ಪೆಸ್ಯಾಟ್‌ನಲ್ಲಿ ರ‌್ಯಾಂಕ್ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ
ಬೆಂಗಳೂರು, ಮೇ 26: ಪಿಇಎಸ್ ವಿಶ್ವವಿದ್ಯಾಲಯದಿಂದ ನಡೆಸಿದ ಸಿಇಟಿ ಮಾದರಿಯ ಪೆಸ್ಯಾಟ್ ಸಾಮಾನ್ಯ ಪರೀಕ್ಷೆಯಲ್ಲಿ ಬಿ.ಟೆಕ್ ವೃತ್ತಿಪರ ಶಿಕ್ಷಣದಲ್ಲಿ ರ‌್ಯಾಂಕ್ ಪಡೆದಿದ ಮೂವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಪಿಇಎಸ್ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಇಎಸ್ ವಿವಿ ಕುಲಪತಿ ಮತ್ತು ಪಿಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ. ಡಾ. ಎಂ.ಆರ್.ದೊರೆಸ್ವಾಮಿ ರ‌್ಯಾಂಕ್ ಪಡೆದವರಿಗೆ ಪ್ರವೇಶಪತ್ರಗಳನ್ನು ಪ್ರದಾನ ಮಾಡಿದರು.
ಪೆಸ್ಯಾಟ್‌ನಲ್ಲಿ ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ನಿಹಾಲ್ ಜಾನ್ ಜಾರ್ಜ್ ಮೊದಲ ರ‌್ಯಾಂಕ್, ಸೇಂಟ್ ಜೋಸೆಫ್ ಹೈಸ್ಕೂಲ್‌ನ ಆರ್.ಶೃತಿ ಎರಡನೆ ರ‌್ಯಾಂಕ್ ಹಾಗೂ ಜಯನಗರದ ನೆಹರು ಸ್ಮಾರಕ ವಿದ್ಯಾಲಯದ ನಕುಲ್ ನೀರಜೆ ಮೂರನೇ ಸ್ಥಾನ ಪಡೆದಿದ್ದರು.
ದೇಶದಾದ್ಯಂತ 16,200 ದ್ಯಾರ್ಥಿಗಳು ಬಿ-ಟೆಕ್ ವೃತ್ತಿಪರ ಶಿಕ್ಷಣಕ್ಕೆ ಪೆಸ್ಯಾಟ್ ಪರೀಕ್ಷೆಯಲ್ಲಿ ಭಾಗವಸಿದ್ದರು. ದೇಶದ 35 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆದಿತ್ತು. ಪೆಸ್ಯಾಟ್ ನ ಮೊದಲನೇ ಕೌನ್ಸಿಲಿಂಗ್ ಜೂನ್ 1 ಮತ್ತು 2 ರಿಂದ ನಡೆಯಲಿದೆ. ಪಿಇಎಸ್ ವಿವಿ ಬಿ.ಟೆಕ್ ನ ಎಲ್ಲ ವೃತ್ತಿಪರ ಶಿಕ್ಷಣಕ್ಕೆ ನಡೆಸಲಿದೆ ಎಂದು ಅಧ್ಯಕ್ಷ ಡಾ.ಎಂ.ಆರ್.ದೊರೆಸ್ವಾಮಿ ತಿಳಿಸಿದ್ದಾರೆ.
2018-19ನೇ ಸಾಲಿನಲ್ಲಿ 11 ವಿದ್ಯಾರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಪ್ರತಿ ವರ್ಷ 40 ಲಕ್ಷ ರೂಪಾಯಿ ಗಳ ವೇತನವನ್ನು ಪಡೆಯುತ್ತಿದ್ದಾರೆ. 2019ರ ಅಂಕಿ -ಅಂಶಗಳ ಪ್ರಕಾರ ಪ್ರೊ. ಸಿ.ಎನ್.ಆರ್.ರಾವ್ ಮೆರಿಟ್ ಸ್ಕಾಲರ್ ಶಿಫ್, ಇ.ಸಿ. ಕ್ಯಾಂಪಸ್, ಪ್ರೊ.ಎಂ.ಆರ್.ಡಿ.ಮೆರಿಟ್ ಸ್ಕಾಲರ್ ಶಿಪ್, (ಆರ್. ಆರ್.ಕ್ಯಾಂಪಸ್- ಇ.ಸಿ. ಕ್ಯಾಂಪಸ್) ಡಿಸ್ಟಿಂಕ್ಷನ್ (ಆರ್.ಆರ್. ಕ್ಯಾಂಪಸ್- ಇ.ಸಿ. ಕ್ಯಾಂಪಸ್ ) ಅವಾರ್ಡ್ ನಲ್ಲಿ 5,038 ದ್ಯಾರ್ಥಿಗಳಿಗೆ 3 ಕೋಟಿ 54 ಲಕ್ಷ 39 ಸಾರದ 437 ರೂ. ವನ್ನು ವಿತರಿಸಲಾಗಿದೆ ಎಂದು ದೊರೆಸ್ವಾಮಿ ಹೇಳಿದ್ದಾರೆ.







