ಯುದ್ಧ ಬಯಸಿದರೆ ಅದು ಇರಾನ್‌ನ ಅಧಿಕೃತ ಅಂತ್ಯ: ಟ್ರಂಪ್ ಎಚ್ಚರಿಕೆ
ವಾಶಿಂಗ್ಟನ್, ಮೇ 20: ಅಮೆರಿಕದ ಹಿತಾಸಕ್ತಿಗಳ ಮೇಲೆ ಇರಾನ್ ದಾಳಿ ನಡೆಸಿದರೆ ಆ ದೇಶವು ನಾಶಗೊಳ್ಳುತ್ತದೆ ಎಂಬ ಕಟು ಎಚ್ಚರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೊರಡಿಸಿದ್ದಾರೆ.
‘‘ಯುದ್ಧ ಮಾಡಬೇಕೆಂದು ಇರಾನ್ ಬಯಸಿದರೆ, ಅದು ಇರಾನ್‌ನ ಅಧಿಕೃತ ಅಂತ್ಯವಾಗಿರುತ್ತದೆ. ಇನ್ನೊಮ್ಮೆ ಅಮೆರಿಕಕ್ಕೆ ಬೆದರಿಕೆ ಹಾಕಬೇಡಿ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಇರಾನ್‌ನ ‘ಬೆದರಿಕೆ’ಗಳ ಹಿನ್ನೆಲೆಯಲ್ಲಿ ಅಮೆರಿಕವು ಕೊಲ್ಲಿಯಲ್ಲಿ ವಿಮಾನವಾಹಕ ಯುದ್ಧನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಮತ್ತು ಬಿ-52 ಬಾಂಬರ್ ವಿಮಾನಗಳನ್ನು ನಿಯೋಜಿಸಿದ ಬಳಿಕ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವುದನ್ನು ಸ್ಮರಿಸಬಹುದಾಗಿದೆ.
ಆದರೆ, ಇರಾನ್ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಅಮೆರಿಕ ಆಡಳಿತದಲ್ಲೇ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬುದಾಗಿ ಮಾಧ್ಯಮ ವರದಿಗಳು ಹೇಳಿವೆ. ಟ್ರಂಪ್‌ರ ಆಕ್ರಮಣಕಾರಿ ನಿಲುವನ್ನು ಹೊಂದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಇರಾನ್ ವಿರುದ್ಧ ಕಠಿಣ ನಿಲುವನ್ನು ಹೊಂದಿದ್ದರೆ, ಸರಕಾರದಲ್ಲಿರುವ ಇತರರು ಅದನ್ನು ವಿರೋಧಿಸುತ್ತಿದ್ದಾರೆ ಎನ್ನಲಾಗಿದೆ.