ಗಾಝಾದ ಮುಸ್ಲಿಮರಿಗಾಗಿ 1.5 ಮಿಲಿಯನ್ ಡಾಲರ್ ದಾನ ಮಾಡಿದ ಕ್ರಿಸ್ಟಿಯಾನೋ ರೊನಾಲ್ಡೊ: ವರದಿ
ರಮಝಾನ್ ನಲ್ಲಿ ವಿಶ್ವಪ್ರಸಿದ್ಧ ಫುಟ್ಬಾಲ್ ಆಟಗಾರನ ನೆರವು
ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ರಮಝಾನ್ ನಲ್ಲಿ ಗಾಝಾದಲ್ಲಿರುವ ಮುಸ್ಲಿಮರಿಗಾಗಿ 1.5 ಮಿಲಿಯನ್ ಡಾಲರ್ ಗಳನ್ನು (10.5 ಕೋಟಿ ರೂ.) ದಾನ ಮಾಡಿದ್ದಾರೆ ಎಂದು ವರದಿಯಾಗಿದೆ.
2012ರಲ್ಲಿ ತನ್ನ ಯುರೋಪಿಯನ್ ಗೋಲ್ಡನ್ ಬೂಟನ್ನು ಹರಾಜು ಹಾಕಿದ್ದ ರೊನಾಲ್ಡೋ, ಅದರಿಂದ ಬಂದ 1.5 ಮಿಲಿಯನ್ ಡಾಲರ್ ಹಣವನ್ನು ಗಾಝಾದಲ್ಲಿ ಹಲವು ಶಾಲೆಗಳ ನಿರ್ಮಾಣಕ್ಕಾಗಿ ದಾನ ಮಾಡಿದ್ದರು.
ಪೋರ್ಚುಗಲ್ ಮತ್ತು ಇಸ್ರೇಲ್ ನಡುವಿನ ವಿಶ್ವಕಪ್ ಅರ್ಹತಾ ಪಂದ್ಯದ ವೇಳೆ ಇಸ್ರೇಲಿ ಆಟಗಾರನೊಂದಿಗೆ ಟಿಶರ್ಟ್ ಬದಲಿಸಲು ನಿರಾಕರಿಸಿದ್ದ ರೊನಾಲ್ಡೋ ಈ ಹಿಂದೆ ಸುದ್ದಿಯಾಗಿದ್ದರು.
ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ರೊನಾಲ್ಡೋ 1.5 ಮಿಲಿಯನ್ ಡಾಲರ್ ನೀಡಿರುವುದಾಗಿ ವರದಿ ಮಾಡಿದ್ದರೂ, ಈ ಬಗ್ಗೆ ಸ್ವತಃ ರೊನಾಲ್ಡೋ ಯಾವುದೇ ಹೇಳಿಕೆ ನೀಡಿಲ್ಲ.
Next Story