ಪಾಂಬೂರು ಚರ್ಚ್‌ನ ಧರ್ಮಗುರುಗಳಿಗೆ ಸನ್ಮಾನ, ಶುಭವಿದಾಯ

ಶಿರ್ವ, ಮೇ 27: ಬಂಟಕಲ್ಲು ಪಾಂಬೂರು ಪವಿತ್ರ ಶಿಲುಬೆಯ ದೇವಾ ಲಯದಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿ ಕಾರ್ಕಳ ತಾಲೂಕಿನ ಮಿಯಾರು ಧರ್ಮಕೇಂದ್ರಕ್ಕೆ ವರ್ಗಾವಣೆಗೊಂಡ ಪ್ರಧಾನ ಧರ್ಮಗುರು ರೆ.ಫಾ.ಪಾವ್ಲ್ ರೇಗೊ ಅವರಿಗೆ ಚರ್ಚ್ ಪಾಲನಾ ಮಂಡಳಿ, ವಿವಿಧ ಅಯೋಗಗಳು, 14 ವಾರ್ಡ್‌ಗಳು ಹಾಗೂ ಧರ್ಮಕೇಂದ್ರದ ವಿವಿಧ ಸಂಘ ಟನೆಗಳ ವತಿಯಿಂದ ಸನ್ಮಾನ ಹಾಗೂ ಬೀಳ್ಕೋಡುಗೆ ಸಮಾರಂವನ್ನು ರವಿವಾರ ಏರ್ಪಡಿಸಲಾಗಿತ್ತು.
ಧರ್ಮಕೇಂದ್ರದ ಸಭಾಂಗಣದಲ್ಲಿ ನಡೆದ ಸಮಾರಂದ ಅಧ್ಯಕ್ಷತೆಯನ್ನು ಪಾಲನಾ ಮಂಡಳಿ ಉಪಾಧ್ಯಕ್ಷ ಪ್ರಕಾಶ್ ನೊರೋನ್ನಾ ವಹಿಸಿದ್ದರು. ವಿವಿಧ ಸಂಘಟನೆಗಳು ಧರ್ಮಗುರುಗಳನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.
ಗೌರವ ಸ್ವೀಕರಿಸಿದ ರೆ.ಫಾ.ಪಾವ್ಲ್ ರೇಗೋ ಮಾತನಾಡಿ, ಧನಾತ್ಮಕ ಚಿಂತನೆ ಮತ್ತು ಮನೋಭಾವ ಬೆಳೆಸಿಕೊಂಡಾಗ ದೇವರ ಆಶೀರ್ವಾದ ದೊರೆಯುತ್ತದೆ. ಪರಸ್ಪರ ಸುಧಾರಿಸಿಕೊಂಡು ಹೋಗುವುದೇ ಸಾಧನೆ. ಯಾರೊಂದಿಗೂ ಪರಸ್ಪರ ಹೋಲಿಕೆ ಮಾಡುವುದನ್ನು ಬಿಟ್ಟು, ಸತ್ಯ, ನೀತಿ, ಪ್ರಾಮಾಣಿಕತೆ,ಬೆಳೆಸಿಕೊಂಡು ಕುಟುಂಬದಲ್ಲಿ ಒಗ್ಗಟ್ಟನ್ನು ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಉಡುಪಿ ಕೆಥೊಲಿಕ್ ಧರ್ಮಪ್ರಾಂತದ 18 ಆಯೋಗಗಳ ಸಂಚಾಲಕ ರೆ.ಫಾ.ಹೆರಾಲ್ಡ್ ಪಿರೇರಾ ಮಾತನಾಡಿದರು. ಲೂಕಾಸ್ ಡಿಸೋಜ, ಗ್ಲಾಡಿಸ್ ಫೆರ್ನಾಂಡಿಸ್ ಅಭಿನಂದನಾ ಭಾಷಣ ಮಾಡಿ ದರು. ಪಾಲನಾ ಮಂಡಳಿ ಕಾರ್ಯದರ್ಶಿ ಅಸುಂತಾಡಿಸೋಜ ಸನ್ಮಾನಪತ್ರ ವಾಚಿಸಿದರು.
ಆಯೋಗಗಳ ಸಂಚಾಲಕಿ ಜೆಸಿಂತಾ ಡಿಸೋಜ, ಧರ್ಮಗುರುಗಳ ಸಹೋದರಿಯರಾದ ಸಿಸಿಲಿಯಾ ರೇಗೊ, ತೆರೆಜಾ ರೇಗೋ, ಎಲಿಜಾ ರೇಗೊ, ಎಮ್ಮೀ ರೇಗೊ, ಪಾ.ಸ್ಟೀವನ್, ಫಾ.ಪ್ಯಾಟ್ರಿಕ್, ಫಾ.ಹೆನ್ರಿ, ಡಾ.ವಿನ್ಸೆಂಟ್ ಆಳ್ವ, ಶಿರ್ವ ಗ್ರಾ.ಪಂ. ಸದಸ್ಯ ಕೆ.ಆರ್.ಪಾಟ್ಕರ್, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಹಿರಿಯರಾದ ವೌರಿಸ್ ನೋರೋನ್ನ ಉಪಸ್ಥಿತರಿದ್ದರು.
ಫೆಡ್ರಿಕ್ ಡಿಸೋಜ ಸ್ವಾಗತಿಸಿದರು. ಮೇಬಲ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.ವಾಲೆಟ್ ಕೆಸ್ತಲಿನೋ ವಂದಿಸಿದರು.







