ಶ್ರೀ ಮಹಾವೀರ ಕಾಲೇಜಿನಲ್ಲಿ ಎನ್‍ಸಿಸಿ ಶಿಬಿರ ಆರಂಭ

ಮೂಡುಬಿದಿರೆ : 18ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಮಂಗಳೂರು ಇದರ ವಾರ್ಷಿಕ ತರಬೇತಿ ಶಿಬಿರವು ಭಾನುವಾರ ಶ್ರೀ ಮಹಾವೀರ ಕಾಲೇಜಿನಲ್ಲಿ ಆರಂಭಗೊಂಡಿತು.
18ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿಯ ಕಮಾಂಡಿಗ್ ಆಫೀಸರ್ ಕರ್ನಲ್ ಮನೋಜ್ ವಿ.ಯು ಶಿಬಿರವನ್ನು ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ಚಂದ್ರಶೇಖರ ದೀಕ್ಷಿತ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಎಸ್‍ಸಿಸಿಯು ಶಿಸ್ತು ಮತ್ತು ನಾಯಕತ್ವದ ಗುಣ ಬೆಳೆಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಈ ಶಿಬಿರವು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಡೆಪ್ಯೂಟಿ ಕ್ಯಾಂಪ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಗ್ರೇಸಿಯನ್ ಸಿಕ್ವೇರಾ ಅವರು ಕ್ಯಾಂಪ್‍ನ ರೂಪುರೇಷೆಗಳನ್ನು ವಿವರಿಸಿದರು.
ಕಾಲೇಜಿನ ಎನ್‍ಸಿಸಿ ಅಧಿಕಾರಿ ಮೇಜರ್ ಡಾ/ ರಾಧಾಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮೇ 25ರಿಂದ ಜೂನ್ 3ರವರೆಗೆ 10ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ 18ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿಗೆ ಒಳಪಟ್ಟ ದ.ಕ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಆರ್ಮಿ ವಿಭಾಗದ ಸುಮಾರು 600 ಕೆಡೆಟ್‍ಗಳು ಮತ್ತು 25 ಅಧಿಕಾರಿಗಳು ಭಾಗವಹಿಸಲಿದ್ದಾರೆ.







