ಬಿಜೆಪಿ ಗೆಲುವು: ಗುಜರಿ ವ್ಯಾಪಾರಿಯಿಂದ 8ಕೆ.ಜಿ. ಚಾಕಲೇಟ್ ವಿತರಣೆ
ಕುಂದಾಪುರ, ಮೇ 23: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದ ಹಿನ್ನೆಲೆಯಲ್ಲಿ ಮೋದಿ ಅಭಿಮಾನಿ ವಕ್ವಾಡಿಯ ಗುಜರಿ ವ್ಯಾಪಾರಿ ಮುಹಮ್ಮದ್ ಸಾರ್ವಜನಿಕರಿಗೆ ಸುಮಾರು ಎಂಟು ಕೆ.ಜಿ. ಚಾಕಲೇಟ್ನ್ನು ಇಂದು ವಿತರಣೆ ಮಾಡಿದ್ದಾರೆ.
ಸ್ಥಳೀಯರಿಂದ ವಕ್ವಾಡಿಯ ಮೋದಿ ಎಂದೇ ಕರೆಯಲ್ಪಡುವ ಮುಹಮ್ಮದ್, ಕಳೆದ ಬಾರಿ ಮೋದಿ ಗೆಲುವು ಸಾಧಿಸಿದಾಗ ಸುಮಾರು ಐದು ಕೆ.ಜಿ.ಯಷ್ಟು ಚಾಕಲೇಟನ್ನು ವಿತರಿಸಿದ್ದಾರೆ. ಅನಾರೋಗ್ಯ ಪೀಡಿತರಾಗಿರುವ ಇವರು ಆ ಮಧ್ಯೆಯೂ ಅಭಿಮಾನ ಮೆರೆದಿದ್ದಾರೆ.
Next Story