Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಈ ಬಾರಿ ಲೋಕಸಭೆಯಲ್ಲಿ ಹೆಚ್ಚಿದ ಮುಸ್ಲಿಂ...

ಈ ಬಾರಿ ಲೋಕಸಭೆಯಲ್ಲಿ ಹೆಚ್ಚಿದ ಮುಸ್ಲಿಂ ಸಂಸದರ ಸಂಖ್ಯೆ: ಇಲ್ಲಿದೆ ಪ್ರತಿಯೊಬ್ಬರ ವಿವರ

ವಾರ್ತಾಭಾರತಿವಾರ್ತಾಭಾರತಿ24 May 2019 3:23 PM IST
share
ಈ ಬಾರಿ ಲೋಕಸಭೆಯಲ್ಲಿ ಹೆಚ್ಚಿದ ಮುಸ್ಲಿಂ ಸಂಸದರ ಸಂಖ್ಯೆ: ಇಲ್ಲಿದೆ ಪ್ರತಿಯೊಬ್ಬರ ವಿವರ

ಹೊಸದಿಲ್ಲಿ, ಮೇ 24: ಭಾರತದಲ್ಲಿ ಪ್ರತಿ ಬಾರಿ ಚುನಾವಣಾ ಫಲಿತಾಂಶ ಪ್ರಕಟವಾದಾಗ ಅಲ್ಪಸಂಖ್ಯಾತ ಸಮುದಾಯಗಳ, ಪ್ರಮುಖವಾಗಿ ಮುಸ್ಲಿಂ ಸಮುದಾಯದ ಎಷ್ಟು ಮಂದಿ ಸಂಸತ್ ಪ್ರವೇಶಿಸುತ್ತಾರೆಂಬುದು ಅಸಕ್ತಿಯ ವಿಚಾರವಾಗುತ್ತದೆ. ಗುರುವಾರ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಇದೇ ವಿಚಾರ ಚರ್ಚಿಸಲು ಆರಂಭಿಸಿದ್ದರು.

ಸದ್ಯ ಲಭಿಸಿರುವ ಮಾಹಿತಿಯ ಪ್ರಕಾರ ದೇಶಾದ್ಯಂತ ಒಟ್ಟು 27 ಮುಸ್ಲಿಂ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಸಂಖ್ಯೆ 2014ರ ಲೋಕಸಭಾ ಚುನಾವಣೆಗೆ ಹೋಲಿಸಿದಾಗ 5ರಷ್ಟು ಹೆಚ್ಚಾಗಿದೆ. ಕಳೆದ ಬಾರಿ ಒಟ್ಟು 22 ಮುಸ್ಲಿಂ ಸಂಸದರು ಆಯ್ಕೆಯಾಗಿದ್ದರು. ಗುರುವಾರ ಆಯ್ಕೆಯಾದ 27 ಹೊಸ ಮುಸ್ಲಿಂ ಸಂಸದರ ಪೈಕಿ ಆರು ಮಂದಿ ಮುಸ್ಲಿಂ ಪಕ್ಷಗಳಿಂದ ಆಯ್ಕೆಯಾದವರು. ಮೂವರು ಮುಸ್ಲಿಂ ಲೀಗ್ ನವರಾಗಿದ್ದರೆ, ಇಬ್ಬರು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಹಾಗೂ ಒಬ್ಬರು ಯುಡಿಎಫ್ ನವರಾಗಿದ್ದಾರೆ. ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಐದು ಮಂದಿ ಆಯ್ಕೆಯಾಗಿದ್ದರೆ, ನಾಲ್ಕು ಮಂದಿ ಕಾಂಗ್ರೆಸ್ ಪಕ್ಷ, ಹಾಗೂ ತಲಾ ಮೂವರು ಎಸ್‍ಪಿ, ಬಿಎಸ್‍ಪಿ ಹಾಗೂ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಿಂದ ಆಯ್ಕೆಯಾಗಿದ್ದಾರೆ. ಎನ್‍ಸಿಪಿ, ಎಲ್‍ಜೆಪಿ ಹಾಗೂ ಸಿಪಿಎಂ ಪಕ್ಷಗಳ ತಲಾ ಒಬ್ಬರು ಮುಸ್ಲಿಂ ಅಭ್ಯರ್ಥಿ ಲೋಕಸಭೆ ಪ್ರವೇಶಿಸಿದ್ದಾರೆ.

ರಾಜ್ಯವಾರು ಹೇಳುವುದಾದರೆ, ಪಶ್ಚಿಮ ಬಂಗಾಳ ಮತ್ತು  ಉತ್ತರ ಪ್ರದೇಶಗಳಲ್ಲಿ ತಲಾ ಆರು ಮಂದಿ ಮುಸ್ಲಿಂ ಸಂಸದರಿದ್ದರೆ, ಕೇರಳ ಮತ್ತು ಜಮ್ಮು ಕಾಶ್ಮೀರದಿಂದ ತಲಾ ಮೂವರು, ಅಸ್ಸಾಂ, ಬಿಹಾರದಿಂದ ತಲಾ ಇಬ್ಬರು ಹಾಗೂ ಲಕ್ಷದ್ವೀಪ, ಮಹಾರಾಷ್ಟ್ರ, ಪಂಜಾಬ್, ತಮಿಳು ನಾಡು ಮತ್ತು ತೆಲಂಗಾಣದಿಂದ ತಲಾ ಒಬ್ಬರು ಸಂಸದರಿದ್ದಾರೆ.

ಆದರೆ 27 ಮುಸ್ಲಿಂ ಸಂಸದರು ಲೋಕಸಭೆಯ ಒಟ್ಟು ಸಂಖ್ಯಾಬಲದ ಕೇವಲ ಶೇ 4.97ರಷ್ಟು ಮಾತ್ರ ಆಗಿದ್ದಾರೆ. ಲೋಕಸಭೆಯಲ್ಲಿ ಗರಿಷ್ಠ, ಅಂದರೆ 49  ಮುಸ್ಲಿಂ ಸಂಸದರು 1980ರಲ್ಲಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದ ಎರಡು ಅವಧಿಯಲ್ಲಿ ತಲಾ 30 ಹಾಗೂ 34 ಮುಸ್ಲಿಂ ಸಂಸದರಿದ್ದರು. 1952ರಲ್ಲಿ ಕನಿಷ್ಠ, ಅಂದರೆ 11 ಮುಸ್ಲಿಂ ಸಂಸದರಿದ್ದರು.

ಈ ಬಾರಿಯ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ಮುಸ್ಲಿಂ ಅಭ್ಯರ್ಥಿಗಳ ಹೆಸರುಗಳು ಇಂತಿವೆ

ಅಸ್ಸಾಂ

ಬರ್ಪೇಟ - ಅಬ್ದುಲ್ ಖಲೀಖ್ (ಕಾಂಗ್ರೆಸ್)

ಧುಬ್ರಿ - ಬದ್ರುದ್ದೀನ್ ಅಜ್ಮಲ್ (ಎಐಯುಡಿಎಫ್)

ಬಿಹಾರ

ಖಗಾರಿಯ- ಚೌಧರಿ ಮೆಹಬೂಬ್ ಅಲಿ ಕೈಸರ್ (ಎಲ್‍ಜೆಪಿ)

ಕಿಶನ್ ಗಂಜ್ –ಡಾ. ಮುಹಮ್ಮದ್ ಜಾವೇದ್ (ಕಾಂಗ್ರೆಸ್)

ಜಮ್ಮು ಕಾಶ್ಮೀರ

ಅನಂತನಾಗ್ -ಹಸ್ನೈನ್ ಮಸೂದಿ (ನ್ಯಾಷನಲ್ ಕಾನ್ಫರೆನ್ಸ್)

ಬಾರಾಮುಲ್ಲ- ಮುಹಮ್ಮದ್ ಅಕ್ಬರ್ ಲೋನೆ (ನ್ಯಾಷನಲ್ ಕಾನ್ಫರೆನ್ಸ್)

ಶ್ರೀನಗರ-  ಫಾರೂಕ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್)

ಕೇರಳ

ಅಲಪ್ಪುಳ -ಎ ಎಂ ಆರಿಫ್ (ಸಿಪಿಎಂ)

ಮಲಪ್ಪುರಂ- ಪಿ ಕೆ ಕುಂಞಾಲಿಕುಟ್ಟಿ (ಐಯುಎಂಎಲ್)

ಪೊನ್ನಾನಿ- ಇ ಟಿ ಮುಹಮ್ಮದ್ ಬಶೀರ್ (ಐಯುಎಂಎಲ್)

ಲಕ್ಷದ್ವೀಪ

ಲಕ್ಷದ್ವೀಪ -ಮುಹಮ್ಮದ್ ಫೈಝಲ್ ಪಿಪಿ (ಎನ್‍ಸಿಪಿ)

ಮಹಾರಾಷ್ಟ್ರ

ಔರಂಗಾಬಾದ್ -ಸೈಯದ್ ಇಮ್ತಿಯಾಝ್ ಜಲೀಲ್ (ಎಐಎಂಐಎಂ)

ಪಂಜಾಬ್

ಫರೀದ್‍ಕೋಟ್ -ಮುಹಮ್ಮದ್ ಸಾದಿಖ್ (ಕಾಂಗ್ರೆಸ್)

ತಮಿಳುನಾಡು

ರಾಮನಾಥಪುರಂ- ಕೆ ನವಾಸ್ ಕನಿ (ಐಯುಎಂಎಲ್)

ತೆಲಂಗಾಣ

ಹೈದರಾಬಾದ್- ಅಸದುದ್ದೀನ್ ಒವೈಸಿ (ಎಐಎಂಐಎಂ)

ಉತ್ತರ ಪ್ರದೇಶ

ಅಮ್ರೋಹ- ಕುನ್ವರ್ ದಾನಿಶ್ ಅಲಿ (ಬಿಎಸ್‍ಪಿ)

ಗಝೀಪುರ್- ಅಪ್ಝಲ್ ಅನ್ಸಾರಿ (ಬಿಎಸ್‍ಪಿ)

ಮೊರಾದಾಬಾದ್- ಡಾ ಎಸ್ ಟಿ ಹಸನ್ (ಎಸ್‍ಪಿ)

ರಾಮಪುರ್- ಮುಹಮ್ಮದ್ ಅಝಂ ಖಾನ್ (ಎಸ್‍ಪಿ)

ಸಹರಣ್‍ಪರ್- ಹಾಜಿ ಫಝ್ಲರ್ರಹ್ಮಾನ್ (ಬಿಎಸ್‍ಪಿ)

ಸಂಭಲ್-ಡಾ ಶಫೀಖುರ್ರಹ್ಮಾನ್ ಬರ್ಖ್ (ಎಸ್‍ಪಿ)

ಪಶ್ಚಿಮ ಬಂಗಾಳ

ಆರಂಬಾಘ್ - ಅಪ್ರೀನ್ ಅಲಿ (ಎಐಟಿಸಿ)

ಬಸೀರ್ಹತ್-ನುಸ್ರತ್ ಜಹಾನ್ ರುಹಿ (ಎಐಟಿಸಿ)

ಜಂಗೀಪುರ್- ಖಲೀಲುರ್ರಹ್ಮಾನ್ (ಎಐಟಿಸಿ)

ಮಾಲ್ಡಾ ದಕ್ಷಿಣ್ -ಅಬು ಹಸೀಂ ಖಾನ್ ಚೌಧುರಿ (ಕಾಂಗ್ರೆಸ್)

ಮುರ್ಷಿದಾಬಾದ್ -ಅಬು ತಹೇರ್ ಖಾನ್ (ಎಐಟಿಸಿ)

ಉಲುಬೇರಿಯಾ- ಸಜ್ದಾ ಅಹ್ಮದ್ (ಎಐಟಿಸಿ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X