ವಾರ್ಡರ್-ಜೈಲರ್ ಹುದ್ದೆ: ಲಿಖಿತ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಮೇ 17: ವಾರ್ಡರ್ ಮತ್ತು ಜೈಲರ್ ಹುದೆಗಳ ಭರ್ತಿಗೆ ಮೇ 19ರ ರವಿವಾರ ಬೆಳಗ್ಗೆ ಮತ್ತು ಮಧ್ಯಾಹ್ನ ನಿಗದಿಪಡಿಸಿದ್ದ ಲಿಖಿತ ಪರೀಕ್ಷೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
17,800 ವಾರ್ಡರ್ ಹಾಗೂ 3,600 ಜೈಲರ್ ಹುದ್ದೆಗಳಿಗೆ ಮೇ 19ರ ಬೆಳಗ್ಗೆ 11ರಿಂದ 12:30 ಹಾಗೂ ಮಧ್ಯಾಹ್ನ 2:30ರಿಂದ 4 ಗಂಟೆಯ ವರೆಗೆ ಲಿಖಿತ ಪರೀಕ್ಷೆ ನಡೆಯಬೇಕಿತ್ತು. ಮುಂದಿನ ಲಿಖಿತ ಪರೀಕ್ಷೆ ದಿನಾಂಕವನ್ನು ತಿಳಿಸಲಾಗುವುದು ಎಂದು ಅನುಚೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





