ಎವರೆಸ್ಟ್ ಏರಿದ ಮೊದಲ ಆಫ್ರಿಕನ್ ಮಹಿಳೆ
ಕಠ್ಮಂಡು, ಮೇ 17: ದಕ್ಷಿಣ ಆಫ್ರಿಕದ ಉದ್ಯಮಿ 47 ವರ್ಷದ ಸಾರಾಯ್ ಖುಮಾಲೊ ಗುರುವಾರ ಜಗತ್ತಿನ ಅತ್ಯುನ್ನತ ಶಿಖರ ವೌಂಟ್ ಎವರೆಸ್ಟನ್ನು ಏರಿದ್ದಾರೆ. ಈ ಮೂಲಕ, ಮೌಂಟ್ ಎವರೆಸ್ಟ್ ಏರಿದ ಮೊದಲ ಕರಿಯ ಆಫ್ರಿಕನ್ ಮಹಿಳೆಯಾಗಿದ್ದಾರೆ.
ಈ ಹಿಂದಿನ ಮೂರು ಪ್ರಯತ್ನಗಳು ಕೆಟ್ಟ ಹವಾಮಾನ, ಗಾಯ ಮತ್ತು ದುರಂತಗಳಿಂದಾಗಿ ವಿಫಲವಾದ ಬಳಿಕ, ಗುರುವಾರ ಅವರು 8,848 ಮೀಟರ್ ಎತ್ತರದ ಶಿಖರದ ತುದಿಯನ್ನು ತಲುಪಿದರು.
2014ರಲ್ಲಿ ಅವರು ತನ್ನ ಮೊದಲ ಪ್ರಯತ್ನವನ್ನು ಮಾಡಿದರು. ಆ ವರ್ಷ ನೀರ್ಗಲ್ಲು ಉರುಳಿ 16 ಮಾರ್ಗದರ್ಶಿಗಳು ಮೃತಪಟ್ಟ ಬಳಿಕ, ಆರೋಹಣವನ್ನು ನಿಯಂತ್ರಿಸಲಾಗಿತ್ತು.
Next Story