Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪ್ರಜಾಸತ್ತೆಯ ಅಳಿವು ಉಳಿವನ್ನು ಹೇಳಲಿರುವ...

ಪ್ರಜಾಸತ್ತೆಯ ಅಳಿವು ಉಳಿವನ್ನು ಹೇಳಲಿರುವ ಚುನಾವಣಾ ಫಲಿತಾಂಶ

ವಾರ್ತಾಭಾರತಿವಾರ್ತಾಭಾರತಿ23 May 2019 12:00 AM IST
share

ಇಂದು ಈ ದೇಶದ ಪ್ರಜಾಸತ್ತೆಯ ಪಾಲಿಗೆ ಅತ್ಯಂತ ಮಹತ್ವದ ದಿನ. ಈ ಫಲಿತಾಂಶ ಭವಿಷ್ಯದಲ್ಲಿ ಪ್ರಜಾಸತ್ತೆ ಮತ್ತು ಸಂವಿಧಾನದ ಅಳಿವು ಉಳಿವಿನಲ್ಲಿ ಗಂಭೀರ ಪರಿಣಾಮ ಬೀರುವ ಕಾರಣಕ್ಕಾಗಿಯೂ ಈ ದಿನ ಮಹತ್ವಪೂರ್ಣವಾದುದು. ಈ ಬಾರಿಯ ಚುನಾವಣೆಯಲ್ಲಿ ಕೇಂದ್ರ ಸರಕಾರದಿಂದ ವ್ಯಾಪಕ ಹಸ್ತಕ್ಷೇಪ ಮತ್ತು ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿ ಬಂದಿವೆ. ಚುನಾವಣೆಯ ಉದ್ದೇಶವನ್ನೇ ಅಣಕಿಸುವಂತೆ ಕೆಲವು ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸಿದ್ದು, ಫಲಿತಾಂಶ ಈ ಮಾಧ್ಯಮಗಳಿಗೂ ಪಾಠ ಕಲಿಸಲಿ ಎನ್ನುವುದು ಬಹುತೇಕ ಮತದಾರರ ಬಯಕೆಯಾಗಿದೆ.

ಇದೇ ಸಂದರ್ಭದಲ್ಲಿ ಇವಿಎಂ ಅಕ್ರಮಗಳ ಕುರಿತಂತೆ ವ್ಯಾಪಕ ಆರೋಪಗಳು ಕೇಳಿ ಬರುತ್ತಿದ್ದರೂ ವಿವಿಪ್ಯಾಟ್ ಮತ ಎಣಿಕೆಯ ಕುರಿತಂತೆ ತನ್ನ ಪಟ್ಟು ಬಿಡದೇ ಇರುವುದೂ ಜನರಲ್ಲಿ ಹತ್ತು ಹಲವು ಅನುಮಾನಗಳನ್ನು ಹುಟ್ಟಿಸಿದೆ. ಹಲವಾರು ವಿರೋಧಪಕ್ಷಗಳ ನಾಯಕರು, ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಬಳಕೆಯಾಗಿರುವ ಇಲೆಕ್ಟ್ರಾನಿಕ್ ಮತದಾನ ಯಂತ್ರಗಳು (ಇವಿಎಂ) ಹಾಗೂ ಮತದಾನ ದೃಢೀಕರಣ ಚೀಟಿ ಮುದ್ರಣ ಯಂತ್ರ (ವಿವಿಪ್ಯಾಟ್)ಗಳ ವಿಶ್ವಾಸಾರ್ಹತೆಯ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಇವಿಎಂ ಮತಗಳೊಂದಿಗೆ ಶೇ.100ರಷ್ಟು ವಿವಿಪ್ಯಾಟ್ ಚೀಟಿಗಳನ್ನು ತಾಳೆಹಾಕಬೇಕೆಂದು ಅವು ಈಗ ಬಲವಾಗಿ ಆಗ್ರಹಿಸುತ್ತಿವೆ. ಹಾಗೆ ನೋಡಿದರೆ ಆಡಳಿತಾ ರೂಢ ಎನ್‌ಡಿಎ ಒಕ್ಕೂಟದ ಕೆಲವು ಹಿರಿಯ ಸದಸ್ಯರೇ 2010ರಲ್ಲಿ ಬರೆದ ಪುಸ್ತಕವೊಂದರಲ್ಲಿ ಇವಿಎಂಗಳಿಂದಾಗಿ ಭಾರತದ ಪ್ರಜಾಸತ್ತೆಯು ಅಪಾಯದಲ್ಲಿದೆಯೆಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ ಈ ಬಾರಿ ಎನ್‌ಡಿಎ ಗುಂಪು ಇವಿಎಂ ಕುರಿತಂತೆ ವೌನ ತಾಳಿದೆ ಮಾತ್ರವಲ್ಲ, ಪತ್ರಿಕೆಗಳು ಅತ್ಯುತ್ಸಾಹದಿಂದ ಎನ್‌ಡಿಎಯನ್ನು ಫಲಿತಾಂಶಕ್ಕೆ ಮುನ್ನವೇ ಗೆಲ್ಲಿಸಿಯಾಗಿದೆ.

ಇವಿಎಂ ದುರ್ಬಳಕೆಯಾಗಿರುವುದರ ಕುರಿತಂತೆ ಪ್ರತಿಪಕ್ಷಗಳ ಅನುಮಾನಗಳಿಗೂ ಇದು ಮುಖ್ಯ ಕಾರಣ. ಇದೇ ವೇಳೆ, ಒಂದೊಂದು ವಿಧಾನಸಭೆಯ ಇಂತಿಷ್ಟು ಇವಿಎಂಗಳನ್ನಷ್ಟೇ ಎಣಿಕೆ ಮಾಡಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ. ಹಾಗೆ ಎಣಿಕೆ ಮಾಡುವ ಸಂದರ್ಭದಲ್ಲಿ ಇವಿಎಂ ಮತಗಳ ಎಣಿಕೆಗೂ ಹಾಗೂ ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆಗೂ ತಾಳೆಯಾಗದೆ ಇದ್ದಲ್ಲಿ ಏನು ಮಾಡಬೇಕೆಂಬ ಬಗ್ಗೆ ಚುನಾವಣಾ ಆಯೋಗವು ಯಾವುದೇ ಸ್ಪಷ್ಟವಾದ ನಿಯಮಗಳನ್ನು ರೂಪಿಸಿಲ್ಲ. ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದರೆ ಅದು ಮರು ಚುನಾವಣೆಯನ್ನು ಘೋಷಿಸುತ್ತದೆಯೇ? ಅಥವಾ ಶೇ. 100ರಷ್ಟು ಎಣಿಕೆಗೆ ಆದೇಶ ನೀಡುತ್ತದೆಯೇ ? ಎನ್ನುವುದರ ಬಗ್ಗೆ ಸಾಕಷ್ಟು ಗೊಂದಲಗಳಿವೆ. 2019ರ ಫೆಬ್ರವರಿಯಲ್ಲಿ 21 ಪ್ರತಿಪಕ್ಷಗಳು, ಶೇ.50ರಷ್ಟು ಇವಿಎಂ ಯಂತ್ರಗಳು ಹಾಗೂ ವಿವಿ ಪ್ಯಾಟ್ ಚೀಟಿಗಳನ್ನು ತಾಳೆಹಾಕಬೇಕೆಂದು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದವು. ಅದಕ್ಕೆ ಆಯೋಗವು, ಇಂತಹ ಪ್ರಕ್ರಿಯೆಯನ್ನು ಆಳವಡಿಸಿಕೊಂಡಲ್ಲಿ, ಮತಎಣಿಕೆಯು ಆರು ದಿನಗಳ ಕಾಲ ನಡೆಯಬೇಕಾದೀತೆಂದು ಪ್ರತಿಕ್ರಿಯಿಸಿತ್ತು. ಆದರೆ ಆಯೋಗದ ಈ ವಾದವು ಉತ್ಪ್ರೇಕ್ಷೆಯಿಂದ ಕೂಡಿದ್ದಾಗಿದೆ. ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಸಲು ಒಂದು ತಿಂಗಳಿಗೂ ಅಧಿಕ ಸಮಯವನ್ನು ತೆಗೆದುಕೊಂಡಿರುವ ಆಯೋಗಕ್ಕೆ ಎಲ್ಲಾ ವಿವಿಪ್ಯಾಟ್ ಚೀಟಿಗಳ ಎಣಿಕೆಗೆ ನಿರಾಕರಿಸುವುದಕ್ಕೆ ಇದು ಯೋಗ್ಯವಾದ ಕಾರಣವಲ್ಲ. ಅಕ್ರಮ ಚುನಾವಣೆಯ ತಳಹದಿಯಲ್ಲಿ ಸರಕಾರ ರಚನೆಯಾಗುವುದಕ್ಕಿಂತ, ತಡವಾಗಿ ಫಲಿತಾಂಶ ಘೋಷಣೆಯಾಗುವುದೇ ದೇಶದ ಭವಿಷ್ಯಕ್ಕೆ ಹಿತಕಾರಿಯಾಗಿದೆ.

  ಈ ಸಲದ ಲೋಕಸಭಾ ಚುನಾವಣೆಯಲ್ಲಿ ಅಂದಾಜು 10.35 ಲಕ್ಷ ಇವಿಎಂಗಳನ್ನು ಬಳಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಗಳ ವಿವಿಪ್ಯಾಟ್ ಚೀಟಿಗಳ ಎಣಿಕೆಯನ್ನು ಮಾಡುವ ಆಯೋಗದ ಕ್ರಮದಿಂದಾಗಿ ಇವಿಎಂನ ಹಲವಾರು ಲೋಪಗಳು ಪತ್ತೆಯಾಗದೆ ಹೋಗುವ ಸಾಧ್ಯತೆಗಳು ಅಧಿಕವಾಗಿವೆ. ತಾನು ಚಲಾಯಿಸಿದ ವಿವಿಪ್ಯಾಟ್ ಮತದ ಚೀಟಿಗಳು ಎಣಿಕೆಯಾಗುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಕೆಲವೇ ಕೆಲವು ವಿವಿಪ್ಯಾಟ್ ಚೀಟಿಗಳನ್ನು ಏಣಿಕೆ ಮಾಡುವ ಚುನಾವಣಾ ಆಯೋಗದ ಕ್ರಮವು ನಾಗರಿಕನ ಮೂಲಭೂತ ಹಕ್ಕನ್ನು ಕಸಿಯುತ್ತದೆ. ಶೇ.100ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ವಿವಿ ಪ್ಯಾಟ್‌ಗಳನ್ನು ಎಣಿಕೆ ಮಾಡುವುದು ಅಸಾಂವಿಧಾನಿಕವಾದ ನಿರ್ಧಾರವಾಗಿದೆ.

1998 ಹಾಗೂ 2005ನೇ ಇಸವಿಯ ಮಧ್ಯದಲ್ಲಿ, ಜರ್ಮನಿಯಲ್ಲಿ ನಡೆದ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಲಾಗಿತ್ತು. ಆನಂತರ ಆ ದೇಶದ ಸಾಂವಿಧಾನಿಕ ನ್ಯಾಯಾಲಯವು ಅವುಗಳ ಬಳಕೆಯನ್ನು ನಿಷೇಧಿಸಿತ್ತು. ಅದೇ ರೀತಿ ಇತರ ಹಲವಾರು ಅಭಿವೃದ್ಧಿ ಹೊಂದಿರುವ, ತಂತ್ರಜ್ಞಾನದಲ್ಲಿ ಪರಿಣಿತವಾದ ಇವಿಎಂಗಳು ಕೂಡಾ ಇಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆಯನ್ನು ಕೈಬಿಟ್ಟಿವೆ.

 ಶೇ.100ರಷ್ಟು ವಿವಿಪ್ಯಾಟ್ ಚೀಟಿಗಳ ಎಣಿಕೆಯನ್ನು ತಿರಸ್ಕರಿಸುವ ಮೂಲಕ ಚುನಾವಣಾ ಆಯೋಗ ಹಾಗೂ ಕೇಂದ್ರದ ಆಡಳಿತಾರೂಢ ಪಕ್ಷವು ಹಾಲಿ ಲೋಕಸಭಾ ಚುನಾವಣೆಯ ವಿಶ್ವಾಸಾರ್ಹತೆಯ ಬಗ್ಗೆ ಸಂದೇಹ ಹುಟ್ಟುವಂತೆ ಮಾಡಿವೆ. ಇವಿಎಂ ಯಂತ್ರಗಳ ಎಣಿಕೆಯು ಪೂರ್ಣಗೊಂಡ ಬಳಿಕವಷ್ಟೇ, ಪ್ರತಿ ವಿಧಾನ ಸಭಾ ಕ್ಷೇತ್ರದ ಐದು ಮತಗಟ್ಟೆಗಳ ಮತಎಣಿಕೆಯನ್ನು ಕೈಗೊಳ್ಳಬೇಕೆಂಬ ಆದೇಶವನ್ನು ಹೊರಡಿಸುವ ಮೂಲಕ ಆಯೋಗವು, ಈ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ.

ವಿವಿಪ್ಯಾಟ್ ಹಾಗೂ ಇವಿಎಂಗಳ ಮತಗಳು ತಾಳೆಯಾಗದಿದ್ದರೂ, ಶೇ.100ರಷ್ಟು ವಿವಿಪ್ಯಾಟ್‌ಗಳನ್ನು ಎಣಿಕೆ ಮಾಡದಿರುವ ಆಯೋಗದ ನಿರ್ಧಾರವು ಸಮಗ್ರ ವಿವಿಪ್ಯಾಟ್ ಪ್ರಕ್ರಿಯೆಯ ವಿಶ್ವಸನೀಯತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಒಂದು ವೇಳೆ ಒಂದೇ ಒಂದು ಮತಗಟ್ಟೆಯ ವಿವಿಪ್ಯಾಟ್ ಹಾಗೂ ಇವಿಎಂ ಮತಗಳು ತಾಳೆಯಾಗದೆ ಹೋದರೂ, ಇಡೀ ಕ್ಷೇತ್ರದ ಎಲ್ಲಾ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕೆಂಬ ಸ್ಪಷ್ಟವಾದ ನಿಯಮವನ್ನು ಚುನಾವಣಾ ಆಯೋಗವು ರೂಪಿಸಬೇಕಾಗಿದೆ. ಇಂತಹ ನಿಯಮಗಳು ಹಾಲಿ ವ್ಯವಸ್ಥೆಯಲ್ಲಿ ಇಲ್ಲದೆ ಇರುವುದರಿಂದ ಇಡೀ ಚುನಾವಣಾ ಪ್ರಕ್ರಿಯೆಯು ಶಂಕೆ, ಗೊಂದಲ ಹಾಗೂ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಲಿದೆ ಹಾಗೂ ಇಡೀ ಚುನಾವಣಾ ಪ್ರಕ್ರಿಯೆಗೇ ಕಳಂಕವುಂಟಾಗುವ ಸಾಧ್ಯತೆಯಿದೆ. ಆದುದರಿಂದಲೇ ಈ ಬಾರಿಯ ಫಲಿತಾಂಶ ಈ ದೇಶದ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಅಳಿವು ಉಳಿವಿನ ಪ್ರಶ್ನೆಯೂ ಆಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X