂದೆ ಕಾಳಾವರ ಬಸ್‌ಸ್ಟಾಪ್ ಸಂಪರ್ಕಿಸುವ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆಗೆ ಸಂಪರ್ಕ ಮಾಡಲು ಅನುಕೂಲವಾಗುತ್ತದೆ.

ಗುರುಕುಲ ಶಾಲೆಯ ಬಳಿ ಎರಡು ರಸ್ತೆಗಳ ಪೈಕಿ ರಸ್ತೆಯ ಬಲಕ್ಕೆ (ಪೂರ್ವ ದಿಕ್ಕಿಗೆ) ಘನ ವಾಹನಗಳು ಚಲಿಸಿ ಕಾಳಾವರ ಬಸ್‌ಸ್ಟಾಪ್ (ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಜಂಕ್ಷನ್)ನಲ್ಲಿ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸಿದ್ದು, ಹಾಲಾಡಿ- ಸೋಮೇಶ್ವರ ಕಡೆ ವಾಹನಗಳಿಗೆ ಸಂಚರಿಸಲು ಯೋಗ್ಯವಾದ ಮಾರ್ಗವಾಗಿದೆ. ಅಲ್ಲದೇ ಬೀಜಾಡಿ-ವಕ್ವಾಡಿ-ಕಾಳಾವರ ರಸ್ತೆ ಯಲ್ಲಿ ಚಲಿಸಿ ಬಂದ ವಾಹನಗಳು ವಕ್ವಾಡಿ ರಸ್ತೆಯಲ್ಲಿ ನೇರವಾಗಿ ಬಂದು ಚಾರುಕೊಟ್ಟಿಯಿಂದಾಗಿ ಸಂಚರಿಸಿದರೆ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸುತ್ತದೆ. ಈ ರಸ್ತೆಯು ತೆಕ್ಕಟ್ಟೆ, ಕೆದೂರು ಕಡೆಗೆ ಹೋಗುವ ವಾಹನಗಳಿಗೆ ಅನುಕೂಲವಾದ ಮಾರ್ಗವಾಗಿದೆ.

ಕುಂದಾಪುರ, ತಲ್ಲೂರು, ಹೆಮ್ಮಾಡಿ. ಬೈಂದೂರು ಕಡೆಯಿಂದ ಹುಣ್ಸೆಮಕ್ಕಿ, ಬಿದ್ಕಲ್‌ಕಟ್ಟೆ, ಹಾಲಾಡಿ-ಸೋಮೇಶ್ವರ ಕಡೆಗೆ ತೆರಳುವ ಭಾರಿ ವಾಹನ ಹಾಗೂ ಬಸ್ಸುಗಳಿಗೆ ಬಸ್ರೂರು ಮೂರು ಕೈ ಜಂಕ್ಷನ್‌ನಲ್ಲಿ ರಾ.ಹೆ. 66 ರಸ್ತೆಯಲ್ಲಿ ಪೂರ್ವಕ್ಕೆ ಚಲಿಸಿ ಕೋಣಿ, ಬಸ್ರೂರು, ಬಿ.ಹೆಚ್. ಕ್ರಾಸ್ ಮಾರ್ಗವಾಗಿ ಜಪ್ತಿ ಮೂಲಕ ಸಂಚರಿಸಿ, ಹುಣ್ಸೆಮಕ್ಕಿ ತಲುಪಿದರೆ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸುತ್ತದೆ. ಈ ರಸ್ತೆ ಮೇಲೆ ತಿಳಿಸಿದ ಸ್ಥಳಗಳಿಂದ ಬರುವ ವಾಹನಗಳಿಗೆ ಅತ್ಯಂತ ಸೂಕ್ತವಾಗಿದೆ.

ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬೈಂದೂರು ಕಡೆಯಿಂದ ಹುಣ್ಸೆಮಕ್ಕಿ, ಬಿದ್ಕಲ್‌ಕಟ್ಟೆ, ಹಾಲಾಡಿ-ಸೋಮೇಶ್ವರ ಕಡೆಗೆ ಹೋಗುವ ಲಘು ವಾಹನಗಳಿಗೆ (ಬಸ್ಸುಗಳಿಗೆ) ಮೇಲೆ ತಿಳಿಸಿದ ಮಾರ್ಗವಲ್ಲದೇ ಕೋಣಿ ಶಾಲೆ ಹಾಗೂ ಎಚ್‌ಎಂಟಿ ರಸ್ತೆ ಮೂಲಕ ಚಲಿಸಿ ಕಟ್ಗೆರೆ ಕಡೆಗೆ ಸಂಚರಿಸಿದರೆ ಕೋಟೇಶ್ವರ- ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸುತ್ತದೆ. ಇದು ಲಘು ವಾನಗಳಿಗೆ ಸೂಕ್ತವಾದ ಮಾರ್ಗವಾಗಿದೆ
ಮೇಲಿನ ಎಲ್ಲಾ ಬದಲಿ ಮಾರ್ಗಗಳು ಹಾಲಾಡಿ ಕಡೆಯಿಂದ ಉಡುಪಿ ಅಥವಾ ಕುಂದಾಪುರ ಕಡೆಗೆ ಚಲಿಸುವ ವಾಹನಗಳಿಗೂ ಸಹ ಸೂಕ್ತ ಮಾರ್ಗವಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಮೇಲಿನ ಎಲ್ಲಾ ಬದಲಿ ಮಾರ್ಗಗಳು ಹಾಲಾಡಿ ಕಡೆಯಿಂದ ಉಡುಪಿ ಅಥವಾ ಕುಂದಾಪುರ ಕಡೆಗೆ ಚಲಿಸುವ ವಾಹನಗಳಿಗೂ ಸಹ ಸೂಕ್ತ ಮಾರ್ಗವಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X