Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮಂಡ್ಯದಲ್ಲಿ ಗೆಲುವಿನ ನಗೆ ಬೀರಿದ ಸುಮಲತಾ...

ಮಂಡ್ಯದಲ್ಲಿ ಗೆಲುವಿನ ನಗೆ ಬೀರಿದ ಸುಮಲತಾ ಅಂಬರೀಷ್

ಲೋಕಸಭೆ ಪ್ರವೇಶಿಸಿದ ರಾಜ್ಯದ ಪ್ರಥಮ ಪಕ್ಷೇತರ ಮಹಿಳಾ ಸಂಸದೆ

ವಾರ್ತಾಭಾರತಿವಾರ್ತಾಭಾರತಿ23 May 2019 11:09 PM IST
share
ಮಂಡ್ಯದಲ್ಲಿ ಗೆಲುವಿನ ನಗೆ ಬೀರಿದ ಸುಮಲತಾ ಅಂಬರೀಷ್

ಮಂಡ್ಯ, ಮೇ 23: ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಜಯಭೇರಿ ಭಾರಿಸಿದ್ದು, ಲೋಕಸಭೆ ಪ್ರವೇಶಿಸಿದ ರಾಜ್ಯದ ಪ್ರಥಮ ಪಕ್ಷೇತರ ಮಹಿಳಾ ಸಂಸದೆಯಾಗಿದ್ದಾರೆ.

ಪ್ರತಿಸ್ಪರ್ಧಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್ ಅವರನ್ನು 1,25,622 ಮತಗಳ ಭಾರಿ ಅಂತರದಿಂದ ಸುಮಲತಾ ಮಣಿಸಿದ್ದಾರೆ. ಸುಮಲತಾ ಒಟ್ಟು 7,02,167 ಮತ ಪಡೆದರೆ, ನಿಖಿಲ್ ಅವರಿಗೆ 5,76,545 ಮತಗಳು ಲಭಿಸಿವೆ. ಕ್ಷೇತ್ರದಲ್ಲಿ ಒಟ್ಟು 17,11182 ಮತದಾರರಿದ್ದು, 13,76,149 ಮಂದಿ ಹಕ್ಕು ಚಲಾಯಿಸಿದ್ದರು. ಇದೇ ಮೊದಲ ಬಾರಿಗೆ ಶೇ.80.42ರಷ್ಟು ದಾಖಲೆ ಮತದಾನವಾಗಿತ್ತು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನಪ್ರಿಯತೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವರ್ಚಸ್ಸು, ಜೆಡಿಎಸ್ ಭದ್ರನೆಲೆಯಾದ ಮಂಡ್ಯ ಲೋಕಸಭಾ ಕ್ಷೇತ್ರ, ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ನಿರ್ಣಾಯಕವಾಗಲಿಲ್ಲ. ಕ್ಷೇತ್ರ ವ್ಯಾಪ್ತಿಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದು, ತಳಮಟ್ಟದಲ್ಲಿ ಕಾರ್ಯಕರ್ತರ ಭದ್ರನೆಲೆ ಹೊಂದಿದ್ದರೂ ನಿಖಿಲ್ ಸೋಲಲು ಮೈತ್ರಿ ಪಕ್ಷಗಳ ಸಮನ್ವಯದ ಕೊರತೆಯೇ ಪ್ರಮುಖ ಕಾರಣವೆಂಬ ಮಾತಿಗೆ ಫಲಿತಾಂಶ ಉತ್ತರ ರೂಪದಂತಿದೆ.

ಕಾಂಗ್ರೆಸ್‍ನ ಮುಂಚೂಣಿ ನಾಯಕರ ತಟಸ್ಥ ನಿಲುವು, ಕಾರ್ಯಕರ್ತರ ಸಂಪೂರ್ಣ ಬೆಂಬಲ, ರೈತಸಂಘ, ಬಿಜೆಪಿ, ದಸಂಸ, ಮತ್ತಿತರ ಸಂಘಟನೆಗಳ ನೇರ ಪಾಲ್ಗೊಳ್ಳುವಿಕೆ ಸುಮಲತಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿವೆ ಎನ್ನಲಾಗುತ್ತಿದೆ. ಪತಿ ಅಂಬರೀಷ್ ಸಾವಿನ ಅನುಕಂಪವನ್ನೇ ನಂಬಿ ಕಣಕ್ಕಿಳಿದಿದ್ದ ಸುಮಲತಾ ಅವರಿಗೆ ನಿಖಿಲ್ ಹೊರ ಜಿಲ್ಲೆಯವರೆಂಬ ವಿಷಯ ಜಿಲ್ಲೆಯ ಸ್ವಾಭಿಮಾನ ಮತ್ತು ಅಸ್ಮಿತೆಯ ಪ್ರಶ್ನೆಯಾಗಿ ಪರಿವರ್ತನೆಯಾದದ್ದು ಫಲಿತಾಂಶದ ದಿಕ್ಕುದೆಸೆಯನ್ನೇ ಬದಲಿಸಿತು.

ಜೋಡೆತ್ತು ಖ್ಯಾತಿಗೆ ಪಾತ್ರರಾದ ಚಿತ್ರನಟರಾದ ದರ್ಶನ್, ಯಶ್ ಬಿರುಸಿನ ಪ್ರಚಾರ, ಜೆಡಿಎಸ್ ನಾಯಕರಿಂದ ಸುಮಲತಾ ನಿಂದನೆ, ಜೋಡೆತ್ತುಗಳ ವಿರುದ್ಧದ ಅವಹೇಳನಕಾರಿ ಟೀಕೆ ನಿಖಿಲ್ ಗೆಲುವಿಗೆ ಮುಳುವಾಯಿತೆಂದೇ ವಿಶ್ಲೇಷಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಸುಮಲತಾ ಅವರ ಪ್ರಬುದ್ಧ ನಡವಳಿಕೆ, ಮಾತಿನ ಶೈಲಿ, ಟೀಕೆಗಳಿಗೆ ತಾಳ್ಮೆಯ ಉತ್ತರ, ಪುತ್ರ ಅಭಿಷೇಕ್ ಅವರ ಸಾಥ್, ಸುಮಲತಾ ಅವರು ಎಲ್ಲಾ ವರ್ಗದ ಜನರ ಮನಗೆಲ್ಲುವಲ್ಲಿ ಸಹಕಾರಿಯಾದವು.

ಆರಂಭದ ಮೂರು-ನಾಲ್ಕು ಸುತ್ತಿನಲ್ಲಿ ಹಾವು-ಏಣಿಯಾಟದ ರೀತಿಯ ಫಲಿತಾಂಶ ಕುತೂಹಲ ಕೆರಳಿಸಿದ್ದರೆ, ನಂತರದ ಎಲ್ಲಾ ಸುತ್ತುಗಳಲ್ಲೂ ಸುಮಲತಾ ಮೇಲುಗೈ ಸಾಧಿಸಿ ಗೆಲುವಿನ ನಗೆಬೀರಿದರು. 

ಏಳು ಕ್ಷೇತ್ರಗಳಲ್ಲಿ ಸುಮಲತಾ ಮುನ್ನಡೆ
ಸುಮಲತಾ ಅವರು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 27,779, ಕೆ.ಆರ್.ನಗರ ಕ್ಷೇತ್ರದಲ್ಲಿ 2,834, ಕೆ.ಆರ್.ಪೇಟೆಯಲ್ಲಿ 6,988, ಮೇಲುಕೋಟೆಯಲ್ಲಿ 15,888, ಮಂಡ್ಯ ಕ್ಷೇತ್ರದಲ್ಲಿ 29,272, ಮದ್ದೂರು ಕ್ಷೇತ್ರದಲ್ಲಿ 18,993 ಹಾಗೂ ಮಳವಳ್ಳಿಯಲ್ಲಿ 32,068 ಮತಗಳ ಮುನ್ನಡೆ ಪಡೆದಿದ್ದರೆ, ನಿಖಿಲ್ ಅವರು ನಾಗಮಂಗಲ ಕ್ಷೇತ್ರವೊಂದರಲ್ಲಿ ಮಾತ್ರ 8,480 ಮತಗಳ ಮುನ್ನಡೆ ಪಡೆದಿದ್ದಾರೆ.

ಸುಮಲತಾ ಅಭಿನಂದನೆ
ತನ್ನ ಗೆಲುವಿಗೆ ಕಾರಣರಾದ ಜಿಲ್ಲೆಯ ಜನತೆಗೆ ಸುಮಲತಾ ಅಂಬರೀಷ್ ಫೇಸ್ಬುಕ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಮಂಡ್ಯದ ಜನತೆ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ. ಹಣಬಲ, ತೋಳ್ಬಲ, ಆಮಿಷಗಳನ್ನು ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X