Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಶಿವಮೊಗ್ಗ ಲೋಕಸಭಾ ಕ್ಷೇತ್ರ: ಮುಂದುವರಿದ...

ಶಿವಮೊಗ್ಗ ಲೋಕಸಭಾ ಕ್ಷೇತ್ರ: ಮುಂದುವರಿದ ಬಿಜೆಪಿಯ ಗೆಲುವಿನ ನಾಗಾಲೋಟ

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಭಾರೀ ಮುಖಭಂಗ

ವಾರ್ತಾಭಾರತಿವಾರ್ತಾಭಾರತಿ23 May 2019 11:57 PM IST
share
ಶಿವಮೊಗ್ಗ ಲೋಕಸಭಾ ಕ್ಷೇತ್ರ: ಮುಂದುವರಿದ ಬಿಜೆಪಿಯ ಗೆಲುವಿನ ನಾಗಾಲೋಟ

ಶಿವಮೊಗ್ಗ, ಮೇ 23: 'ಮುಂದುವರಿದ ಬಿಜೆಪಿಯ ಗೆಲುವಿನ ನಾಗಾಲೋಟ, ಮತ್ತೆ ತೀವ್ರ ಮುಖಭಂಗಕ್ಕೀಡಾದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ... ಮೂರನೇ ಬಾರಿ ಲೋಕಸಭೆ ಪ್ರವೇಶಿಸಿದ ಬಿ.ವೈ.ರಾಘವೇಂದ್ರ...ಎರಡನೇ ಬಾರಿಯೂ ವಿಫಲವಾದ ಮಧು ಬಂಗಾರಪ್ಪ..!

ಇದು, ಮಾಜಿ ಸಿಎಂಗಳ ಪುತ್ರರಿಬ್ಬರ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದ್ದ ಹಾಗೂ ರಾಜ್ಯದ ಹೈವೋಲ್ಟೇಜ್ ಕಣಗಳಲ್ಲೊಂದಾಗಿ ಬಿಂಬಿತವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಪ್ರಮುಖಾಂಶಗಳು. 

ಭಾರೀ ಜಿದ್ದಾಜಿದ್ದಿ-ನೇರ ಹಣಾಹಣಿ ಹೋರಾಟದಲ್ಲಿ ಕೊನೆಗೂ ಕೋಟೆ ಉಳಿಸಿಕೊಳ್ಳುವಲ್ಲಿ ಬಿಜೆಪಿ ಪಾಳಯ ಯಶಸ್ವಿಯಾಗುವ ಮೂಲಕ, ಪ್ರಾಬಲ್ಯ ಮೆರೆದಿದೆ. ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಭಾರೀ ಅಂತರದಲ್ಲಿ ಆ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಜಯ ಸಾಧಿಸಿದ್ದಾರೆ.  

ಭಾರೀ ಹೋರಾಟದ ನಿರೀಕ್ಷೆ ಮೂಡಿಸಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವು, ಕಮಲ ಕೋಟೆ ಬೇಧಿಸಲು ಸಾಧ್ಯವಾಗದೆ ಪರಾಭವಗೊಂಡಿದೆ. ಕಳೆದ ಕೆಲ ತಿಂಗಳುಗಳ ಹಿಂದಷ್ಟೆ ನಡೆದ ಉಪ ಚುನಾವಣೆ ವೇಳೆ ತೋರಿದ್ದ ಸಾಧನೆಯೂ, ಈ ಬಾರಿ ತೋರಿಲ್ಲ. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮಧು ಬಂಗಾರಪ್ಪರವರು, ಎಲ್ಲರ ನಿರೀಕ್ಷೆ ಹುಸಿಗೊಳಿಸಿದ್ದಾರೆ. 

ಮತ ಲೆಕ್ಕಾಚಾರ: ವಿಜೇತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರು (ಅಂಚೆ - ಸರ್ವೀಸ್ ಮತ ಪತ್ರ ಸೇರಿದಂತೆ) 7,29,872 ಮತ ಪಡೆದಿದ್ದಾರೆ. ಅವರ ಪ್ರತಿಸ್ಪರ್ಧಿ ಮೈತ್ರಿಕೂಟದ ಮಧು ಬಂಗಾರಪ್ಪರವರು 5,06,512 ಮತ ಗಳಿಸಲಷ್ಟೆ ಶಕ್ತವಾದರು. ಅಂತಿಮವಾಗಿ 2,23,360 ಮತಗಳ ಅಂತರದಲ್ಲಿ ಬಿ.ವೈ.ಆರ್. ಗೆಲುವಿನ ನಗೆ ಬೀರಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ 52,148 ಲೀಡ್ ಸಂಪಾದಿಸಿದ್ದ ಅವರು, ಈ ಬಾರಿ ಭಾರೀ ಮುನ್ನಡೆ ಗಳಿಸಿ ಎದುರಾಳಿಗಳ ಹುಬ್ಬೇರುವಂತೆ ಮಾಡಿದ್ದಾರೆ. 

ಉಳಿದಂತೆ ಬಿಎಸ್‍ಪಿ ಅಭ್ಯರ್ಥಿ ಗುಡ್ಡಪ್ಪರವರು 7350 ಮತ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಕೃಷ್ಣರವರು 5653 ಮತ, ಉತ್ತಮ ಪ್ರಜಾಕೀಯ ಪಕ್ಷದ ಆರ್.ವೆಂಕಟೇಶ್‍ರವರು 4087 ಮತ, ಪಕ್ಷೇತರರಾದ ಎಸ್.ಉಮೇಶ್ವರಪ್ಪ 1521 ಮತ, ಉಮೇಶ್‍ ವರ್ಮಾ 4465 ಮತ, ಮುಹಮ್ಮದ್ ಯೂಸೂಫ್ ಖಾನ್ 1579 ಮತ, ಎನ್.ಟಿ.ವಿಜಯಕುಮಾರ್ 1578 ಮತ, ವಿನಯ್ ಕೆ.ಸಿ. ರಾಜಾವತ್ 3317 ಮತ, ಶಶಿಕುಮಾರ್ ಎಸ್. ಗೌಡ 5845 ಮತ, ಶೇಖರ್‍ನಾಯ್ಕ್‍ರವರಿಗೆ 3930 ಮತಗಳು ಬಂದಿವೆ. ನಿಯಮಾನುಸಾರ ಮೂರನೇ ಎರಡರಷ್ಟು ಮತ ಗಳಿಸದ ಕಾರಣದಿಂದ ಈ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಉಳಿದಂತೆ 'ಮೇಲ್ಕಂಡ ಯಾವ ಅಭ್ಯರ್ಥಿಯೂ ಇಷ್ಟವಿಲ್ಲ' (ನೋಟಾ) ಆಯ್ಕೆಗೆ 6862 ಮತಗಳು ಸಂದಾಯವಾಗಿವೆ. 

ಮತದಾದನ ವಿವರ: ಕಳೆದ ಏಪ್ರಿಲ್ 23 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಅತ್ಯದಿಕ ಶೇ. 76.43 ರಷ್ಟು ಮತದಾನವಾಗಿತ್ತು. 8 ವಿಧಾನಸಭಾ ಕ್ಷೇತ್ರಗಳಿಂದ 16,75,975 ಮತದಾರರು ಮತದಾನ ಮಾಡಲು ಅರ್ಹತೆ ಹೊಂದಿದ್ದರು. ಇದರಲ್ಲಿ 12,80,363 ಜನರು ಹಕ್ಕು ಚಲಾಯಿಸಿದ್ದರು. 8,31,185 ಪುರುಷ ಮತದಾರರಲ್ಲಿ 6,40,736 (ಶೇ. 77.09) ಹಾಗೂ 8,44,740 ಮಹಿಳಾ ಮತದಾರರಲ್ಲಿ 6,39,195 (ಶೇ. 75.67) ಜನರು ಮತ ಹಾಕಿದ್ದರು. ಇತರೆ ವರ್ಗದ 50 ಮತದಾರರಿದ್ದು, ಇದರಲ್ಲಿ ಕೇವಲ 5 (ಶೇ. 10) ಜನರು ಮಾತ್ರ ಮತ ಹಾಕಿದ್ದರು. ಶಿವಮೊಗ್ಗ ಗ್ರಾಮಾಂತರ ಅಸೆಂಬ್ಲಿಯಲ್ಲಿ ಶೇ. 80.28, ಭದ್ರಾವತಿ - ಶೇ. 69.61, ಶಿವಮೊಗ್ಗ ನಗರ - ಶೇ. 67.59, ತೀರ್ಥಹಳ್ಳಿ - ಶೇ. 80.72, ಶಿಕಾರಿಪುರ - ಶೇ. 80.71, ಸೊರಬ - ಶೇ. 82.59, ಸಾಗರ - ಶೇ. 78.78, ಬೈಂದೂರು - ಶೇ. 75.23 ಮತದಾನವಾಗಿತ್ತು. 

ಎಣಿಕೆ: ಸಹ್ಯಾದ್ರಿ ಕಾಲೇಜು ಕಟ್ಟಡದಲ್ಲಿ ಮತ ಎಣಿಕೆ ನಡೆಯಿತು. ಕೇಂದ್ರ ಚುನಾವಣಾ ವೀಕ್ಷಕರು, ಜಿಲ್ಲಾಧಿಕಾರಿ ಹಾಗೂ ಇತರೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಕೊಠಡಿಗಳ ಬೀಗ ತೆರೆಯಲಾಯಿತು. ಬೆಳಿಗ್ಗೆ 7 ಗಂಟೆಯಿಂದ ಭದ್ರತಾ ಕೊಠಡಿಯಿಂದ ಮತಯಂತ್ರಗಳನ್ನು ಎಣಿಕೆ ಕೊಠಡಿಗೆ ತರಲಾಯಿತು. 

ಮತ ಎಣಿಕೆಗೆ ಪ್ರತಿ ವಿಧಾನಸಭಾ ಕ್ಷೇತ್ರವಾರು ತಲಾ ಎರಡು ಎಣಿಕೆ ಕೊಠಡಿ ಸಜ್ಜುಗೊಳಿಸಲಾಗಿತ್ತು. ಪ್ರತಿ ಕೊಠಡಿಯಲ್ಲಿ 14 ಮೇಜುಗಳಲ್ಲಿ ಎಣಿಕೆ ಕಾರ್ಯ ನಡೆಯಿತು. ಶಿವಮೊಗ್ಗ ಗ್ರಾಮಾಂತರ ಅಸೆಂಬ್ಲಿಗೆ ಮಾತ್ರ ಒಂದೇ ಕೊಠಡಿಯಲ್ಲಿ ಮತ ಎಣಿಕೆ ಕಾರ್ಯ ನಡೆಸಲಾಯಿತು. 

ಶಿವಮೊಗ್ಗ ನಗರ ಅಸೆಂಬ್ಲಿಯಲ್ಲಿ 20 ಹಾಗೂ ಉಳಿದ ಏಳು ಅಸೆಂಬ್ಲಿಗಳ ಮತ ಎಣಿಕೆಯು 19 ಸುತ್ತುಗಳಲ್ಲಿ ಪೂರ್ಣಗೊಂಡಿತು. ತದನಂತರ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಐದರಂತೆ, ಒಟ್ಟು 40 ವಿವಿಪ್ಯಾಟ್‍ಗಳ ಎಣಿಕೆ ಕಾರ್ಯ ನಡೆಯಿತು. ಇ.ವಿ.ಎಂ.ಗಳಲ್ಲಿ ದಾಖಲಾಗಿದ್ದ ಮತಗಳಿಗೂ ವಿ.ವಿ.ಪ್ಯಾಟ್‍ನಲ್ಲಿ ದಾಖಲಾಗಿದ್ದ ಮತಗಳಿಗೂ ಹೋಲಿಕೆಯಾಯಿತು. 

20 ಸುತ್ತುಗಳಲ್ಲಿ 19 ರಲ್ಲಿ ಬಿಜೆಪಿ, ಕೇವಲ 1 ರಲ್ಲಿ ಮೈತ್ರಿಕೂಟಕ್ಕೆ ಮುನ್ನಡೆ!
ಒಟ್ಟಾರೆ 20 ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು. ಇದರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರು 19 ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, ಕೇವಲ ಒಂದು ಸುತ್ತಿನಲ್ಲಿ ಮಾತ್ರ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪಗೆ ಲೀಡ್ ದೊರಕಿತು. 

ಮೊದಲ 1 ರಿಂದ 18 ಸುತ್ತುಗಳವರೆಗೆ ಬಿಜೆಪಿ ಸತತ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಸಫಲವಾಯಿತು. 19 ನೇ ಸುತ್ತಿನಲ್ಲಿ ಮಾತ್ರ ಮೈತ್ರಿಕೂಟವು 921 ಮತಗಳ ಮುನ್ನಡೆ ಗಳಿಸಲಷ್ಟೆ ಶಕ್ತವಾಯಿತು. ಕಟ್ಟಕಡೆಯ 20 ನೇ ಸುತ್ತಿನಲ್ಲಿ ಬಿಜೆಪಿ ಮತ್ತೆ ಲೀಡ್ ಕಾಯ್ದುಕೊಂಡಿತು. ಹಾಗೆಯೇ ಒಟ್ಟಾರೆ 20 ಸುತ್ತುಗಳಲ್ಲಿ ಮೈತ್ರಿಕೂಟವು 2 ನೇ ಸುತ್ತಿನ ಮತ ಎಣಿಕೆಯಲ್ಲಿ ಮಾತ್ರ 30 ಸಾವಿರ ಮತಗಳ ಗಡಿ ದಾಟಿತು. ಉಳಿದಂತೆ ಇತರೆ 19 ಸುತ್ತುಗಳಲ್ಲಿ 30 ಸಾವಿರ ಮತಗಳಿಕೆಯ ಗಡಿ ದಾಟಲು ಸಾಧ್ಯವಾಗಲಿಲ್ಲ.

ಮತಗಳಿಕೆ ವಿವರ: 1 ನೇ ಸುತ್ತಿನಲ್ಲಿ ಬಿಜೆಪಿಯು 36,656 ಹಾಗೂ ಮೈತ್ರಿಕೂಟವು 27,684 ಮತಗಳ ಮುನ್ನಡೆ ಪಡೆದುಕೊಂಡಿತು. 2 ನೇ ಸುತ್ತಿನಲ್ಲಿ ಬಿಜೆಪಿ 39,834 - ಮೈತ್ರಿಕೂಟ 35,553, 3 ನೇ ಸುತ್ತಿನಲ್ಲಿ ಬಿಜೆಪಿ 40,159 - ಮೈತ್ರಿಕೂಟ 27,673, 4 ನೇ ಸುತ್ತಿನಲ್ಲಿ ಬಿಜೆಪಿ 44,042 - ಮೈತ್ರಿಕೂಟ 28,692, 5 ನೇ ಸುತ್ತಿನಲ್ಲಿ ಬಿಜೆಪಿ 40,693 - ಜೆಡಿಎಸ್ 26,975, 

6 ನೇ ಸುತ್ತಿನಲ್ಲಿ ಬಿಜೆಪಿ 42,548 - ಮೈತ್ರಿಕೂಟ 26,845, 7 ನೇ ಸುತ್ತಿನಲ್ಲಿ ಬಿಜೆಪಿ 45,396 - ಮೈತ್ರಿಕೂಟ 26,628, 8 ನೇ ಸುತ್ತಿನಲ್ಲಿ ಬಿಜೆಪಿ 40,033 - ಮೈತ್ರಿಕೂಟ 27,280, 9 ನೇ ಸುತ್ತಿನಲ್ಲಿ ಬಿಜೆಪಿ 38,412 - ಮೈತ್ರಿಕೂಟ 24,644, 10 ನೇ ಸುತ್ತಿನಲ್ಲಿ ಬಿಜೆಪಿ 39,834, ಮೈತ್ರಿಕೂಟ 27,877, 11 ನೇ ಸುತ್ತಿನಲ್ಲಿ ಬಿಜೆಪಿ 39,258 - ಮೈತ್ರಿಕೂಟ 29,840, 

12 ನೇ ಸುತ್ತಿನಲ್ಲಿ ಬಿಜೆಪಿ 41,790 - ಮೈತ್ರಿಕೂಟ 26,972, 13 ನೇ ಸುತ್ತಿನಲ್ಲಿ ಬಿಜೆಪಿ 35,855 - ಮೈತ್ರಿಕೂಟ 28,220, 14 ನೇ ಸುತ್ತಿನಲ್ಲಿ ಬಿಜೆಪಿ 42,105 - ಮೈತ್ರಿಕೂಟ 29,264, 15 ನೇ ಸುತ್ತಿನಲ್ಲಿ ಬಿಜೆಪಿ 43,391 - ಮೈತ್ರಿಕೂಟ 28,150, 16 ನೇ ಸುತ್ತಿನಲ್ಲಿ ಬಿಜೆಪಿ 39,200 - ಜೆಡಿಎಸ್ 28,649, 

17 ನೇ ಸುತ್ತಿನಲ್ಲಿ ಬಿಜೆಪಿ 36,896 - ಮೈತ್ರಿಕೂಟ 25,863, 18 ನೇ ಸುತ್ತಿನಲ್ಲಿ ಬಿಜೆಪಿ 26,864 - ಮೈತ್ರಿಕೂಟ 16,234, 19 ನೇ ಸುತ್ತಿನಲ್ಲಿ ಬಿಜೆಪಿ 8237 - ಮೈತ್ರಿಕೂಟವು 9158 ಹಾಗೂ ಕೊನೆಯ 20 ನೇ ಸುತ್ತಿನಲ್ಲಿ ಬಿಜೆಪಿ 652 ಹಾಗೂ ಮೈತ್ರಿಕೂಟವು 105 ಮತ ಪಡೆಯಿತು. 

8 ಅಸೆಂಬ್ಲಿಗಳಲ್ಲಿಯೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ : ಬೈಂದೂರಿನಲ್ಲಿ ಭಾರೀ ಲೀಡ್!
ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಪಕ್ಷ ಮುನ್ನಡೆ ಸಾಧಿಸುವ ಮೂಲಕ ಎಲ್ಲರ ನಿರೀಕ್ಷೆ ತಲೆಕೆಳಗಾಗುವಂತೆ ಮಾಡಿದೆ. ಬೈಂದೂರು ಹಾಗೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ದೊಡ್ಡ ಮಟ್ಟದ ಲೀಡ್ ಬಿಜೆಪಿಗೆ ಲಭ್ಯವಾಗಿದೆ. ಆದರೆ ಮೈತ್ರಿಕೂಟ ಭಾರೀ ನಿರೀಕ್ಷೆಯಿಟ್ಟಿದ್ದ ಸೊರಬ, ಭದ್ರಾವತಿ ಕ್ಷೇತ್ರಗಳಲ್ಲಿಯೇ ಲೀಡ್ ಸಂಪಾದಿಸುವಲ್ಲಿ ಸೋತಿದೆ.

ಶಿವಮೊಗ್ಗ ಗ್ರಾಮಾಂತರದಲ್ಲಿ ಬಿಜೆಪಿ 91,450 - ಮೈತ್ರಿಕೂಟ 73,204, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ 1,10,928 - ಮೈತ್ರಿಕೂಟ 63,020, ತೀರ್ಥಹಳ್ಳಿಯಲ್ಲಿ ಬಿಜೆಪಿ 86,868 - ಮೈತ್ರಿಕೂಟ 57,337, ಶಿಕಾರಿಪುರದಲ್ಲಿ ಬಿಜೆಪಿ 85,394- ಮೈತ್ರಿಕೂಟ 64,117, ಬೈಂದೂರಿನಲ್ಲಿ ಬಿಜೆಪಿ 1,17,401 - ಮೈತ್ರಿಕೂಟ 43,789, ಸೊರಬದಲ್ಲಿ ಬಿಜೆಪಿ 75,998 - ಮೈತ್ರಿಕೂಟ 73,177, ಸಾಗರ ಬಿಜೆಪಿ 87,497 - ಮೈತ್ರಿಕೂಟ 63,847, ಭದ್ರಾವತಿಯಲ್ಲಿ ಬಿಜೆಪಿ 73,366 - ಮೈತ್ರಿಕೂಟ 67,721 ಮತಗಳಿಸಿದೆ. 

ಉಪ ಚುನಾವಣೆ ಲೆಕ್ಕಾಚಾರ: ಕಳೆದ ಆರು ತಿಂಗಳ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯು ಶಿವಮೊಗ್ಗ ಗ್ರಾಮಾಂತರ, ಶಿವಮೊಗ್ಗ ನಗರ, ತೀರ್ಥಹಳ್ಳಿ, ಶಿಕಾರಿಪುರ, ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿಕೂಟಕ್ಕಿಂತ ಹೆಚ್ಚಿನ ಮತ ಸಂಪಾದಿಸಿದೆ. ಮೈತ್ರಿಕೂಟವು ಸೊರಬ, ಸಾಗರ ಹಾಗೂ ಭದ್ರಾವತಿಯಲ್ಲಿ ಬಿಜೆಪಿಗಿಂತ ಹೆಚ್ಚಿನ ಮತಗಳಿಸಿತ್ತು.

ಶಿವಮೊಗ್ಗ ಗ್ರಾಮಾಂತರದಲ್ಲಿ ಬಿಜೆಪಿ - 75,181, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ 67,899, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ - 77,388, ಮೈತ್ರಿಕೂಟ - 51,815, ತೀರ್ಥಹಳ್ಳಿಯಲ್ಲಿ ಬಿಜೆಪಿ 65,319, ಮೈತ್ರಿಕೂಟ - 58,105, ಶಿಕಾರಿಪುರದಲ್ಲಿ ಬಿಜೆಪಿ 77,570, ಮೈತ್ರಿಕೂಟ - 58,787, ಬೈಂದೂರಿನಲ್ಲಿ ಬಿಜೆಪಿ-68,992, ಮೈತ್ರಿಕೂಟ 54,522 ಮತಗಳಿಸಿದೆ. ಸೊರಬದಲ್ಲಿ ಮೈತ್ರಿಕೂಟ-68,605, ಬಿಜೆಪಿ-67,108, ಸಾಗರ ಮೈತ್ರಿಕೂಟ-68,993, ಬಿಜೆಪಿ-60,256, ಭದ್ರಾವತಿಯಲ್ಲಿ ಬಿಜೆಪಿ - 51,469, ಮೈತ್ರಿಕೂಟ - 62,415 ಮತಗಳಿಸಿದೆ.

ನೋಟಾಗೆ 6862 ಮತ 
ಮೇಲ್ಕಂಡ ಯಾವ ಅಭ್ಯರ್ಥಿಯೂ ಇಷ್ಟವಿಲ್ಲ (ನೋಟಾ)' ಆಯ್ಕೆಗೆ ಒಟ್ಟಾರೆ 6862 ಮತಗಳು ಸಂದಾಯವಾಗಿವೆ. ಇದರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿಯೇ ಅತ್ಯಧಿಕ ಮತಗಳು ಚಲಾವಣೆಯಾಗಿವೆ. ಶಿವಮೊಗ್ಗ ಗ್ರಾಮಾಂತರ ಅಸೆಂಬ್ಲಿಯಲ್ಲಿ 765, ಭದ್ರಾವತಿಯಲ್ಲಿ 804, ಶಿವಮೊಗ್ಗದಲ್ಲಿ 901, ಶಿವಮೊಗ್ಗ ಗ್ರಾಮಾಂತರದಲ್ಲಿ 765, ತೀರ್ಥಹಳ್ಳಿಯಲ್ಲಿ 808, ಶಿಕಾರಿಪುರದಲ್ಲಿ 742, ಸಾಗರದಲ್ಲಿ 884 ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1286 ಮತಗಳು ನೋಟಾಗೆ ಚಲಾವಣೆಯಾಗಿವೆ. 

490 ಮತಗಳು ತಿರಸ್ಕೃತ
ಅಂಚೆ ಹಾಗೂ ಸರ್ವೀಸ್ ಮತಗಳಲ್ಲಿಯೂ ಬಿಜೆಪಿ ಪಕ್ಷ ಮುನ್ನಡೆ ಸಾಧಿಸಿದೆ. ಒಟ್ಟಾರೆ 1788 ಮತಗಳಲ್ಲಿ ಬಿಜೆಪಿಗೆ 970 ಹಾಗೂ ಮೈತ್ರಿಕೂಟಕ್ಕೆ 300 ಮತಗಳು ಸಂದಾಯವಾಗಿವೆ. ಉಳಿದಂತೆ 490 ಮತಗಳು ತಿರಸ್ಕೃತವಾಗಿವೆ. ಅಂಚೆ ಹಾಗೂ ಸರ್ವಿಸ್ ಮತದಾರರು ಸರ್ಕಾರಿ ನೌಕರರಾಗಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಮತಗಳು ತಿರಸ್ಕೃತವಾಗಿರುವುದು ನಿಜಕ್ಕೂ ವಿಷಾದಕರ ಸಂಗತಿ ಎಂದು ಕೆಲ ಸರ್ಕಾರಿ ನೌಕರರು ಹೇಳುತ್ತಾರೆ. 

ನಾಯಕರ ಅಭಿಮತ

ಮತದಾರರು ಪ್ರಬುದ್ಧತೆ ಮರೆದಿದ್ದಾರೆ: ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ
ಶಿವಮೊಗ್ಗ ಕ್ಷೇತ್ರದ ಮತದಾರರು ಪ್ರಬುದ್ಧತೆ ಮೆರೆದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ, ಭಾರೀ ದೊಡ್ಡ ಮತಗಳ ಅಂತರದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಮತದಾರರ ವಿಶ್ವಾಸದಂತೆ ಮುನ್ನಡೆಯುತ್ತೆವೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತೇವೆ. ಕಳೆದ ವಿಧಾನಸಭೆ ಚುನಾವಣೆ, ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿಯೂ ದೊಡ್ಡ ಅಂತರದ ಗೆಲುವು ಸಂಪಾದಿಸಿದೆ. ಇದೆಲ್ಲವನ್ನು ಗಮನಿಸಿದರೆ, ಕ್ಷೇತ್ರದಲ್ಲಿ ಬಿಜೆಪಿಗಿರುವ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ' ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಅಭಿಪ್ರಾಯಪಟ್ಟಿದ್ದಾರೆ. 

ಜನಾಭಿಪ್ರಾಯಕ್ಕೆ ತಲೆಬಾಗುತ್ತೇವೆ: ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ
ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸಕಾರಾತ್ಮಕ ಫಲಿತಾಂಶ ನಿರೀಕ್ಷೆಯಲ್ಲಿ ಮೈತ್ರಿಕೂಟವಿತ್ತು. ಆದರೆ ವ್ಯತಿರಿಕ್ತ ರಿಸಲ್ಟ್ ಬಂದಿದೆ. ಮತದಾರರ ತೀರ್ಪಿಗೆ ಬದ್ದರಾಗಿದ್ದೇವೆ. ಸಂಘಟನೆಯಲ್ಲಿನ ಲೋಪದೋಷ ಸರಿಪಡಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ. ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ, ತಳಮಟ್ಟದಿಂದ ಪಕ್ಷ ಕಟ್ಟುವ ಕಾರ್ಯದತ್ತ ಚಿತ್ತ ಹರಿಸಬೇಕಾಗಿದೆ. ಕಾರ್ಯಕರ್ತರು ಎದೆಗುಂದುವ ಅವಶ್ಯಕತೆಯಿಲ್ಲ. ಸೋಲು-ಗೆಲುವನ್ನು ಸಮಭಾವದಿಂದ ಸ್ವೀಕರಿಸಿ ಮುನ್ನಡೆಯಬೇಕು' ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ. 

ಮತದಾರರ ತೀರ್ಪಿಗೆ ಬದ್ಧ: ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್

ಶಿವಮೊಗ್ಗ ಕ್ಷೇತ್ರದ ಬಗ್ಗೆ ಈ ಬಾರಿ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದೇವೆ. ಮೈತ್ರಿಕೂಟದ ನಾಯಕರು ಒಟ್ಟಾಗಿ ಪ್ರಚಾರ ನಡೆಸಿದ್ದೆವು. ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಎಚ್ಚರವಹಿಸಿದ್ದೆವು. ಇಷ್ಟೆಲ್ಲದರ ಹೊರತಾಗಿಯೂ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ. ಈ ಸೋಲನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ. ಮತದಾರರ ತೀರ್ಪಿಗೆ ತಲೆಬಾಗುತ್ತೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಮರ್ಥವಾಗಿ ಪಕ್ಷ ಸಂಘಟಿಸುವ ಕಾರ್ಯ ನಡೆಸಲಾಗುವುದು. ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ ಮತದಾರರಿಗೆ ತಾವು ಅಭಿನಂದನೆ ಸಲ್ಲಿಸುತ್ತೇನೆ' ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‍ರವರು ತಿಳಿಸಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X