Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ20 May 2019 12:00 AM IST
share
ಓ ಮೆಣಸೇ…

ಆನೆ (ಸಿದ್ದರಾಮಯ್ಯ) ದಾರಿಯಲ್ಲಿ ನಡೆದುಕೊಂಡು ಹೋಗುವಾಗ ನಾಯಿಗಳು ಬೊಗಳುತ್ತಿರುತ್ತವೆ - ಎಸ್.ಟಿ.ಸೋಮಶೇಖರ್, ಶಾಸಕ
  ಆನೆಯ ದಂತವನ್ನು ಮುರಿದು ಮಾರಿದವರ ಕುರಿತಂತೆ ತನಿಖೆ ನಡೆಯುತ್ತಿದೆ.

---------------------

ಪ್ರಧಾನಿ ಮೋದಿ ಖಾಸಗಿ ಜೀವನದ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿರುವ ಮಾಯಾವತಿ ಕ್ಷಮೆ ಯಾಚಿಸಬೆಕು - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಅಂತಹದೊಂದು ಕೆಟ್ಟ ಜೀವನ ನಡೆಸಿದ್ದಕ್ಕೆ ಮೋದಿ ಕ್ಷಮೆ ಯಾಚಿಸಬೇಡವೇ?

---------------------

ಮುಸ್ಲಿಮರ ಐಸಿಎಸ್‌ನಂತೆ ಹಿಂದೂಗಳ ಆರೆಸ್ಸೆಸ್ - ಕೆ.ಎಸ್.ಅಳಗಿರಿ, ತಮಿಳುನಾಡು, ಕಾಂಗ್ರೆಸ್ ಅಧ್ಯಕ್ಷ
 
ಆರೆಸ್ಸೆಸ್ ನಕಲಿ ಹಿಂದೂಗಳದ್ದು, ಐಸಿಸ್ ನಕಲಿ ಮುಸ್ಲಿಮರದ್ದು. ಮುಸ್ಲಿಮರು ಮತ್ತು ಹಿಂದೂಗಳು ಇವುಗಳ ನಡುವೆ ಅಂತರ ಕಾಯಬೇಕು.

---------------------

ನನಗೆ ಯಾರ ಚಮಚಾಗಿರಿ ಮಾಡಿಯೂ ಅಭ್ಯಾಸವಿಲ್ಲ - ಝಮೀರ್ ಅಹ್ಮದ್, ಸಚಿವ
ನಿಮ್ಮದು ಚಮಚಾ ಅಲ್ಲ, ಸೌಟು.

---------------------

ಮೇ 23ರವರೆಗೆ ಯಾರು ಏನೇ ಹೇಳಿದರೂ ಅದು ವ್ಯರ್ಥ - ಜಿ.ಟಿ.ದೇವೇಗೌಡ, ಸಚಿವ
ಆಮೇಲೆ ನೀವು ಹೇಳುವುದೆಲ್ಲ ವ್ಯರ್ಥ.

---------------------
ಮಾಜಿ ಸಿಎಂ ಸಿದ್ದರಾಮಯ್ಯರ ಆಶೀರ್ವಾದ ಇರುವವರೆಗೆ ಮೈತ್ರಿ ಸರಕಾರ ಇರುತ್ತದೆ - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಪಾದಕ್ಕೆ ಬಿದ್ದರೆ ಆಶೀರ್ವಾದ ಮಾಡಲು ಸಿದ್ಧ ಎನ್ನುತ್ತಿದ್ದಾರೆ.

---------------------

ಕಾಂಗ್ರೆಸ್ - ಜೆಡಿಎಸ್‌ನದು ಒತ್ತಾಯದ ವಿಧುರ - ವಿಧವೆಯ ಮದುವೆ - ಬಸವನಗೌಡ ಪಾಟೀಲ್ ಯತ್ನಾಳ್, ಶಾಸಕ
ಬಿಜೆಪಿಯ ಲಿವಿಂಗ್ ಟುಗೆದರ್‌ಗಿಂತ ವಾಸಿ.

---------------------

ಟವೆಲ್ ಹಾಕಿ ರಾಜ್ಯಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಬಿಜೆಪಿ ರೈಲು ಅಥವಾ ಬಸ್ ಅಲ್ಲ - ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ
ಕರ್ನಾಟಕದಲ್ಲಿ ಅದೀಗ ಮುರಿದು ಬಿದ್ದ ಎತ್ತಿನ ಬಂಡಿ.

---------------------

ನಾಥೂರಾಂ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ - ಕಮಲ್‌ಹಾಸನ್, ನಟ
ಹಾಗಾದರೆ ಹಿಂದೂ ಮಹಾಸಭಾ, ಭಾರತದ ಐಸಿಸ್ ಎಂದಾಯಿತು.

---------------------
ಬಿಎಸ್ಪಿ ಆನೆಯ ಬಲ ತಾಳಲಾಗದೆ ಎಸ್ಪಿ ಸೈಕಲ್ ಪಂಕ್ಚರಾಗಲಿದೆ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಆಮ್ಲಜನಕ ಸಿಲಿಂಡರ್ ಇಲ್ಲದೆ ಸತ್ತ ಮಕ್ಕಳ ಕಣ್ಣೀರು ನಿಮ್ಮನ್ನು ಶಾಶ್ವತ ಕಾಡಿಗೆ ಕಳುಹಿಸಲಿದೆ.

---------------------

ಸಾಧಕರಿಗೆ ಟೀಕೆಗಳು ಬರುವುದು ಸಹಜ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ನಿಮ್ಮಂತಹ ಸಮಯ ಸಾಧಕರಿಗೂ 

---------------------

ದೇವೇಗೌಡರು ಪ್ರಧಾನಿಯಾಗಿ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಕೂಡಾ ಬಗೆಹರಿಯುತ್ತಿತ್ತು - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರಮಠ
ಮೋದಿ ಪ್ರಧಾನಿಯಾಗಿ ಸಮಸ್ಯೆ ಬಿಗಡಾಯಿಸಿತು ಎಂದು ಹೇಳುತ್ತಿದ್ದೀರಿ.

---------------------

ಬೆಳವಣಿಗೆಯ ಒಂದು ಹಂತದವರೆಗೆ ಮನುಷ್ಯನಿಗೆ ಅಹಂಕಾರ ಅಗತ್ಯವಿದೆ - ರವಿಶಂಕರ್‌ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಅಹಂಕಾರವನ್ನು ತ್ಯಜಿಸಲು ಮೋದಿಗೆ ಸೂಚನೆ.

---------------------
ಪ್ರಾದೇಶಿಕ ಪಕ್ಷಗಳಿಲ್ಲದೆ ಯಾವುದೇ ರಾಷ್ಟ್ರೀಯ ಪಕ್ಷಕ್ಕೂ ಕೇಂದ್ರದಲ್ಲಿ ಸರಕಾರ ರಚಿಸಲು ಸಾಧ್ಯವಿಲ್ಲ - ದೇವೇಗೌಡ, ಮಾಜಿ ಪ್ರಧಾನಿ
ಪ್ರಧಾನಿ ಹುದ್ದೆಯ ವಾಸನೆ ಬಡಿದಿರಬೇಕು.

---------------------

ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ನಿಮ್ಮ ಮಾತು ಯಡಿಯೂರಪ್ಪರೊಳಗೆ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.

---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥರನ್ನು ಮುಗಿಸಲು ಮಾಜಿ ಪ್ರಧಾನಿ ದೇವೇಗೌಡ ಹುನ್ನಾರ ನಡೆಸಿದ್ದಾರೆ - ಎ.ಮಂಜು, ಮಾಜಿ ಸಚಿವ
ಜೆಡಿಎಸ್‌ನ್ನು ಮುಗಿಸುವುದಕ್ಕೆ ಅವರ ಮೊದಲ ಆದ್ಯತೆಯಂತೆ.

---------------------

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಆರೆಸ್ಸೆಸ್ ಮೂಗು ತೂರಿಸದು - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ

ಬಹುಶಃ ಬಾಲವನ್ನಷ್ಟೇ ತೂರಿಸುವ ಉದ್ದೇಶವಿರಬೇಕು.

---------------------

ಕಾಂಗ್ರೆಸ್‌ನಲ್ಲಿ ಪ್ರಧಾನಿಯ ಮಗ ಪ್ರಧಾನಿ - ನಿತಿನ್ ಗಡ್ಕರಿ, ಕೇಂದ್ರ ಸಚಿವ

ಆರೆಸ್ಸೆಸ್‌ನಲ್ಲಿ ಬ್ರಾಹ್ಮಣನ ಮಕ್ಕಳೇ ಸಂಚಾಲಕರಾದಂತೆ.

---------------------
ರಾಜ್ಯದಲ್ಲಿ ಮೈತ್ರಿ ಸರಕಾರಕ್ಕೆ ಆಯುಷ್ಯವಿದೆ ಎಂದು ಯಾರಿಗೂ ಅನಿಸುತ್ತಿಲ್ಲ - ಸಿ.ಟಿ.ರವಿ, ಶಾಸಕ
ಮತ್ತೆ ರಾತ್ರಿ ಕಾರು ಚಲಾಯಿಸುವ ಸಿದ್ಧತೆಯಲ್ಲಿರುವಂತಿದೆ.

share
ಪಿ.ಎ.ರೈ
ಪಿ.ಎ.ರೈ
Next Story
X