Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ದೇವಸ್ಥಾನ ಪ್ರವೇಶ ಮತ್ತು ನಾರಾಯಣ ಗುರು

ದೇವಸ್ಥಾನ ಪ್ರವೇಶ ಮತ್ತು ನಾರಾಯಣ ಗುರು

ಇತಿಹಾಸ

ವಾರ್ತಾಭಾರತಿವಾರ್ತಾಭಾರತಿ19 May 2019 1:24 PM IST
share
ದೇವಸ್ಥಾನ ಪ್ರವೇಶ ಮತ್ತು ನಾರಾಯಣ ಗುರು

ಈ ಅಧ್ಯಾಯ ವೈಕಮ್ ಸತ್ಯಾಗ್ರಹದ ಸಂದರ್ಭದಲ್ಲಿ ಸ್ವಾಮಿ ನಾರಾಯಣ ಗುರುಗಳು ಮತ್ತು ಅವರ ಶಿಷ್ಯನ ಮಧ್ಯೆ ನಡೆದ ಸಂಭಾಷಣೆಯನ್ನು ಹೊಂದಿದೆ. ಸತ್ಯಾಗ್ರಹದ ಸಮಯದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ಈ ಕಷ್ಟಗಳು ಅವರ ಸಹನೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚುಗೊಳಿಸುತ್ತದೆ. ಸಹನೆಯ ಈ ಶಕ್ತಿಯೇ ಎಲ್ಲ ಪರಿವರ್ತನೆಗಳ ಮಾಧ್ಯಮವಾಗಬೇಕು ಎಂಬ ದೃಷ್ಟಿಕೋನ ವನ್ನು ಸ್ವಾಮಿ ಹೊಂದಿದ್ದರು. ಅದು ಶರಣಾಗತಿಯಲ್ಲ, ನಿಷ್ಕ್ರಿಯೆಯೂ ಅಲ್ಲ. ಅದು ರಚನಾತ್ಮಕ ವುನೋ ಭೂಮಿಕೆಯ ಅದಮ್ಯ ಅಭಿವ್ಯಕ್ತಿ.

ಅಂತಹ ವ್ಯಕ್ತಿಗಳೇ ಭೂಮಿಯ ಚಹರೆ ಯನ್ನು ಬದಲಿಸ ಬಲ್ಲರು ಎಂದು ಸ್ವಾಮಿ ಪದೇಪದೆ ಹೇಳುತ್ತಿದ್ದರು. ಏಸು ವಿನಂತಹ ಸ್ವನಿಯಂತ್ರಣವನ್ನು ಗಳಿಸಬೇಕು ಎಂದು ಅವರು ತನ್ನ ಶಿಷ್ಯರಿಗೆ ಕಿವಿಮಾತು ಹೇಳುತ್ತಿದ್ದರು. ಈ ಮೇಲಿನ ಸಂಭಾಷಣೆಯಲ್ಲಿ, ಅಂತಹ ಸಿದ್ಧತೆಯೊಂದಿಗೆ ನ್ಯಾಯದ ಪರಾಕಾಷ್ಠೆಗೆ ತಲುಪುವಂತೆ ಸ್ವಾಮಿ ಕರೆ ನೀಡಿದ್ದಾರೆ.

ಪ್ರತಿ ದೇವಸ್ಥಾನವನ್ನು ಪ್ರವೇಶಿಸಿ, ಪ್ರತಿದಿನ, ಪ್ರತಿಯೊಬ್ಬ ಪ್ರವೇಶಿಸಿ ಎಂದು ಅವರು ಕೆಳಜಾತಿಯವರಿಗೆ ನೀಡಿದ ಕರೆಯಲ್ಲಿ ಧೈರ್ಯ, ಕೋಪ ಮತ್ತು ಸಂಕಷ್ಟ ಅನುಭವಿಸಲು ಸಿದ್ಧತೆಯನ್ನು ಬಿಂಬಿಸುತ್ತಿತ್ತು. ಇವುಗಳು, ಪರ್ವತದಂತೆ ದೃಢ ಮತ್ತು ಸಮುದ್ರದಷ್ಟು ಆಳವಾಗಿುವ ವ್ಯಕ್ತಿಯ ಮಾತುಗಳಾಗಿದ್ದವು.

ನಮ್ಮಲ್ಲಿ ಉತ್ತಮ ಕಾರ್ಯಗಳ ಮೇಲೆ ವೆಚ್ಚ ಮಾಡುವ ಹವ್ಯಾಸದ ಕೊರತೆಯಿದೆ ಎಂದು ಸ್ವಾಮಿ ಆಗಾಗ ಹೇಳುತ್ತಿದ್ದರು. ಈ ಹವ್ಯಾಸವನ್ನು ಬೆಳೆಸಿಕೊಂಡಾಗ ಮಾತ್ರ ಒಂದು ಸಮುದಾಯ ತನ್ನಲ್ಲಿ ಸೊಬಗನ್ನು ತುಂಬಬಲ್ಲುದು. ಸಂಪತ್ತು ಎನ್ನುವುದು ಓರ್ವ ವ್ಯಕ್ತಿ ಕೂಡಿಡಲು ಇರುವ ವಸ್ತುವಲ್ಲ ಬದಲಿಗೆ ಅದನ್ನು ಉತ್ತಮ ಕಾರ್ಯಗಳಿಗೆ ಬಳಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿದಾಗ ಸಮುದಾಯಕ್ಕೆ ಸೊಬಗು ಬರುತ್ತದೆ. ಸ್ವಾಮಿ ಯಾವಾಗಲೂ ನ್ಯಾಯಸಮ್ಮತ ಮಾರ್ಗದಲ್ಲಿ ಮಾತ್ರ ಧನ ಸಂಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದರು. ಮೇ 31, 1924ರಂದು ದೇಶಾಭಿಮಾನಿ ಪತ್ರಿಕೆಯಲ್ಲಿ ಪ್ರಕಟವಾದ ಸಂಭಾಷಣೆಯು ಸ್ವಾಮಿ ಮತ್ತು ಅವರು ಪ್ರಯಾಣಿಸುತ್ತಿದ್ದ ರೈಲಿನಲ್ಲೇ ಪ್ರಯಾಣಿಸುತ್ತಿದ್ದ ಕೆ.ಎಂ ಕೇಶವನ್ ಎಂಬವರ ಮಧ್ಯೆ ನಡೆದಿತ್ತು. ಈ ಸಂಭಾಷಣೆಯ ನಾಲ್ಕು ತಿಂಗಳ ಬಳಿಕ ಸ್ವಾಮಿ ವೈಕಮ್ ಸತ್ಯಾಗ್ರಹ ಶಿಬಿರಕ್ಕೆ ಭೇಟಿ ನೀಡಿದ್ದರು. ಕೇಶವನ್: ವೈಕಮ್‌ನಲ್ಲಿ ಇತರ ಎಲ್ಲೂ ಕಾಣದಿರುವಷ್ಟು ದೊಡ್ಡ ಮಟ್ಟದಲ್ಲಿ ಸ್ವಾಮಿ ಬಯಸಿದಂತೆ ಅಂತರ್‌ಜಾತಿ ಭೋಜನ ವ್ಯವಸ್ಥೆ ಆಯೋಜಿಸಲಾಗಿದೆ. ವೈಕಮ್ ಸತ್ಯಾಗ್ರಹ ದಿಂದ ಅನೇಕ ವಿಷಯಗಳನ್ನು ಸಾಧಿಸಲಾಗಿದೆ.

ಭೋಜನ ಕೂಟಕ್ಕೆ ಸಂಬಂಧಿಸಿದಂತೆ ವಿವರಣೆಯನ್ನು ಸ್ವಾಮಿ ಕೋರಿದರು.

ಕೇಶವನ್: ಎಲ್ಲ ಜಾತಿಯ ಜನರು ಆಹಾರವನ್ನು ತಯಾರಿಸುತ್ತಿದ್ದಾರೆ ಮತ್ತು ಬಡಿಸುತ್ತಿದ್ದಾರೆ. ಈಳವ ಸಮುದಾಯದ ಮಹಿಳೆ ಸಾಂಬಾರು ಪದಾರ್ಥಗಳನ್ನು ಅರೆದರೆ ನಾಯರ್ ಮಹಿಳೆ ಅಡುಗೆ ತಯಾರಿಸುತ್ತಾರೆ. ನಂಬೂಧಿರಿಗಳು (ಬ್ರಾಹ್ಮಣರು) ಮತ್ತು ಪುಲಯರು ಜೊತೆಯಾಗಿ ತರಕಾರಿ ಹೆಚ್ಚುತ್ತಿದ್ದಾರೆ. ನಂಬೂಧಿರಿಗಳು, ಅಕಾಲಿಗಳು, ನಾಯರ್‌ಗಳು, ಈಳವರು ಮತ್ತು ಪುಲಯರು ಜೊತೆಯಾಗಿ ಭೋಜನ ಬಡಿಸುತ್ತಿದ್ದಾರೆ. ಎಲ್ಲ ಜಾತಿಯ ಜನರು ಜೊತೆಯಾಗಿ ಕುಳಿತು ಭೋಜನ ಸೇವಿಸುತ್ತಾರೆ.

ಸ್ವಾಮಿ: ಅಲ್ಲಿ ವಿವಿಧ ಜಾತಿಗಳು ಎಲ್ಲಿವೆ? ನೀವು ಕೇವಲ ಪುುಷರ ಬಗ್ಗೆಯಷ್ಟೇ ಮಾತನಾಡಿದ್ದೀರಿ.

ಕೇಶವನ್: ಅದು ನಿಜ. ನಾನೂ ಸಾಮಾನ್ಯ ಜನರ ಭಾಷೆಯನ್ನೇ ಮಾತನಾಡಿದ್ದೇನೆ.

ಸ್ವಾಮಿ: ಅದಕ್ಕೇ ನಾನು ಹೇಳಿರುವುದು ಎಲ್ಲರಿಗೂ ಜಾಣ್ಮೆಯಿರಬೇಕು ಎಂದು. ಈಳವ ಎನ್ನುವುದು ಒಂದು ಜಾತಿಯೇ? ಅದು ಒಂದು ಪ್ರದೇಶದ ಜನರನ್ನು ಗುರುತಿಸುವುದಿಲ್ಲವೇ? ಈಳವರು ಅನೇಕ ವರ್ಷಗಳಿಂದ ಮಲಯಾಳಂ ಪ್ರದೇಶದಲ್ಲಿ ನೆಲೆಸಿರುವ ಕಾರಣ ಅವರನ್ನು ಮಲಯಾಳಿಗಳು ಎಂದೂ ಕರೆಯಬಹುದು. ಮಲಯಾಳಂ ಪ್ರದೇಶದಲ್ಲಿ ಜೀವಿಸುವವರು ಮಲಯಾಳಿಗಳು. ಇಂಗ್ಲೆಂಡ್‌ನಲ್ಲಿ ಜೀವಿಸುವವರು ಇಂಗ್ಲಿಷರು. ಜಾತಿಯನ್ನು ದೇವರು ಸೃಷ್ಟಿಸಿಲ್ಲ. ಅದನ್ನು ಮಾಡಿರುವುದು ಮಾನವ. ಜಾತಿ ಅನಿವಾರ್ಯವೇ ಆಗಿದ್ದರೆ ಎಲ್ಲರೂ ಬ್ರಾಹ್ಮಣರೇ ಆಗಿರೋಣ. ನಮ್ಮನ್ನು ಶೂದ್ರರು ಎಂದು ಕರೆಸಿಕೊಳ್ಳುವುದು ಕೀಳರಿಮೆಯನ್ನು ಒಪ್ಪಿದಂತೆ. ಅದನ್ನು ಎಂದೂ ಮಾಡಬಾರದು. ವೈಕಮ್ ಸತ್ಯಾಗ್ರಹದ ಬಗ್ಗೆ ತಿಳಿಸಿ.

ಕೇಶವನ್: ಅದು ಬಲಿಷ್ಠವಾಗಿ ಬೆಳೆಯುತ್ತಿದೆ. ಅವರೀ ಈ ಮಳೆಯಲ್ಲಿ ಒದ್ದೆಯಾಗಿರಬಹುದು.

ಸ್ವಾಮಿ: ಯಾಕೆ ಒದ್ದೆಯಾಗಬೇಕು? ಅವರ ಬಳಿ ಛತ್ರಿಯಿಲ್ಲವೇ?

ಕೇಶವನ್: ಅವರು ತಮ್ಮ ಕಷ್ಟವನ್ನು ಸಹಿಸುವ ಸಾಮರ್ಥ್ಯದ ಮೂಲಕ ವಿರೋಧಿಗಳ ಮತ್ತು ಸರಕಾರದ ಸಹಾನುಭೂತಿಯನ್ನು ಗಳಿಸಬೇಕು ಮತ್ತು ತಮ್ಮ ಉದ್ದೇಶವನ್ನು ಸಾಧಿಬೇಕು ಎಂದು ಗಾಂಧೀಜಿ ಹೇಳಿದ್ದಾರೆ.

ಸ್ವಾಮಿ: ಸಂಕಷ್ಟ ಸಹಿಸುವ ಸಾಮರ್ಥ್ಯ ಇರಬೇಕು. ಆದರೆ ಮಳೆಯಲ್ಲಿ ಒದ್ದೆಯಾಗಲು ಅಥವಾ ಉಪವಾಸ ಇರಲು ಅಲ್ಲ. ಎಲ್ಲಿಗೆ ಪ್ರವೇಶವಿಲ್ಲವೊ ಅಂತಹ ಸ್ಥಳ ಗಳನ್ನು ಪ್ರವೇಶಿಸಿ ಮತ್ತು ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ. ಹೊಡೆತವನ್ನು ಸಹಿಸಿಕೊಳ್ಳಿ ಆದರೆ ಮರು ಹೊಡೆಯಬೇಡಿ. ಒಂದು ವೇಳೆ ತಡೆಗೋಡೆ ನಿರ್ಮಿಸಿದರೆ ಸುಮ್ಮನಿರಬೇಡಿ, ಅದನ್ನು ದಾಟಿ. ಕೇವಲ ರಸ್ತೆಗಳನ್ನು ಬಳಸುವುದು ಸಾಕಾಗುವುದಿಲ್ಲ. ನೀವು ದೇವಸ್ಥಾನಗಳನ್ನು ಪ್ರವೇಶಿಸಬೇಕು. ಪ್ರತಿ ದೇವಸ್ಥಾನ ಪ್ರವೇಶಿಸಿ, ಪ್ರತಿ ದಿನ ಎಲ್ಲರೂ ಪ್ರವೇಶಿಸಿ. ಅಲ್ಲಿ ಪ್ರಸಾದ ಸಿದ್ಧವಾಗಿದ್ದರೆ ಅದನ್ನು ಸೇವಿಸಿ. ಭೋಜನಶಾಲೆಗೆ ತೆರಳಿ ಅಲ್ಲಿ ಇತರರೊಂದಿಗೆ ಭೋಜನಕ್ಕೆ ಕುಳಿತುಕೊಳ್ಳಿ. ಈ ಬೆಳವಣಿಗೆಗಳ ಬಗ್ಗೆ ಸರಕಾರಕ್ಕೆ ಪ್ರಾಮಾಣಿಕವಾಗಿ ಮಾಹಿತಿ ನೀಡಬೇಕು. ಜನರು ತಮ್ಮ ಪ್ರಾಣವನ್ನು ನೀಡಲೂ ಹಿಂಜರಿಯಬಾರದು. ಇನ್ನೊಬ್ಬರ ಸ್ಪರ್ಶವನ್ನು ಮಲಿನಕಾರಕ ಎಂದು ಭಾವಿಸುವ ಜನರು, ತಾವು ಸ್ವಚ್ಛವಾಗಿರುವಾಗ ಏನನ್ನೂ ಮಾಡಲು ಸಾಧ್ಯವಾಗದಂತೆ ಮಾಡಬೇಕು. ಇದು ನನ್ನ ನಿಲುವು. ಇದಕ್ಕೆ ನೀವು ಎಲ್ಲ ಪತ್ರಿಕೆಗಳಲ್ಲೂ ಪ್ರಚಾರ ನೀಡಬೇಕು. ನಾನು ಈ ಬಗ್ಗೆ ಸಂಪೂರ್ಣ ಒಪ್ಪಿಗೆ ಹೊಂದಿದ್ದೇನೆ ಎನ್ನುವುದು ಜನರಿಗೆ ತಿಳಿಯಲಿ. ಆದರೆ ಯಾವತ್ತೂ ಹಿಂಸೆ ಮತ್ತು ಘರ್ಷಣೆಗಳು ನಡೆಯಬಾರದು.

ಕೇಶವನ್: ವೈಕಮ್ ಸತ್ಯಾಗ್ರಹದ ಉದ್ದೇಶವೇ ದೇವಸ್ಥಾನ ಪ್ರವೇಶ. ಆದರೆ ಅದನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಸ್ವಾಮಿ: ಯಾಕೆ? ಈಗಲೇ ಬಹಳ ವಿಳಂಬವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X