ಕುದ್ರೋಳಿ: ಯುನಿವೆಫ್ ವತಿಯಿಂದ ರಮಝಾನ್ ಪ್ರವಚನ
ಮಂಗಳೂರು: ಪವಿತ್ರ ರಮಝಾನ್ ಪ್ರಯುಕ್ತ ಯುನಿವೆಫ್ ಕರ್ನಾಟಕ ಇದರ ದ.ಕ. ಜಿಲ್ಲಾ ಘಟಕದ ವತಿಯಿಂದ ಕುದ್ರೋಳಿಯ ಜಾಮಿಯಾ ಮಸೀದಿಯಲ್ಲಿ ಮೇ 18 ಮತ್ತು ಮೇ 19ರಂದು ಝುಹರ್ ನಮಾಝ್ ನಂತರ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರ ರಮಝಾನ್ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಮೇ 18ರಂದು "ಆಖಿರತ್ ನ ಭಯದ ಕ್ಷಣಗಳು" ಎಂಬ ವಿಷಯದಲ್ಲೂ, ಮೇ 19ರಂದು "ಸಹಾಬಾಗಳ ತ್ಯಾಗೋಜ್ವಲ ಬದುಕು" ಎಂಬ ವಿಷಯದಲ್ಲೂ ಪ್ರವಚನ ನಡೆಯಲಿದೆ ಎಂದು ಕುದ್ರೋಳಿ ಶಾಖಾಧ್ಯಕ್ಷ ಸೈಫುದ್ದೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





