ಮಂಗಳೂರು : ರಮಝಾನ್ಗೆ ‘ವಾರ್ಡ್ರೋಬ್’ನಲ್ಲಿ ವಿಶೇಷ ಉಡುಪುಗಳ ಬೃಹತ್ ಸಂಗ್ರಹ
ಮಂಗಳೂರು, ಮೇ 18: ನಗರದ ಎಸ್ಸಿಎಸ್ ಆಸ್ಪತ್ರೆ ಸಮೀಪ , ಭೀಮಾ ಜ್ಯೂವೆಲರಿ ಎದುರು ಇತ್ತೀಚಿಗೆ ಶುಭಾರಂಭವಾದ ‘ವಾರ್ಡ್ರೋಬ್’ ಉಡುಪುಗಳ ಮಳಿಗೆಯಲ್ಲಿ ರಮಝಾನ್ಗೆ ವಿಶೇಷ ಸಂಗ್ರಹ ಬಂದಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
‘ವಾರ್ಡ್ರೋಬ್’ನಲ್ಲಿ ಮಕ್ಕಳ ಬಟ್ಟೆಬರೆಗಳ ಮಳಿಗೆ ಪ್ರತ್ಯೇಕ ವಿಶಾಲ ವಿಭಾಗ ‘ಟಿನಿ ವಾರ್ಡ್ರೋಬ್’ನ್ನು ಕೂಡ ತೆರೆಯಲಾಗಿದೆ.
ಇದರಲ್ಲಿ ಪುಟ್ಟ ಮಗುವಿನಿಂದ 14 ವರ್ಷ ಪ್ರಾಯದೊಳಗಿನ ಮಕ್ಕಳಿಗೆ ವಿವಿಧ ಬ್ರಾಂಡ್ನ ಕಣ್ಮನ ಸೆಳೆಯುವ ಬಟ್ಟೆಬರೆಗಳು ಮಿತ ದರದಲ್ಲಿ ಲಭ್ಯವಿದೆ. 14 ವರ್ಷದೊಳಗಿನ ಹೆಣ್ಣು ಮಕ್ಕಳ ಪಾರ್ಟಿ ವೇರ್, ಫ್ರಾಕ್ಸ್, ಕುರ್ತಾ, ಪ್ಲಾಝಾ ಪ್ಯಾಂಟ್, ಜೀನ್ಸ್, ವೆಸ್ಟರ್ನ್ ಟಾಪ್ಸ್ ಇತ್ಯಾದಿಗಳ ಬೃಹತ್ ಸಂಗ್ರಹವಿದೆ. ಮಕ್ಕಳ ಉಡುಪುಗಳ ಬೈಸಿಕಲ್ ಬ್ರಾಂಡ್ ಉಡುಪುಗಳೂ ಇಲ್ಲಿವೆ.
ಯುವಕರು ಮೆಚ್ಚುವ ಆಧುನಿಕ ಶೈಲಿಗೆ ಅನುಗುಣವಾಗಿರುವ ಹೊಸ ಹೊಸ ವಿನ್ಯಾಸದ ಪ್ಯಾಂಟ್, ಶರ್ಟ್, ಟಿ ಶರ್ಟ್, ಜಾಕೆಟ್ ಮತ್ತಿತರ ಬಟ್ಟೆಬರೆಗಳು ಇಲ್ಲಿ ಲಭ್ಯವಿದೆ. ಗಂಡು ಮಕ್ಕಳ ಜೀನ್ಸ್, ಶರ್ಟ್, ಟೀಶರ್ಟ್, ಶಾರ್ಟ್ಸ್, ಕಾರ್ಗೋ ಪ್ಯಾಂಟ್ ಲಭ್ಯವಿದೆ. ಜೊತೆಗೆ ವಿವಿಧ ಬ್ರಾಂಡ್ನ ಬೈಸಿಕಲ್ ಕೂಡ ಲಭ್ಯವಿದೆ.
ರಮಝಾನ್ ಪ್ರಯುಕ್ತ ಬಟ್ಟೆಬರೆಗಳ ದರದಲ್ಲಿ ವಿಶೇಷ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.