ಬ್ಯಾಗ್ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಬೆಂಗಳೂರು, ಮೇ 26: ಆಟೊದಲ್ಲಿ ಮರೆತು ಬಿಟ್ಟು ಹೋಗಿದ್ದ ಬ್ಯಾಗನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ ಶ್ರೀಕಂಠಯ್ಯ ಅವರನ್ನು ನಗರ ಪೊಲೀಸ್ ಆಯುಕ್ತರು ಅಭಿನಂದಿಸಿದ್ದಾರೆ.
ಶನಿವಾರ ಪ್ರಯಾಣಿಕರೊಬ್ಬರು ಮಹದೇವಪುರದ ಹತ್ತಿರದ ಮಾಲ್‌ನಿಂದ ಆಟೊ ರಿಕ್ಷಾಯೊಂದರಲ್ಲಿ ತೆರಳಿ, ಸುಮಾರು ಒಂದು ಕಿಲೋ ಮೀಟರ್ ದೂರದ ಬಸ್ ನಿಲ್ದಾಣದಲ್ಲಿ ಇಳಿದು ಹೋಗಿದ್ದರು. ಸಲ್ಪ ಸಮಯದ ನಂತರ ಆಟೊ ಚಾಲಕ ಶ್ರೀಕಂಠಯ್ಯ ಅವರು ಹಿಂದೆ ಗಮನಿಸಿದಾಗ ಹಿಂಬದಿ ಸೀಟಿನಲ್ಲಿ ಒಂದು ಬ್ಯಾಗ್ ಕಂಡುಬಂದಿದೆ. ನಂತರ ಬ್ಯಾಗ್ ಅನ್ನು ಪೊಲೀಸ್ ಆಯುಕ್ತರ ಕಚೇರಿಗೆ ತಲುಪಿಸಿದ್ದು, ಇದನ್ನು ಪೊಲೀಸ್ ಸಿಬ್ಬಂದಿ ಗಮನಿಸಿದಾಗ, 4 ಎಟಿಎಂ ಕಾರ್ಡ್, 4 ಶಾಪಿಂಗ್ ಕಾರ್ಡ್ ಮತ್ತು 3 ಗುರುತಿನ ಚೀಟಿ ಪತ್ತೆಯಾಗಿದೆ. ಬಳಿಕ ಪೊಲೀಸರು, ವಾರಸುದಾರರಾದ ಭಕ್ತಿಮಂತ್ರಿ ಅವರಿಗೆ ಬ್ಯಾಗ್‌ಅನ್ನು ಒಪ್ಪಿಸಿದ್ದಾರೆ.
ಆಟೊ ಚಾಲಕ ಶ್ರೀಕಂಠಯ್ಯ ಅವರ ಪ್ರಾಮಾಣಿಕತೆಯನ್ನು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಪ್ರಶಂಸಿಸಿದ್ದಾರೆ.
Next Story





