ಪೊಕ್ಸೋ ಪ್ರಕರಣ: ಲಾರಿ ಚಾಲಕನ ಬಂಧನ
ಬ್ರಹ್ಮಾವರ, ಮೇ 21: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಮೇ 20 ರಂದು ಬಂಧಿಸಿದ್ದಾರೆ.
ಕಾಪು ನಿವಾಸಿ ಆದರ್ಶ(23) ಬಂಧಿತ ಆರೋಪಿ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ 17 ವರ್ಷ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಸಿದ್ದ ಎನ್ನಲಾಗಿದೆ. ತಾಯಿ ನೀಡಿದ ದೂರಿನಂತೆ ಪೊಕ್ಸೊ ಪ್ರಕರಣ ದಾಖಲಿಸಿಕೊಂಡ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮೇ 20ರಂದು ಜಿಲ್ಲಾ ವಿಶೇಷ ನ್ಯಾಯಾಧೀಶರ ನಿವಾಸ ಮುಂದೆ ಹಾಜರು ಪಡಿಸಿದ ಪೊಲೀಸರು, ಇಂದು ಮತ್ತೆ ನ್ಯಾಯಾಲಯ ಮುಂದೆ ಹಾಜರು ಪಡಿಸಿದರು. ನ್ಯಾಯಾಲಯ ಆರೋಪಿಗೆ ಜೂ.3ರವರೆಗೆ ನ್ಯಾಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
Next Story