Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಕ್ಯಾಮರಾ-ನೋಟ-ಇತ್ಯಾದಿ...

ಕ್ಯಾಮರಾ-ನೋಟ-ಇತ್ಯಾದಿ...

ವಾರ್ತಾಭಾರತಿವಾರ್ತಾಭಾರತಿ25 May 2019 8:56 PM IST
share
ಕ್ಯಾಮರಾ-ನೋಟ-ಇತ್ಯಾದಿ...

‘‘ನಾನೊಂದು ಕಣ್ಣು. ಒಂದು ಯಾಂತ್ರಿಕ ಕಣ್ಣು. ಕೇವಲ ಒಂದು ಯಂತ್ರವಾದ ನಾನು ‘ನಾನು ಮಾತ್ರ ಕಾಣುವಂತೆ’ ಜಗತ್ತನ್ನು ತೋರಿಸಬಲ್ಲೆ. ಇಂದು ಮತ್ತು ಎಂದೆಂದಿಗೂ ಮಾನವನ ಸಹಾಯಕ ಚಲನಹೀನತೆಯಿಂದ ನಾನು ಬಿಡುಗಡೆ ಹೊಂದಿದ್ದೇನೆ. ನಾನು ನಿರಂತರವಾಗಿ ಚಲನಶೀಲನಾಗಿರುತ್ತೇನೆ. ನಾನು ವಸ್ತುಗಳ ಹತ್ತಿರಕ್ಕೆ ಹೋಗಿ ಹಾಗೆಯೇ ಹಿಂದೆಗೆಯಬಲ್ಲೆ. ಅವುಗಳ ಕೆಳಗೂ ತೂರಬಲ್ಲೆ ನಾನು. ಓಡುತ್ತಿರುವ ಕುದುರೆಯ ವದನದ ಪಕ್ಕದಲ್ಲೂ ನಾನು ಚಲಿಸಬಲ್ಲೆ. ಬಿದ್ದು ಏಳುವ ದೇಹಗಳೊಂದಿಗೆ ನಾನೂ ಸಹ ಏರಿಳಿಯಬಲ್ಲೆ. ನಾನು ಒಂದು ಯಂತ್ರ. ಅತ್ಯಂತ ಗೊಂದಲಮಯ ಸಂದರ್ಭದಲ್ಲೂ ಸರಾಗವಾಗಿ ಪ್ರತಿಕ್ಷಣದ ನಂತರ ಮತ್ತೊಂದು ಕ್ಷಣವನ್ನು ಅತ್ಯಂತ ಸಂಕೀರ್ಣಾವಸ್ಥೆಯನ್ನೂ ದಾಖಲಿಸಬಲ್ಲೆ.

ಕಾಲ ಮತ್ತು ಸ್ಥಳದಿಂದ ಮುಕ್ತವಾದ ನಾನು, ವಿಶ್ವದ ಯಾವ ಒಂದು ನೆಲೆ ಯಿಂದ ಅಥವಾ ಎಲ್ಲಾ ನೆಲೆಯಿಂದಲೂ ನಾನು ಇಚ್ಛೆಪಟ್ಟಲ್ಲೆಲ್ಲ ಇದ್ದು ಸಹಕರಿಸಬಲ್ಲೆ. ಜಗತ್ತಿನ ಬಗ್ಗೆ ಒಂದು ನವೀನ ಗ್ರಹಣ ಕ್ರಿಯೆಯ ಸೃಷ್ಟಿಗೆ ನನ್ನ ಕಾರ್ಯನಿರ್ವಹಣಾ ಶೈಲಿಯು ದಾರಿ ಮಾಡಿಕೊಡುತ್ತದೆ. ಹೀಗೆ ನಮಗೆ ತಿಳಿಯದ ಜಗತ್ತೊಂದನ್ನು ನಾನು ಹೊಸದೊಂದು ರೀತಿಯಲ್ಲಿ ವ್ಯಾಖ್ಯಾನಿಸಬಲ್ಲೆ’’

ಕ್ಯಾಮರಾ ತೋರಿಸುವ ಯಾವುದಾದರೂ ‘ಈ’ ನಿರ್ದಿಷ್ಟ ಕ್ಷಣಿಕತೆಯನ್ನು ಇತರ ಹಿಂದಿನ ಮತ್ತು ಮುಂದಿನ ಕ್ಷಣಗಳಿಂದ ಪ್ರತ್ಯೇಕಗೊಳಿಸಿಬಿಡುತ್ತದೆ. ಹಾಗೆ ಮಾಡುವಾಗ ಕ್ಯಾಮರಾ ದೃಶ್ಯವು ‘ಕಾಲಾತೀತ’ ಎಂಬ ನಂಬಿಕೆಯನ್ನು ನಾಶ ಮಾಡುತ್ತದೆ. ಮತ್ತೊಂದು ರೀತಿಯಲ್ಲಿ ಹೇಳಬಹುದಾದರೆ, ದೃಶ್ಯವೊಂದರ ಅನುಭವದೊಂದಿಗೆ ಬದಲಾಗುವ ಕಾಲದ ಪರಿಕಲ್ಪನೆಯು ಅನಿವಾರ್ಯ ಎಂಬುದನ್ನು ಕ್ಯಾಮರಾ ತೋರಿಸಿಕೊಟ್ಟಿತು. ಕ್ಯಾಮರಾದ ಅನ್ವೇಷಣೆಯು ಮನುಷ್ಯ ನೋಡುವ ಕ್ರಮವನ್ನೇ ರೂಪಾಂತರಿಸಿಬಿಟ್ಟಿತು. ಕಣ್ಣಿಗೆ ಕಂಡದ್ದೆಲ್ಲವೂ ಬೇರೇನೇನೋ ಅರ್ಥಗಳನ್ನೆಲ್ಲ ಹುಟ್ಟಿ ಹಾಕತೊಡಗಿದವು. ಇದು ಕೂಡಲೇ ಚಿತ್ರಕಲೆಯ ಮೇಲೆ ಅಪಾರ ಪ್ರಭಾವವನ್ನು ಬೀರಿತು. ದೂರದರ್ಶನದ ತೆರೆಯ ಮೇಲೆ ಚಿತ್ರ ಕೃತಿಯೊಂದನ್ನು ತೋರಿಸಿದಾಗ ಏನಾಗುತ್ತದೆ ಎಂಬುದನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಆಗ ಚಿತ್ರಕೃತಿಯು ಪ್ರತಿವೀಕ್ಷಕರ ಮನೆಯನ್ನು ಪ್ರವೇಶಿಸುತ್ತದೆ. ಆಯಾ ಮನೆಯ ಟೆಲಿವಿಷನ್‌ನ ಆಕಾರದ ಪ್ರಕಾರ ಉದ್ದ ಅಗಲವಾಗುತ್ತ ಅಲ್ಲಿ ಅದರ ಸುತ್ತ ಗೋಡೆಯ ವಿನ್ಯಾಸವಿರುತ್ತದೆ. ಆಯಾ ಮನೆಯ ಮೇಜು, ಕುರ್ಚಿ ಮತ್ತು ಶ್ರೀಮಂತಿಕೆ ಬಡತನಗಳಿರುತ್ತದೆ. ಮನೆಯೊಡೆಯನ ಸಾಧನೆ ಯೆಂದು ಫಲಕಗಳೂ ಸುತ್ತುವರಿದಿರುತ್ತವೆ. ಆತನ ಸಂಸಾರದ ವಾತಾವರಣದೊಳಕ್ಕೆ ಈ ಚಿತ್ರಕೃತಿ ಪ್ರವೇಶ ಪಡೆದುಬಿಡುತ್ತದೆ. ಅವರ ಮಾತುಕತೆಯ, ವೌನದ, ಮುನಿಸು ಪ್ರೀತಿಗಳ ಭಾಗವಾಗಿಸಿಬಿಡುತ್ತದೆ. ಅವರು ಅರ್ಥೈಸುವಿಕೆಗೊಂದು ಹೊಸ ಅರ್ಥವನ್ನು ಸೇರಿಸುತ್ತದೆ ಕಲಾಕೃತಿ ಅದೇ ಕಾಲಕ್ಕೆ ಆ ಕೃತಿಯು ಕೋಟ್ಯಂತರ ಮನೆಗಳನ್ನು ಪ್ರವೇಶಿಸಿ, ಪ್ರತಿಯೊಂದು ಮನೆ ಯಲ್ಲೂ ಒಂದೇ ಆದ ತನ್ನನ್ನು ಹಲವಾಗಿಸಿ, ವಿಭಿನ್ನವಾಗಿ ಕಾಣು ವಂತಾಗಿಸಿಬಿಡುತ್ತದೆ. ಕ್ಯಾಮರಾದ ನೆಪದಿಂದಾಗಿ ವೀಕ್ಷಕನೇ ಚಿತ್ರದ ಬಳಿ ಬರುವುದಕ್ಕೆ ಬದಲಾಗಿ ಚಿತ್ರವೇ ವೀಕ್ಷಕನ ಬಳಿಗೆ ಹೋಗುತ್ತದೆ. ಅದರ ಈ ಪಯಣದಲ್ಲಿ ಅದು ಒಂದು ಅನನ್ಯವಾಗಿದ್ದ ಅರ್ಥವು ಹಲವಾಗಿ, ವೈವಿಧ್ಯಮಯವಾಗಿ ಬಿಡುತ್ತದೆ. ದೊಡ್ಡವರು ಮತ್ತು ಚಿಕ್ಕವರೆಲ್ಲರೂ ಕೆಲವೊಮ್ಮೆ ತಮ್ಮ ಮಲಗುವ ಕೋಣೆಗಳಲ್ಲಿ ಅಥವಾ ತಮ್ಮ ಕಾರ್ಯಚಟುವಟಿಕೆಯ ಕೋಣೆಗಳಲ್ಲಿ ಹಲವಾರು ಕಾಗದಗಳನ್ನು ಅಂಟಿಸಿರುವುದನ್ನು ಕಾಣಬಹುದು. ಪತ್ರಗಳು, ಫೋಟೋಗಳು, ಚಿತ್ರಕೃತಿಗಳ ಪ್ರತಿ ಕೃತಿಗಳೂ ಸುದ್ದಿ ಪತ್ರಿಕೆಗಳ ತುಣುಕುಗಳು, ಅಸಲಿ ರೇಖಾಚಿತ್ರಗಳು, ಅಂಚೆ ಚೀಟಿ ಇತ್ಯಾದಿಗಳು ಅವರ ಗೋಡೆಗಳನ್ನು ರಾರಾಜಿಸುತ್ತಿರುತ್ತವೆ. ಅಂತಹ ಪ್ರತಿ ಬೋರ್ಡಿನ ಮೇಲಿನ ಎಲ್ಲ ಆಕೃತಿಗಳೂ ಸಹ ಒಂದೇ ಭಾಷೆಯನ್ನು ಆಡುತ್ತಿರುತ್ತವೆ. ಆ ಬೋರ್ಡಿನ ಚೌಕಟ್ಟಿನಲ್ಲಿ ಎಲ್ಲವೂ ಹೆಚ್ಚು ಕಡಿಮೆ ಸಮಾನವಾಗಿರುತ್ತವೆ. ಏಕೆಂದರೆ ಆ ಎಲ್ಲಾ ತುಣುಕುಗಳನ್ನು ತೀರ ವೈಯಕ್ತಿಕವಾಗಿ ಯಾರೋ ಯಾವ್ಯಾವಾಗಲೋ ಆಯ್ಕೆ ಮಾಡಿರುತ್ತಾರೆ. ಆ ಕೋಣೆಯಲ್ಲಿ ವಾಸಿಸುವ ವ್ಯಕ್ತಿಯ ಅನುಭವಗಳಿಗೆ ಮತ್ತು ವ್ಯಕ್ತಿತ್ವಕ್ಕೆ ತಕ್ಕಂತಿರುತ್ತವೆ ಅವುಗಳು. ತಾರ್ಕಿಕವಾಗಿ ಹೇಳಬಹುದಾದರೆ ನಿಜವಾದ ಅರ್ಥದಲ್ಲಿ ಇಂತಹ ಬೋರ್ಡುಗಳೇ ಸಂಗ್ರಹಾಲಯಗಳಾಗಬೇಕಿರುವುದು !

ಎಲ್ಲಾ ಕಲೆಗಳನ್ನೂ, ಸಹ ಸಹಜ ಸುಲಲಿತ ರೀತಿಯಲ್ಲಿ ಅನುಭ ವಿಸುವುದು ಎಂದೂ ನಾವಿಲ್ಲಿ ಭಾವಿಸುತ್ತಿಲ್ಲ. ಪುರಾತನ ಗ್ರೀಕ್ ಭಾವಶಿಲ್ಪದ ಪ್ರತಿಕೃತಿಯೊಂದು ನಮ್ಮ ಯಾವುದೋ ವೈಯಕ್ತಿಕ ಅನುಭವದ ಅನಿವಾರ್ಯ ಭಾಗವಾಗಿದೆ ಎಂಬ ಕಾರಣಕ್ಕೆ ಸುದ್ದಿ ಪತ್ರಿಕೆಯಿಂದ ಅದನ್ನು ಕತ್ತರಿಸಿ, ಬೇರ್ಪಡಿಸಿ ನಮ್ಮ ಕೋಣೆಯ ಗೋಡೆಯ ಮೇಲೆ ಇನ್ನಿತರ ವೈಯಕ್ತಿಕ ಆಯ್ಕೆಯ ಆಕೃತಿಗಳೊಂದಿಗೆ ಅಂಟಿಸಿಬಿಡುವುದು, ಆ ಗ್ರೀಕ್ ಶಿಲ್ಪವನ್ನು ಕುರಿತಾದ ಸಂಪೂರ್ಣ ಅರ್ಥೈಸುವಿಕೆಯನ್ನು ನಾವು ಪೂರ್ಣಗೊಳಿಸಿದಂತೆಯೂ ಆಗುವುದಿಲ್ಲ. ಒಂದು ನಿರ್ದಿಷ್ಟ ಸಂರಕ್ಷಿತ ಪರಿಧಿಯೊಳಗೆ ದೃಶ್ಯಕಲೆ ಯಾವಾಗಲೂ ನೆಲೆನಿಂತಿರುತ್ತದೆ. ಅದು ತೀರ ಜನಪ್ರಿಯವಾಗಿರು ವುದಿಲ್ಲ. ಅಂದರೆ ಜನಪ್ರಿಯತೆಗೆ ದೃಶ್ಯಕಲೆಯನ್ನು ಸಂಪೂರ್ಣ ವಾಗಿ ತನ್ನಲ್ಲಿ ಅಡಗಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.

ಕೃಪೆ: ನೋಡುವ ಬಗೆ-ಕೃತಿಯಿಂದ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X