ಉಡುಪಿ: ಜುಗಾರಿ ಆಡುತ್ತಿದ್ದ 9 ಮಂದಿಯ ಬಂಧನ
ಉಡುಪಿ, ಮೇ 27: ಆದಿಉಡುಪಿ ಎ.ಪಿ.ಎಂ.ಸಿ. ಮಾರ್ಕೆಟ್ ಹಿಂಭಾಗ ಮೇ 26ರಂದು ನಸುಕಿನ ವೇಳೆ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಒಂಭತ್ತು ಮಂದಿಯನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸಂತೆಕಟ್ಟೆ ಅಶೋಕ್‌ನಗರದ ಮುಸ್ತಾಫ್(45), ಮಧ್ವನಗರದ ರಾಕೇಶ್(23), ಅರವಿಂದ(51), ಅಜೀಶ್(26), ಎಸ್.ಮೋಹನ(29), ಮೂಡಬೆಟ್ಟುವಿನ ವಿಷ್ಣು (28), ಸುರೇಂದ್ರ(34), ನಿಟ್ಟೂರು ಹನುಮಂತ ನಗರದ ಅಕ್ಷಯ್ (22), ನಿಟ್ಟೂರಿನ ರವಿ ಕುಮಾರ್(29) ಬಂಧಿತ ಆರೋಪಿಗಳು. ಇವರಿಂದ 11,620ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





