ಟಯರ್ ಪ್ಯಾಕ್ಟರಿಗೆ ಆಕಸ್ಮಿಕ ಬೆಂಕಿ: 15 ಲಕ್ಷ ರೂ. ಮೌಲ್ಯದ ವಸ್ತು ನಾಶ

ಹಾಸನ: ಟಯರ್ ಪ್ಯಾಕ್ಟರಿಗೆ ಆಕಸ್ಮಿಕ ಬೆಂಕಿ ತಗುಲಿ 15 ಲಕ್ಷ ರೂ. ಮೌಲ್ಯದ ಟಯರ್ ನಷ್ಟವಾದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ನಗರದ ಹೊರ ವಲಯದ ಕೈಗಾರಿಕ ಪ್ರದೇಶದಲ್ಲಿರುವ ಟಯರ್ ಪ್ಯಾಕ್ಟರಿಗೆ ತಡರಾತ್ರಿ ಬೆಂಕಿ ತಗುಲಿದ್ದು, ಪ್ಯಾಕ್ಟರಿ ಸಂಪೂರ್ಣ ಸುಟ್ಟುಹೋಗಿದೆ.
'ಎಂದಿನಂತೆ ಕೆಲಸ ಮುಗಿಸಿ ಪ್ಯಾಕ್ಟರಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ಅಂದು ಗಾಳಿ, ಸಿಡಿಲು ಸಹಿತಿ ಮಳೆಯಾಗಿದೆ. ಹೇಗೆ ಬೆಂಕಿ ತಗುಲಿದೆ ಎಂಬುದು ತಿಳಿದಿಲ್ಲ. ಬೆಂಕಿ ತಗುಲಿ 350ಕ್ಕೂ ಹೆಚ್ಚು ಟ್ರಕ್ ಲಾರಿಯ ಟಯರ್ ಗಳು ಸುಟ್ಟು ಕರಕಲಾಗಿದೆ. ಒಳಗಿದ್ದ ಉಪಕರಣ ಕೂಡ ಸುಟ್ಟುಹೋಗಿದ್ದು, ಬೆಂಕಿ ನಂದಿಸಲು ತಡರಾತ್ರಿಯಲ್ಲಿ ನಾಲ್ಕು ಅಗ್ನಿಶಾಮಕ ದಳ ಹರಸಾಹಸ ಪಡಬೇಕಾಯಿತು. ಬೆಂಕಿ ಪೂರ್ಣ ಹಾರಿಸುವಷ್ಟರಲ್ಲಿ ಬಹುತೇಕ ಟಯರ್ ಹಾಗೂ ವಸ್ತುಗಳು ಸುಟ್ಟು ಹೋಗಿತ್ತು ಎಂದು ಪ್ಯಾಕ್ಟರಿ ಮಾಲಕ ಜಲೀಲ್ ಅಹಮದ್ ತಿಳಿಸಿದ್ದಾರೆ.
Next Story





