Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ರಾಜೀವ್ ಗಾಂಧಿ ದೇಶಕ್ಕೆ ನೀಡಿದ 5...

ರಾಜೀವ್ ಗಾಂಧಿ ದೇಶಕ್ಕೆ ನೀಡಿದ 5 ಕಾಣಿಕೆಗಳು

ಮೇ 21: ರಾಜೀವ್ ಗಾಂಧಿ ಹುತಾತ್ಮ ದಿನದ ಪ್ರಯುಕ್ತ ವಿಶೇಷ ಲೇಖನ

ಮಾಯಾಂಕ್ ಮಿಶ್ರಾಮಾಯಾಂಕ್ ಮಿಶ್ರಾ18 May 2019 11:18 PM IST
share
ರಾಜೀವ್ ಗಾಂಧಿ ದೇಶಕ್ಕೆ ನೀಡಿದ 5 ಕಾಣಿಕೆಗಳು

ದೇಶಾದ್ಯಂತ ಪ್ರೌಢ ಶಿಕ್ಷಣದ ವಿಸ್ತರಣೆ ಮತ್ತು ಆಧುನೀಕರಣಕ್ಕಾಗಿ 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜೀವ್ ಗಾಂಧಿ ಘೋಷಿಸಿದರು. ಅದರ ಫಲವಾಗಿ ನಿರ್ಮಾಣಗೊಂಡ ಜವಾಹರ್ ನವೋದಯ ವಿದ್ಯಾನಿಲಯಗಳಂತಹ ವಸತಿ ಶಾಲೆಗಳ ಮೂಲಕ ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯ ವಾಯಿತು. ಅಲ್ಪಾವಧಿಯಲ್ಲೇ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಿದ ರಾಜೀವ್ ಗಾಂಧಿ ಮೇ 21, 1991ರಂದು 46ನೇ ವಯಸ್ಸಿನಲ್ಲಿ ಸಾವನ್ನಪ್ಪಿದರು. ಆದರೆ ಅವರು ದೇಶಕ್ಕೆ ನೀಡಿರುವ ಕಾಣಿಕೆಗಳು ಭಾರತೀಯ ಸಮಾಜ ಮತ್ತು ರಾಜಕೀಯದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯುವಂತೆ ಮಾಡಿದೆ.

ಪ್ರಧಾನ ಮಂತ್ರಿ ಇಂದಿರಾ ಗಾಂಧಿಯ ಹತ್ಯೆ ಮಾಡಲಾಗಿತ್ತು ಮತ್ತು ಈ ಹತಾಶ ವಾತಾವರಣ ಜನರು ತಮ್ಮ ನೂತನ ನಾಯಕನ ಆಗಮನಕ್ಕಾಗಿ ದಾರಿ ಕಾಯುತ್ತಿದ್ದರು. ಅದರ ಫಲವಾಗಿ ಚುನಾವಣೆಯಲ್ಲಿ ಅಭೂತಪೂರ್ವ ಜನಾದೇಶ ಹೊರಬಿದ್ದು ದೇಶ ಯುವ ರಾಜೀವ್ ಗಾಂಧಿಯನ್ನು ಇಂದಿರಾ ಗಾಂಧಿಯ ಸಮರ್ಥ ಉತ್ತರಾಧಿಕಾರಿ ಎಂದು ನಿರ್ಧರಿಸಿತು. ಆ ಮೂಲಕ ರಾಜೀವ್ 40ರ ಹರೆಯದಲ್ಲಿ ದೇಶದ ಪ್ರಧಾನಿ ಪಟ್ಟ ಏರಿದ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಂದಿನ ಐದು ಕ್ರಿಯಾಶೀಲ ವರ್ಷಗಳಲ್ಲಿ ಪ್ರಧಾನಿ ರಾಜೀವ್ ಗಾಂಧಿ ದೇಶವನ್ನು 21ನೇ ಶತಮಾನಕ್ಕೆ ಕೊಂಡೊಯ್ಯಲು ಅನೇಕ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದರು. ಭಾರತ ರತ್ನ ರಾಜೀವ್ ಗಾಂಧಿಯವರ ಹುತಾತ್ಮ ದಿನದ ಅಂಗವಾಗಿ ಅವರ ಕೆಲವೊಂದು ಸ್ಮರಣೀಯ ಕಾರ್ಯಗಳನ್ನು ಇಲ್ಲಿ ನೀಡಲಾಗಿದೆ.

ಕೃಪೆ: ದಿ ಕ್ವಿಂಟ್

► ಮೊದಲ ಉದಾರೀಕರಣ?

ದೇಶದ ಆರ್ಥಿಕತೆ ಹೆಚ್ಚೆಚ್ಚು ನಿಯಂತ್ರಣಗಳನ್ನು ಸೃಷ್ಟಿಸುವ ವಿಷವರ್ತುಲದಲ್ಲಿ ಸಿಲುಕಿದೆ. ನಿಯಂತ್ರಣಗಳು ಭ್ರಷ್ಟಾಚಾರಕ್ಕೆ ದಾರಿ ಮಾಡುತ್ತದೆ, ಎಲ್ಲ ವಿಳಂಬಗಳಿಗೆ ದಾರಿ ಮಾಡುತ್ತದೆ ಮತ್ತು ನಾವು ಅದನ್ನು ತಡೆಯಲು ಬಯಸುತ್ತೇವೆ ಎಂದು ರಾಜೀವ್ 1985ರಲ್ಲೇ ಹೇಳಿದ್ದರು. ಅವರು ಕೆಲವೊಂದು ಕ್ಷೇತ್ರಗಳಲ್ಲಿ ಈ ವಿಷವರ್ತುಲವನ್ನು ತೆಗೆದುಹಾಕಲು ಪ್ರಯತ್ನಿಸಿದರು ಕೂಡಾ. ಅವರ ಈ ಕ್ರಮಗಳು ಮುಂದಿನ ಕೆಲವು ವರ್ಷಗಳಲ್ಲಿ ಪೂರ್ಣಪ್ರಮಾಣದ ಆರ್ಥಿಕ ಸುಧಾರಣೆಗೆ ಮುನ್ನುಡಿಯಾಗಲಿದ್ದವು. ರಾಜೀವ್ ಗಾಂಧಿ ಆದಾಯ ಮತ್ತು ಕಾರ್ಪೊರೇಟ್ ತೆರಿಗೆ ದರಗಳನ್ನು ಇಳಿಸಿದರು. ಪರವಾನಿಗೆ ನಿಯಮ ಸರಳಗೊಳಿಸಿದರು ಮತ್ತು ಕಂಪ್ಯೂಟರ್, ಔಷಧಿ ಮತ್ತು ಜವಳಿ ಕ್ಷೇತ್ರಗಳನ್ನು ನಿಯಂತ್ರಣಮುಕ್ತಗೊಳಿಸಿದರು. ಅನೇಕ ವಸ್ತುಗಳ ಆಮದು ಮೇಲಿನ ಸುಂಕ ಕಡಿಮೆಗೊಳಿಸಲಾಯಿತು ಮತ್ತು ರಫ್ತುದಾರರಿಗೆ ಉಡುಗೊರೆಗಳನ್ನು ಪರಿಚಯಿಸಲಾಯಿತು. ಅಂತರ್ಮುಖಿಯಾಗಿದ್ದ ಆರ್ಥಿಕತೆಯಿಂದಾಗಿ ಹೊರಗಿನಿಂದ ಸ್ವಚ್ಛಗಾಳಿ ಬೀಸಲು ಆರಂಭಿಸಿತು. ಇದರಿಂದ ಮುಂದೆ ಉಂಟಾದ ಆರ್ಥಿಕ ಉದಾರೀಕರಣದ ಬೀಜವನ್ನು ಬಿತ್ತಿದ ಹೆಗ್ಗಳಿಕೆ ರಾಜೀವ್‌ಗೆ ಸಂದ ಬೇಕಲ್ಲವೇ?

► ಚೀನಾದ ಮಹಾಗೋಡೆಯ ದಾಟಿ

ರಾಜೀವ್ ಗಾಂಧಿಯವರು 1988ರಲ್ಲಿ ಚೀನಾಕ್ಕೆ ನೀಡಿದ ಭೇಟಿ ನಮ್ಮ ಅತ್ಯಂತ ಪ್ರಮುಖ ಮತ್ತು ಸಂದಿಗ್ಧ ನೆರೆದೇಶದ ಜೊತೆಗಿನ ಸಂಬಂಧವನ್ನು ಸಾಮಾನ್ಯಗೊಳಿಸಲು ತೆಗೆದುಕೊಂಡ ದಿಟ್ಟ ಮತ್ತು ಐತಿಹಾಸಿಕ ಹೆಜ್ಜೆಯಾಗಿತ್ತು. 1954ರಿಂದ ಎರಡೂ ದೇಶಗಳ ಪ್ರಮುಖರ ಮಧ್ಯೆ ನಡೆದ ಮೊದಲ ಭೇಟಿ ಅದಾಗಿತ್ತು. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡಲು ಜಂಟಿ ಕ್ರಿಯಾ ಗುಂಪನ್ನು ರಚಿಸುವ ನಿರ್ಧಾರ ಒಂದು ಮಹತ್ವದ ಕ್ರಮವಾಗಿತ್ತು. ಆ ಕಾಲದಲ್ಲಿ ಹೆಚ್ಚಾಗಿ ವರದಿಯಾಗುತ್ತಿದ್ದುದು ರಾಜೀವ್ ಗಾಂಧಿ ಮತ್ತು ಚೀನಾದ ಅಗ್ರಮಾನ್ಯ ನಾಯಕ ಡೆನ್ ಕ್ಸಿಯೊಪಿಂಗ್ ನಡುವಿನ ಗೆಳೆತನ. ರಾಜೀವ್ ಗಾಂಧಿ ಜೊತೆ ನಡೆಸಿದ 90 ನಿಮಿಷಗಳಷ್ಟು ದೀರ್ಘ ಮಾತುಕತೆಯ ವೇಳೆ ಡೆಂಗ್ ರಾಜೀವ್ ಕುರಿತು, ನೀವು ಯುವಕರಾಗಿದ್ದೀರಿ ಮತ್ತು ಮುಂದಿನ ಭವಿಷ್ಯವಾಗಿದ್ದೀರಿ ಎಂದು ಹೇಳಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇಬ್ಬರು ಗಣ್ಯ ನಾಯಕರ ಮಧ್ಯೆ ನಡೆದ ಮಾತುಕತೆಯ ಸಮಯವೂ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಯಾಕೆಂದರೆ ಡೆಂಗ್ ಯಾವ ವಿದೇಶಿ ಗಣ್ಯರ ಜೊತೆಗೂ ಹೆಚ್ಚು ಸಮಯ ಕಳೆಯುತ್ತಿರಲಿಲ್ಲ.

► ಚೀನಾದ ಮಹಾಗೋಡೆಯ ದಾಟಿ

ರಾಜೀವ್ ಗಾಂಧಿಯವರು 1988ರಲ್ಲಿ ಚೀನಾಕ್ಕೆ ನೀಡಿದ ಭೇಟಿ ನಮ್ಮ ಅತ್ಯಂತ ಪ್ರಮುಖ ಮತ್ತು ಸಂದಿಗ್ಧ ನೆರೆದೇಶದ ಜೊತೆಗಿನ ಸಂಬಂಧವನ್ನು ಸಾಮಾನ್ಯಗೊಳಿಸಲು ತೆಗೆದುಕೊಂಡ ದಿಟ್ಟ ಮತ್ತು ಐತಿಹಾಸಿಕ ಹೆಜ್ಜೆಯಾಗಿತ್ತು. 1954ರಿಂದ ಎರಡೂ ದೇಶಗಳ ಪ್ರಮುಖರ ಮಧ್ಯೆ ನಡೆದ ಮೊದಲ ಭೇಟಿ ಅದಾಗಿತ್ತು. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡಲು ಜಂಟಿ ಕ್ರಿಯಾ ಗುಂಪನ್ನು ರಚಿಸುವ ನಿರ್ಧಾರ ಒಂದು ಮಹತ್ವದ ಕ್ರಮವಾಗಿತ್ತು. ಆ ಕಾಲದಲ್ಲಿ ಹೆಚ್ಚಾಗಿ ವರದಿಯಾಗುತ್ತಿದ್ದುದು ರಾಜೀವ್ ಗಾಂಧಿ ಮತ್ತು ಚೀನಾದ ಅಗ್ರಮಾನ್ಯ ನಾಯಕ ಡೆನ್ ಕ್ಸಿಯೊಪಿಂಗ್ ನಡುವಿನ ಗೆಳೆತನ. ರಾಜೀವ್ ಗಾಂಧಿ ಜೊತೆ ನಡೆಸಿದ 90 ನಿಮಿಷಗಳಷ್ಟು ದೀರ್ಘ ಮಾತುಕತೆಯ ವೇಳೆ ಡೆಂಗ್ ರಾಜೀವ್ ಕುರಿತು, ನೀವು ಯುವಕರಾಗಿದ್ದೀರಿ ಮತ್ತು ಮುಂದಿನ ಭವಿಷ್ಯವಾಗಿದ್ದೀರಿ ಎಂದು ಹೇಳಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇಬ್ಬರು ಗಣ್ಯ ನಾಯಕರ ಮಧ್ಯೆ ನಡೆದ ಮಾತುಕತೆಯ ಸಮಯವೂ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಯಾಕೆಂದರೆ ಡೆಂಗ್ ಯಾವ ವಿದೇಶಿ ಗಣ್ಯರ ಜೊತೆಗೂ ಹೆಚ್ಚು ಸಮು ಕಳೆಯುತ್ತಿರಲಿಲ್ಲ.

ರಾಜೀವ್ ಗಾಂಧಿಯವರನ್ನು ‘ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಕ್ರಾಂತಿಯ ಪಿತಾಮಹ’ ಎಂದು ಕರೆಯಲಾಗುತ್ತದೆ. ಅವರು ನಿಜಾರ್ಥದಲ್ಲಿ ಡಿಜಿಟಲ್ ಇಂಡಿಯಾದ ಶಿಲ್ಪಿಯಾಗಿದ್ದಾರೆ. ರಾಜೀವ್ ಆಡಳಿತದಲ್ಲಿ ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರ (ಸಿ-ಡಾಟ್)ವನ್ನು ಸ್ಥಾಪಿಸಲಾಯಿತು. ಭಾರತದ ಗ್ರಾಮೀಣ ಪ್ರದೇಶಗಳನ್ನು ಹೊರಗಿನ ಜಗತ್ತಿನ ಜೊತೆ ಸಂಪರ್ಕಿಸಿದ ಪಿಸಿಒ ಕ್ರಾಂತಿ ರಾಜೀವ್ ಕನಸಿನ ಕೂಸಾಗಿದೆ.

► ಜನರಿಗೆ ಅಧಿಕಾರ

ರಾಜೀವ್ ಗಾಂಧಿ ಓರ್ವ ಆಧುನಿಕವಾದಿ ಮತ್ತು ನಗರ ಭಾರತದ ಬಗ್ಗೆ ಹೆಚ್ಚು ಯೋಚಿಸುವವರು ಎಂದು ನಂಬಲಾಗಿದ್ದ ಕಾರಣ ಜನರಿಗೆ ಅಧಿಕಾರ ಎಂಬ ಹೇಳಿಕೆಯನ್ನು ಒಂದು ರಾಜಕೀಯ ಗಿಮಿಕ್ ಎಂದು ಭಾವಿಸಲಾಗಿತ್ತು. ಆದರೆ ಜನರಿಗೆ ಅಧಿಕಾರ ಎಂಬ ತನ್ನ ಪರಿಕಲ್ಪನೆಯಡಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಗೊಳಿಸಲು ಮುಂದಾಗಿದ್ದು ರಾಜೀವ್ ಮಾಡಿದ ದಿಟ್ಟ ಸುಧಾರಣೆಗಳಲ್ಲಿ ಒಂದಾಗಿತ್ತು. ಪಂಚಾಯತ್‌ರಾಜ್‌ಗೆ ಸಾಂವಿಧಾನಿಕ ಮಾನ್ಯತೆಯನ್ನು ಕೋರಿ ಕಾಂಗ್ರೆಸ್ 1989ರಲ್ಲಿ ನಿರ್ಣಯ ಮಂಡಿಸಿತು. 1990ರಲ್ಲಿ ಅದು ನಿಜವಾಯಿತು.

ಅಧಿಕಾರ ವಿಕೇಂದ್ರೀಕರಣದ ಹೊರತಾಗಿ ರಾಜೀವ್ ಸರಕಾರಿ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನ ಕೆಲಸ (1989) ಮತ್ತು ಸಂಪುಟ ಪುನರ್‌ರಚನೆಯಂತಹ ಕ್ರಮಗಳನ್ನೂ ಪರಿಚಯಿಸಿದರು. ಗ್ರಾಮೀಣ ಮಕ್ಕಳಿಗಾಗಿ ನವೋದಯ ವಿದ್ಯಾಲಯಗಳ ಸ್ಥಾಪನೆ ರಾಜೀವ್ ಸರಕಾರದ ಅವಧಿಯ ಕಾಣಿಕೆಯಾಗಿದೆ.

► ಯುವಶಕ್ತಿಯ ಸಾಮರ್ಥ್ಯ

1988ರಲ್ಲಿ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ ಪರಿಣಾಮ ಐದು ಕೋಟಿ ಹೆಚ್ಚುವರಿ ಜನರು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು. ಈ ನಿರ್ಧಾರಕ್ಕೆ ಟೀಕೆಗಳು ಬಂದರೂ ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯನ್ನು ಬಳಸುವುದು ಅಗತ್ಯ ಎಂದು ರಾಜೀವ್ ಬಲವಾಗಿ ನಂಬಿದ್ದರು.

share
ಮಾಯಾಂಕ್ ಮಿಶ್ರಾ
ಮಾಯಾಂಕ್ ಮಿಶ್ರಾ
Next Story
X