Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ವಿಶ್ವಕಪ್ ನೆನಪು: ಐದು ಟಾಪ್ ಸ್ಕೋರರ್...

ವಿಶ್ವಕಪ್ ನೆನಪು: ಐದು ಟಾಪ್ ಸ್ಕೋರರ್ ಗಳು

ವಾರ್ತಾಭಾರತಿವಾರ್ತಾಭಾರತಿ26 May 2019 10:05 AM IST
share

ಹೊಸದಿಲ್ಲಿ, ಮೇ 25: ಈ ವರ್ಷದ ವಿಶ್ವಕಪ್‌ನಲ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ ತಂಡವೊಂದರಿಂದ 500 ರನ್ ದಾಖಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇಂಗ್ಲೆಂಡ್‌ನ ವಾತಾವರಣದಲ್ಲಿ ಫಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ಆ್ಯಂಡ್ರೆ ರಸೆಲ್, ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್ ಹಾಗೂ ಇತರರು ಅಬ್ಬರಿಸುವ ಸಾಧ್ಯತೆಯಿದೆ.

ವಿಶ್ವಕಪ್‌ನಲ್ಲಿ ಈ ತನಕ ಗರಿಷ್ಠ ಸ್ಕೋರ್ ಗಳಿಸಿದ ಅಗ್ರ-ಐವರು ದಾಂಡಿಗರ ವಿವರ ಇಂತಿದೆ.

►ಸಚಿನ್ ತೆಂಡುಲ್ಕರ್(ಭಾರತ)

ರನ್: 2,278, ಪಂದ್ಯಗಳು: 45, ಇನಿಂಗ್ಸ್ 44

ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ಗರಿಷ್ಠ ಶತಕ, ಗರಿಷ್ಠ ಅರ್ಧಶತಕ ಹಾಗೂ ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ತೆಂಡುಲ್ಕರ್ 1992ರಿಂದ 2011ರ ತನಕ ಆಡಿರುವ ಎಲ್ಲ ಆರು ವಿಶ್ವಕಪ್‌ಗಳಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದ್ದರು. 2011ರಲ್ಲಿ ಕೊನೆಗೂ ವಿಶ್ವಕಪ್ ಗೆಲ್ಲುವ ಕನಸು ಈಡೇಸಿಕೊಂಡರು. 1996ರಲ್ಲಿ ಕೀನ್ಯ ವಿರುದ್ಧ ಔಟಾಗದೆ 127 ರನ್ ಗಳಿಸಿ ವಿಶ್ವಕಪ್‌ನಲ್ಲಿ ಮೊದಲ ಶತಕವನ್ನು ಸಿಡಿಸಿದ್ದ ತೆಂಡುಲ್ಕರ್ ಇನ್ನೂ 5 ಶತಕಗಳನ್ನು ಗಳಿಸಿದ್ದು, 45 ವಿಶ್ವಕಪ್ ಪಂದ್ಯಗಳಲ್ಲಿ 2,278 ರನ್ ಗಳಿಸಿದ್ದಾರೆ. 15 ಅರ್ಧಶತಕ ವಿಶ್ವಕಪ್‌ನಲ್ಲಿ ದಾಖಲೆಯಾಗಿ ಉಳಿದಿದೆ. 2003ರ ವಿಶ್ವಕಪ್‌ನಲ್ಲಿ ಆಡಿರುವ 11 ಪಂದ್ಯಗಳ ಪೈಕಿ ತೆಂಡುಲ್ಕರ್ 673 ರನ್ ಗಳಿಸಿದ್ದರು. ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ದಾಖಲಾದ ಗರಿಷ್ಠ ರನ್ ಇದಾಗಿದೆ.

►ರಿಕಿ ಪಾಂಟಿಂಗ್(ಆಸ್ಟ್ರೇಲಿಯ)

ರನ್: 1,743, ಪಂದ್ಯಗಳು: 46, ಇನಿಂಗ್ಸ್: 42

ವಿಶ್ವಕಪ್‌ನ ಓರ್ವ ಯಶಸ್ವಿ ನಾಯಕನಾಗಿರುವ ರಿಕಿ ಪಾಂಟಿಂಗ್ ಎರಡು ವಿಶ್ವಕಪ್‌ನ್ನು ಜಯಿಸಿ ವೆಸ್ಟ್ ಇಂಡೀಸ್‌ನ ದಂತಕತೆ ಕ್ಲೈವ್ ಲಾಯ್ಡ್‌ರೊಂದಿಗೆ ದಾಖಲೆ ಹಂಚಿಕೊಂಡಿದ್ದಾರೆ. ಈ ಬಾರಿ ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ವಿಶ್ವಕಪ್‌ನಲ್ಲಿ ಆಡಿರುವ 46 ಪಂದ್ಯಗಳಲ್ಲಿ ಒಟ್ಟು 1,743 ರನ್ ಗಳಿಸಿರುವ ಪಾಂಟಿಂಗ್ 5 ಶತಕ ಹಾಗೂ ಆರು ಅರ್ಧಶತಕಗಳನ್ನು ಸಿಡಿಸಿದ್ದರು. ಪಾಂಟಿಂಗ್ ವಿಶ್ವಕಪ್‌ನಲ್ಲಿ ಗರಿಷ್ಠ ಪಂದ್ಯಗಳನ್ನು ಆಡಿದ ಏಕೈಕ ಆಟಗಾರ.

1996ರಿಂದ 2011ರ ತನಕ ಐದು ಆವೃತ್ತಿ ವಿಶ್ವಕಪ್‌ಗಳಲ್ಲಿ ಆಡಿದ್ದರು. 2007ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆಗ ಅವರು 11 ಪಂದ್ಯಗಳಲ್ಲಿ 539 ರನ್ ಗಳಿಸಿದ್ದರು. ಈ ಮೂಲಕ ಆಸ್ಟ್ರೇಲಿಯ 4ನೇ ಬಾರಿ ವಿಶ್ವಕಪ್ ಜಯಿಸಲು ನೆರವಾಗಿದ್ದರು.

►ಕುಮಾರ ಸಂಗಕ್ಕರ (ಶ್ರೀಲಂಕಾ)

ರನ್: 1,532, ಪಂದ್ಯಗಳು: 37, ಇನಿಂಗ್ಸ್: 35

 ದ್ವೀಪರಾಷ್ಟ್ರದ ಓರ್ವ ಶ್ರೇಷ್ಠ ದಾಂಡಿಗ ಸಂಗಕ್ಕರ ವಿಶ್ವಕಪ್‌ನಲ್ಲಿ ಆಡಿದ್ದ 37 ಪಂದ್ಯಗಳಲ್ಲಿ 1,532 ರನ್ ಗಳಿಸಿದ್ದು, ಪಾಂಟಿಂಗ್‌ಗಿಂತಲೂ ಉತ್ತಮ ಸರಾಸರಿ(56.74)ಕಾಯ್ದುಕೊಂಡಿದ್ದರು. 4 ವಿಶ್ವಕಪ್‌ಗಳಲ್ಲಿ ಆಡಿರುವ ಅವರು ಐದು ಶತಕಗಳನ್ನು ಸಿಡಿಸಿದ್ದರು. 2015ರಲ್ಲಿ ಸತತ 3 ಶತಕಗಳನ್ನು ಸಿಡಿಸಿದ್ದ ಅವರು ಇನ್ನೊಂದು ಶತಕ ಗಳಿಸಿ ತನ್ನದೇ ದಾಖಲೆ ಉತ್ತಮಪಡಿಸಿಕೊಂಡಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಸತತ 4 ಶತಕ ಸಿಡಿಸಿದ್ದರು. ಕೇವಲ 7 ಪಂದ್ಯಗಳಲ್ಲಿ 108.20ರ ಸರಾಸರಿಯಲ್ಲಿ 541 ರನ್ ಗಳಿಸಿದ್ದರು. ಲಂಕಾದ ಮಾಜಿ ವಿಕೆಟ್‌ಕೀಪರ್ ಸಂಗಕ್ಕರ 7 ಬಾರಿ ಅರ್ಧಶತಕವನ್ನು ಸಿಡಿಸಿದ್ದರು.

►ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)

ರನ್: 1,225, ಪಂದ್ಯಗಳು: 34, ಇನಿಂಗ್ಸ್: 33

ಕ್ರಿಕೆಟ್‌ನ ಓರ್ವ ಶ್ರೇಷ್ಠ ದಾಂಡಿಗ ಲಾರಾ 1992ರಿಂದ 2007ರ ತನಕ ಐದು ಬಾರಿ ವಿಶ್ವಕಪ್‌ನಲ್ಲಿ ಆಡಿದ್ದರೂ ಟ್ರೋಫಿ ಜಯಿಸದ ನೋವು ಅವರನ್ನು ಕಾಡಿತ್ತು. 34 ಪಂದ್ಯಗಳಲ್ಲಿ 1,225 ರನ್ ಗಳಿಸಿದ್ದರು. ಇದರಲ್ಲಿ 2 ಶತಕ ಹಾಗೂ 7 ಅರ್ಧಶತಕಗಳಿವೆ. ತನ್ನ ಮೊದಲ ವಿಶ್ವಕಪ್‌ನಲ್ಲಿ 8 ಪಂದಗಳಲ್ಲಿ 333 ರನ್ ಗಳಿಸಿದ್ದರು. ಅವರ ಅವಧಿಯಲ್ಲಿ ವಿಂಡೀಸ್ 1996ರಲ್ಲಿ ಮಾತ್ರ ಸೆಮಿಫೈನಲ್‌ಗೆ ತಲುಪಿತ್ತು.

►ಎಬಿಡಿ ವಿಲಿಯರ್ಸ್ (ದ.ಆಫ್ರಿಕ)

ರನ್: 1,207, ಪಂದ್ಯಗಳು: 23, ಇನಿಂಗ್ಸ್: 22

 ವಿಶ್ವಕಪ್‌ನಲ್ಲಿ ಶ್ರೇಷ್ಠ ಬ್ಯಾಟಿಂಗ್ ಸರಾಸರಿ ಹೊಂದಿರುವ ಎಬಿಡಿ ವಿಲಿಯರ್ಸ್ 2007ರ ಆವೃತ್ತಿಯ ವಿಶ್ವಕಪ್‌ನಲ್ಲಿ ಆಡುವುದರಿಂದ ವಂಚಿತರಾಗಿದ್ದರು. 2018ರ ಮೇನಲ್ಲಿ ನಿವೃತ್ತಿಯಾಗಿದ್ದರು. ವಿಶ್ವಕಪ್‌ನಲ್ಲಿ 23 ಪಂದ್ಯಗಳನ್ನು ಆಡಿದ್ದ ಅವರು 63.52ರ ಸರಾಸರಿಯಲ್ಲಿ 1,207 ರನ್ ಗಳಿಸಿದ್ದರು. ದ.ಆಫ್ರಿಕದ ಪರ 3 ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿದ್ದ ಅವರು 4 ಶತಕ ಹಾಗೂ 6 ಅರ್ಧಶತಕ ದಾಖಲಿಸಿದ್ದರು. 2015ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ66 ಎಸೆತಗಳಲ್ಲಿ 162 ರನ್ ಗಳಿಸಿ ಸ್ಮರಣೀಯ ಪ್ರದರ್ಶನ ನೀಡಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 150 ಪ್ಲಸ್ ಸ್ಕೋರ್ ಗಳಿಸಿದ್ದ ಅವರು ದ.ಆಫ್ರಿಕ 5ಕ್ಕೆ 408 ರನ್ ಗಳಿಸಲು ನೆರವಾಗಿದ್ದರು. 2015ರ ವಿಶ್ವಕಪ್‌ನಲ್ಲಿ 8 ಪಂದ್ಯಗಳಲ್ಲಿ 482 ರನ್ ಗಳಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X