ಮಣಿಪಾಲದಲ್ಲಿ ಬೆಂಗಳೂರಿನ ಸಾಪ್ಟ್‌ವೇರ್ ಇಂಜಿನಿಯರ್ ಮೃತ್ಯು
ಮಣಿಪಾಲ, ಮೇ 26: ಬೆಂಗಳೂರಿನ ಖಾಸಗಿ ಕಂಪೆನಿಯ ಸಾಪ್ಟ್‌ವೇರ್ ಇಂಜಿನಿಯರೊಬ್ಬರು ವಾಂತಿ ಮಾಡಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಮಣಿಪಾಲದಲ್ಲಿ ಮೇ 25ರಂದು ಸಂಜೆ 7ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಗುಲ್ಬರ್ಗಾ ಜಿಲ್ಲೆಯ ವಾಡಿ ಜಂಕ್ಷನ್ ನಿವಾಸಿ ಸತ್ಯನಾರಾಯಣ ಮಂತ್ರಿ ಎಂಬವರ ಮಗ ನವನೀತ್ ಮಂತ್ರಿ ಎಂದು ಗುರುತಿಸಲಾಗಿದೆ. ಇವರು ಮೇ 23ರಂದು ತಮ್ಮ ಸಹೊದ್ಯೋಗಿ ಶ್ವೇತಾ ಎಂಬವರ ಮದುವೆಗೆ ಉಡುಪಿಗೆ ಬಂದಿದ್ದು, ಮಣಿಪಾಲದ ಲಾಡ್ಜ್ನಲ್ಲಿ ತನ್ನ ಇತರ ಮೂವರು ಸ್ನೇಹಿತರೊಂದಿಗೆ ರೂಂ ಮಾಡಿ ಉಳಕೊಂಡಿದ್ದರು.
ಮೇ 24ರಂದು ಸಾಲಿಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿ ವಾಪಾಸ್ ರೂಂಗೆ ಬಂದು ಸಂಜೆ ಮಲ್ಪೆಬೀಚ್ಗೆ ಹೋಗಿದ್ದರು. ಅಲ್ಲಿಂದ ಬಂದು ರೂಂನಲ್ಲಿ ಸ್ನೇಹಿತರೊಂದಿಗೆ ಮಲಗಿದ್ದ ನವನೀತ್ ಮಂತ್ರಿ ರಾತ್ರಿ ವೇಳೆ ವಾಂತಿ ಮಾಡಿ ಅಸ್ವಸ್ಥಗೊಂಡಿದ್ದರು. ಅವರನ್ನು ಮೇ 25ರಂದು ಬೆಳಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





