Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಸ್ಮಾರ್ಟ್ ಫೋನ್ ಬಳಕೆ: ನಿಮ್ಮಮಕ್ಕಳ...

ಸ್ಮಾರ್ಟ್ ಫೋನ್ ಬಳಕೆ: ನಿಮ್ಮಮಕ್ಕಳ ಕೈಗಳು ದುರ್ಬಲಗೊಂಡಿವೆ ಎನ್ನುವ ಸಂಕೇತಗಳಿವು…

ವಾರ್ತಾಭಾರತಿವಾರ್ತಾಭಾರತಿ25 May 2019 9:43 PM IST
share
ಸ್ಮಾರ್ಟ್ ಫೋನ್ ಬಳಕೆ: ನಿಮ್ಮಮಕ್ಕಳ ಕೈಗಳು ದುರ್ಬಲಗೊಂಡಿವೆ ಎನ್ನುವ ಸಂಕೇತಗಳಿವು…

ವಿದ್ಯುನ್ಮಾನ ಸಾಧನಗಳು ಮಕ್ಕಳ ಕೈಗಳ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುತ್ತವೆ ಮತ್ತು ಅವುಗಳನ್ನು ದುರ್ಬಲವಾಗಿಸುತ್ತವೆ. ಇಂದಿನ ಮಕ್ಕಳು ಪುಸ್ತಕಗಳು ಮತ್ತು ಪೆನ್ಸಿಲ್‌ಗಳಿಗಿಂತ ಹೆಚ್ಚು ವಿದ್ಯುನ್ಮಾನ ಸಾಧನಗಳಿಂದ ಆಕರ್ಷಿತರಾಗಿದ್ದಾರೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಬಳಸುವುದರಿಂದ ಭವಿಷ್ಯದಲ್ಲಿ ವಸ್ತುಗಳನ್ನು ಹಿಡಿದುಕೊಳ್ಳಲು ಅಗತ್ಯ ಬಲದ ಬೆಳವಣಿಗೆಗೆ ತಡೆಯಾಗುತ್ತದೆ ಎನ್ನುವುದು ನಿಮಗೆ ಗೊತ್ತೇ?, ನಿಮ್ಮ ಮಗುವಿಗೆ ಬೆರಳುಗಳನ್ನು ಬಳಸುವುದು ಮತ್ತು ವಸ್ತುಗಳನ್ನು ಹಿಡಿದುಕೊಳ್ಳುವುದು ಕಷ್ಟವಾಗುತ್ತಿದ್ದರೆ ಆತ/ಆಕೆ ದುರ್ಬಲ ಹಸ್ತಗಳ ಸಮಸ್ಯೆಯಿಂದ ಬಳಲುತ್ತಿರಬಹುದು. ತಮ್ಮದೇ ವಯಸ್ಸಿನ ಇತರ ಮಕ್ಕಳು ಸುಲಭವಾಗಿ ಮಾಡುವ ಕತ್ತರಿಯಿಂದ ಕತ್ತರಿಸುವ,ಕೋಟ್‌ಗಳ ಝಿಪ್ ಹಾಕಿಕೊಳ್ಳುವಂತಹ ಪ್ರಾಥಮಿಕ ಕೆಲಸಗಳನ್ನು ಮಾಡುವ ನಿಮ್ಮ ಮಕ್ಕಳ ಸಾಮರ್ಥ್ಯವನ್ನು ವಿದುನ್ಮಾನ ಸಾಧನಗಳು ಕುಂದಿಸಬಹುದು. ನಿಮ್ಮ ಮಕ್ಕಳ ಕೈಗಳು ದುರ್ಬಲವಾಗಿವೆ ಎನ್ನುವುದನ್ನು ಸೂಚಿಸುವ ಕೆಲವು ಎಚ್ಚರಿಕೆಯ ಸಂಕೇತಗಳು ಇಲ್ಲಿವೆ...

►ಪೆನ್ಸಿಲ್ ಹಿಡಿತ

ದುರ್ಬಲ ಹಸ್ತಗಳನ್ನು ಹೊಂದಿರುವ ಮಗುವು ಬರೆಯುವಾಗ,ಚಿತ್ರ ಬಿಡಿಸುವಾಗ ಅಥವಾ ಬಣ್ಣ ಹಚ್ಚುವಾಗ ಆಗಾಗ್ಗೆ ಪೆನ್ಸಿಲ್‌ನ್ನು ಹಿಡಿದುಕೊಂಡ ಶೈಲಿಯನ್ನು ಬದಲಿಸುತ್ತಲೇ ಇರುತ್ತದೆ ಮತ್ತು ಅದಕ್ಕೆ ಸುಲಭವಾಗಿ ಸುಸ್ತಾಗುವುದರಿಂದ ಸಾಮಾನ್ಯವಾಗಿ ಎರಡೂ ಕೈಗಳನ್ನು ಬಳಸುತ್ತಿರುತ್ತದೆ. ಮಗುವಿನ ಹಸ್ತಗಳು ದುರ್ಬಲವಾಗಿದ್ದರೆ ನರ್ಸರಿಗೆ ಹೋಗುವ ಮಗು ಕೂಡ ಪೆನ್ಸಿಲ್‌ನ್ನು ಹೆಬ್ಬೆರಳು,ತೋರುಬೆರಳು ಮತ್ತು ಮಧ್ಯದ ಬೆರಳಿನ ಬದಲಾಗಿ ಮುಷ್ಠಿಯಲ್ಲಿ ಹಿಡಿದುಕೊಳ್ಳುತ್ತದೆ.

►ಬರವಣಿಗೆ

ಬರೆಯುವಾಗ ಪೆನ್ಸಿಲ್‌ನ್ನು ನಿಯಂತ್ರಿಸುವುದು ಕಷ್ಟವಾಗುವುದು ಇನ್ನೊಂದು ಎಚ್ಚರಿಕೆಯ ಸಂಕೇತವಾಗಿದೆ. ಇದರಿಂದಾಗಿ ಮಗುವಿನ ಅಕ್ಷರಗಳು ಓರಕೋರೆಯಾಗುತ್ತವೆ ಮತ್ತು ಓದಲು ಅಸಾಧ್ಯವಾಗುತ್ತವೆ. ಅಲ್ಲದೆ ಇಂತಹ ಮಕ್ಕಳು ಬರೆಯುವಾಗ ಅತ್ಯಂತ ಕಡಿಮೆ ಒತ್ತಡವನ್ನು ಹಾಕುವುದರಿಂದ ಕಾಗದದ ಮೇಲೆ ಅಕ್ಷರಗಳು ಸ್ಪಷ್ಟವಾಗಿ ಮೂಡುವುದಿಲ್ಲ.

►ಊಟದ ಸಂದರ್ಭ

 ದುರ್ಬಲ ಹಸ್ತಗಳನ್ನು ಹೊಂದಿರುವ ಮಕ್ಕಳಿಗೆ ಡಬ್ಬಿಗಳ ಮುಚ್ಚಳವನ್ನು ತೆರೆಯುವುದು ಅಥವಾ ಊಟದ ಪ್ಯಾಕೆಟ್‌ನ್ನು ಹರಿಯುವುದು ಕಷ್ಟವಾಗುವುದರಿಂದ ಊಟದ ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗಬಹುದು. ನೀರಿನ ಬಾಟ್ಲಿಯ ಮುಚ್ಚಳವನ್ನು ತೆರೆಯುವುದೂ ಕಷ್ಟವಾಗಬಹುದು,ಕೆಲವೊಮ್ಮೆ ಬೆರಳುಗಳಲ್ಲಿ ಎತ್ತಿಕೊಂಡ ಆಹಾರ ಕೆಳಕ್ಕೂ ಬೀಳಬಹುದು.

►ಬಟ್ಟೆಗಳನ್ನು ಧರಿಸುವುದು

ಹಸ್ತಗಳು ದುರ್ಬಲವಾಗಿದ್ದರೆ ಮಕ್ಕಳಿಗೆ ಸಾಕ್ಸ್ ಮತ್ತು ಶೂಗಳನ್ನು ಧರಿಸುವುದು,ಶೂಗಳ ಲೇಸ್‌ಗಳನ್ನು ಕಟ್ಟುವುದು ಕಷ್ಟವಾಗುತ್ತದೆ. ಬೆಲ್ಟ್‌ನ್ನು ಎಳೆದು ಧರಿಸುವುದು,ಉಡುಪಿನ ಬಟನ್‌ಗಳನ್ನು ಹಾಕಿಕೊಳ್ಳುವ ಮತ್ತು ತೆರೆಯುವ ಹಾಗೂ ಝಿಪ್ ಎಳೆದುಕೊಳ್ಳುವಂತಹ ಸರಳ ಕೆಲಸಗಳೂ ಅವರಿಗೆ ಭಾರೀ ಎನಿಸುತ್ತವೆ.

►ಆಟದ ಸಮಯ

ದುರ್ಬಲ ಕೈಗಳುಳ್ಳ ಮಕ್ಕಳಿಗೆ ಆಟಿಕೆಗಳು ಅಥವಾ ಆಟಗಳಲ್ಲಿ ಉತ್ಸಾಹವು ಕಡಿಮೆಯಾಗಬಹುದು. ಆಟಿಕೆಗಳು ಅಥವಾ ಸಣ್ಣಪುಟ್ಟ ವಸ್ತುಗಳನ್ನು ಅವರು ಕೆಳಕ್ಕೆ ಹಾಕುವುದು ಸಾಮಾನ್ಯವಾಗಿದೆ. ಕಲೆ ಮತ್ತು ಕರಕುಶಲ ಚಟುವಟಿಕೆಗಳೂ ಅವರಿಗೆ ದಣಿವನ್ನುಂಟು ಮಾಡುತ್ತದೆ. ಹೊರಾಂಗಣ ಕ್ರೀಡೆಗಳು,ಅವು ವಿಶೇಷವಾಗಿ ಹತ್ತುವುದು ಮತ್ತು ಆಟದ ಸಾಧನಗಳ ಬಳಕೆಯನ್ನು ಒಳಗೊಂಡಿದ್ದರೆ ಅವರಿಗೆ ಬೇಗನೇ ಬಳಲಿಕೆಯನ್ನುಂಟು ಮಾಡಬಹುದು. ಈ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಾಗಿದಿರುವುದು ಅವರಲ್ಲಿ ಹತಾಶೆಗೆ ಕಾರಣವಾಗುತ್ತದೆ.

►ಸ್ವಂತದ ಕೆಲಸಗಳು ಕಷ್ಟವಾದರೆ

ಟೂಥ್‌ಪೇಸ್ಟ್ ಅಥವಾ ಇತರ ಟಾಯ್ಲೆಟರಿ ಸಾಧನಗಳನ್ನು ತೆರೆಯಲು ನಿಮ್ಮ ಮಗುವಿಗೆ ಸಾಧ್ಯವಾಗುತ್ತಿಲ್ಲವಾದರೆ, ಸೋಪ್ ಕಂಟೇನರ್‌ನ ಪಂಪ್ ಒತ್ತುವುದು ಸಮಸ್ಯೆಯಾಗುತ್ತಿದ್ದರೆ ಅಥವಾ ಕೈಗಳನ್ನು ತೊಳೆಯಲು ನಲ್ಲಿಯನ್ನು ತಿರುಗಿಸಲು ಕಷ್ಟವಾಗುತ್ತಿದ್ದರೆ ಅದು ದುರ್ಬಲ ಕೈಗಳನ್ನು ಸೂಚಿಸುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X