ಮೇ 19: ‘ಸಂವಿಧಾನದ ಕಾಲಾಳು’ ಬಿಡುಗಡೆ
ಮಂಗಳೂರು, ಮೇ 19: ಸಮುದಾಯ ಮಂಗಳೂರು ಮತ್ತು ಸಂತ ಅಲೋಶಿಯಸ್ ಕಾಲೇಜಿನ ಸಹಭಾಗಿತ್ವದಲ್ಲಿ ಬೆಂಗಳೂರಿನ ಕ್ರಿಯಾ ಮಾಧ್ಯಮವು ಮೇ 19ರಂದು ಬೆಳಗ್ಗೆ 10:30ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಪುಸ್ತಕದ ಕನ್ನಡ ಅನುವಾದ ‘ಸಂವಿಧಾನದ ಕಾಲಾಳು’ ಬಿಡುಗಡೆ ಹಾಗೂ ವಿಚಾರ ಸಂಕಿರಣ ಹಮ್ಮಿಕೊಂಡಿದೆ.
ಕಾರ್ಯಕ್ರಮದಲ್ಲಿ ತೀಸ್ತಾ ಸೆಟಲ್ವಾಡ್, ಜಿ.ರಾಜಶೇಖರ, ದಿನೇಶ್ ಅಮೀನ್ ಮಟ್ಟು, ಎ.ಎಂ.ನರಹರಿ, ಸತ್ಯಾ ಎಸ್.,ಟಿ.ಸಿ.ಎಂ.ಶರೀಫ್ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





