ಹಿಮಾಚಲ ಪ್ರದೇಶಲ್ಲಿ ಬಿಜೆಪಿ ಕ್ಲೀನ್ ಸ್ವೀಪ್
ಶಿಮ್ಲ, ಮೇ 23: ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದು ಎಲ್ಲಾ ನಾಲ್ಕು ಸಂಸದೀಯ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು 3.23 ಲಕ್ಷಕ್ಕೂ ಅಧಿಕ ಮತಗಳ ಗೆಲುವು ಸಾಧಿಸಿದ್ದಾರೆ. ಕಂಗ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೃಷನ್ ಕಪೂರ್ ಕಾಂಗ್ರೆಸ್ನ ಪವನ್ ಕಾಜಲ್ ಎದುರು ಗೆಲುವು ಸಾಧಿಸಿದ್ದರೆ, ಹಮೀರ್ಪುರ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿಯ ಅನುರಾಗ್ ಠಾಕೂರ್ ಕಾಂಗ್ರೆಸ್ನ ರಾಮ್ಲಾಲ್ ಠಾಕೂರ್ ವಿರುದ್ಧ ಜಯ ಸಾಧಿಸಿದ್ದಾರೆ.
ಶಿಮ್ಲದಲ್ಲಿ ಬಿಜೆಪಿಯ ಸುರೇಶ್ ಕಶ್ಯಪ್ ಕಾಂಗ್ರೆಸ್ನ ಡಾ ಧನಿರಾಮ್ ಶಾಂಡಿಲ್ ವಿರುದ್ಧ , ಮಂಡಿ ಸಂಸದೀಯ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿಯ ರಾಮ್ಸ್ವರೂಪ್ ಶರ್ಮ ಕಾಂಗ್ರೆಸ್ನ ಆಶ್ರಯ್ ಶರ್ಮ ವಿರುದ್ಧ ಜಯ ಗಳಿಸಿದ್ದಾರೆ.
Next Story